WHO ಪಟ್ಟಿಯಲ್ಲಿಲ್ಲ ಕೊವ್ಯಾಕ್ಸಿನ್‌, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಿರಿಕಿರಿ

'ಕೊವ್ಯಾಕ್ಸಿನ್‌' ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿಯಲ್ಲಿ ಬಳಕೆಯ ಔಷಧಗಳ ಪಟ್ಟಿಯಲ್ಲಿ ಇಲ್ಲವಾಗಿರುವುದರಿಂದ, ಅದನ್ನು ಪಡೆದವರಿಗೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ.

WHO ಪಟ್ಟಿಯಲ್ಲಿಲ್ಲ ಕೊವ್ಯಾಕ್ಸಿನ್‌, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಿರಿಕಿರಿ
Linkup
ಹೊಸದಿಲ್ಲಿ: ದೇಶೀಯ ಕೊರೊನಾ ನಿರೋಧಕ ಲಸಿಕೆ ಎಂಬ ಖ್ಯಾತಿಯ '' (ಡಬ್ಲ್ಯೂಎಚ್‌ಒ)ಯ ತುರ್ತು ಪರಿಸ್ಥಿತಿಯಲ್ಲಿ ಬಳಕೆಯ ಔಷಧಗಳ ಪಟ್ಟಿಯಲ್ಲಿ ಇಲ್ಲವಾಗಿರುವ ಕಾರಣ, ಅದನ್ನು ಪಡೆದವರಿಗೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಈ ಬಗ್ಗೆ ಅನೇಕ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಉಂಟಾಗುತ್ತಿರುವ ಅನನುಕೂಲತೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಜಗತ್ತಿನಾದ್ಯಂತ 10ಕ್ಕೂ ಕಡಿಮೆ ರಾಷ್ಟ್ರಗಳು ಮಾತ್ರ ಕೊವ್ಯಾಕ್ಸಿನ್‌ ಲಸಿಕೆಯನ್ನು ಕೊರೊನಾ ನಿರೋಧಕತೆಗೆ ಪರಿಣಾಮಕಾರಿ ಎಂದು ಪರಿಗಣಿಸಿವೆ. ಜತೆಗೆ ತಮ್ಮ ದೇಶಕ್ಕೆ ಬರುವವರ ಲಸಿಕಾ ಪ್ರಮಾಣಪತ್ರದಲ್ಲಿ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಿವೆ. ಆದರೆ ಬಹುತೇಕ ವಿದೇಶಿ ರಾಷ್ಟ್ರಗಳ ಪ್ರಕಾರ 'ಕೋವಿಶೀಲ್ಡ್‌' ಮಾತ್ರ ಮಾನ್ಯತೆ ಪಡೆದಿರುವ ಲಸಿಕೆಯಾಗಿದೆ. ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಭಾರತದಿಂದ ಪ್ರಯಾಣಿಸುವವರ ಆಗಮನಕ್ಕೆ ಅವಕಾಶ ನೀಡಲಾಗಿದೆ. ಆದರೆ ಇಲ್ಲಿನ ಏರ್‌ಪೋರ್ಟ್‌ಗಳಲ್ಲಿ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಡಬ್ಲ್ಯೂಎಚ್‌ಒ ಪಟ್ಟಿಯನ್ನು ಅನುರಿಸಲಾಗುತ್ತಿದ್ದು , ಅದರಲ್ಲಿ ಕೊವ್ಯಾಕ್ಸಿನ್‌ ಹೆಸರಿಲ್ಲ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಚೀನಾದ ಸಿನೊಫಾರ್ಮ ಡಬ್ಲ್ಯೂಎಚ್‌ಒ ಪಟ್ಟಿಯಲ್ಲಿದೆ. ಜತೆಗೆ ಫೈಜರ್‌ ಲಸಿಕೆ, ಜಾನ್ಸನ್‌ ಕಂಪನಿ ಲಸಿಕೆಗಳಿಗೆ ಮಾನ್ಯತೆ ನೀಡಲಾಗಿದೆ. ಎರಡೂ ಡೋಸ್‌ ಪಡೆದರೆ ಮಾತ್ರ ಪರಿಣಾಮಕಾರಿ ಕೊರೊನಾ ನಿರೋಧಕ ಲಸಿಕೆಗಳ ಎರಡೂ ಡೋಸ್‌ ಪಡೆದಿದ್ದರೆ ಮಾತ್ರವೇ ರೂಪಾಂತರಿ ವೈರಾಣು ವಿರುದ್ಧ ಹೋರಾಟಕ್ಕೆ ಅಗತ್ಯ ರೋಗನಿರೋಧಕತೆ ಇರುತ್ತದೆ. ಇಲ್ಲವಾದಲ್ಲಿ ನಿರೀಕ್ಷಿತ ಚೇತರಿಕೆ ಕಷ್ಟಸಾಧ್ಯ ಎಂದು ಬ್ರಿಟನ್‌ ಆರೋಗ್ಯ ಇಲಾಖೆ ನಡೆಸಿರುವ ಹೊಸ ಸಂಶೋಧನೆಯ ವರದಿ ಹೇಳಿದೆ. ಮೂಗಿನ ಲಸಿಕೆಯ ಹೊಸ ನಿರೀಕ್ಷೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಹನಿಗಳಂತೆ ಮೂಗಿಗೆ ಹಾಕುವ ಲಸಿಕೆಯು ಕೊರೊನಾ ಮೂರನೇ ಅಲೆ ವೇಳೆ ಮಕ್ಕಳ ರಕ್ಷಣೆ ವಿಚಾರದಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಅಭಿಪ್ರಾಯಪಟ್ಟಿದ್ದಾರೆ. ಅಂತರ ಕಾಪಾಡಿಕೊಂಡ ಸೀರಂ ಕೊರೊನಾ ನಿರೋಧಕ ಲಸಿಕೆಯ ದಾಸ್ತಾನು ಮತ್ತು ಲಭ್ಯತೆ ಕುರಿತು ಉತ್ಪಾದಕ ಸಂಸ್ಥೆಗಳೊಂದಿಗೆ ಚರ್ಚಿಸದೇ ಕೇಂದ್ರ ಸರಕಾರವು ವಿವಿಧ ವಯೋಮಾನದವರಿಗೆ ಲಸಿಕೆ ನೀಡುವ ತೀರ್ಮಾನ ಕೈಗೊಂಡಿದೆ ಎಂಬ ತನ್ನ ಸಂಸ್ಥೆಯ ನಿರ್ದೇಶಕ ಸುರೇಶ್‌ ಜಾದವ್‌ ಹೇಳಿಕೆಯಿಂದ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಅಂತರ ಕಾಪಾಡಿಕೊಂಡಿದೆ. ಜಿಲ್ಲಾವಾರು ಮಾಹಿತಿಗೆ ಕಾಂಗ್ರೆಸ್‌ ಆಗ್ರಹ ಕೊರೊನಾ ಲಸಿಕೆ ಲಭ್ಯತೆಯ ರಾಜ್ಯವಾರು ಬದಲಿಗೆ ಜಿಲ್ಲಾವಾರು ಮಾಹಿತಿಯನ್ನು ಬಹಿರಂಗಪಡಿಸಬೇಕು. ಸೋಂಕು ಉಲ್ಬಣಿಸುತ್ತಿರುವಾಗಲೇ ಲಸಿಕೆ ನೀಡುವ ಕಾರ್ಯ ಚುರುಕು ಕಳೆದುಕೊಂಡಿದೆ. ಇದಕ್ಕೆ ಕಾರಣ ಲಸಿಕೆ ಕೊರತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.