ಕೊರೊನಾ ಆಯ್ತು ಚೀನಾದಲ್ಲಿ ಈಗ Monkey B ಹಾವಳಿ: ನರಮಂಡಲಕ್ಕೆ ಘಾಸಿ ಮಾಡುವ ಸೋಂಕಿನಿಂದ ಜಗತ್ತಿಗೇ ಭೀತಿ?

ಕೊರೊನಾ ವೈರಸ್‌ ಬಳಿಕ ಇದೀಗ ಚೀನಾದಲ್ಲಿ ಮಂಕಿ ಬಿ ಎನ್ನುವ ಸೋಂಕು ಭಾರೀ ತಲ್ಲಣ ಸೃಷ್ಟಿಸಿದೆ. ಈಗಾಗಲೇ ಈ ಸೋಂಕು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನು ಈ ಸೋಂಕು ಇದೀಗ ಇಡೀ ಜಗತ್ತಿಗೆ ವ್ಯಾಪಿಸುವ ಆತಂಕವೂ ಇದೆ. ಹಾಗಾದರೆ ಈ ಸೋಂಕಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಕೊರೊನಾ ಆಯ್ತು ಚೀನಾದಲ್ಲಿ ಈಗ Monkey B ಹಾವಳಿ: ನರಮಂಡಲಕ್ಕೆ ಘಾಸಿ ಮಾಡುವ ಸೋಂಕಿನಿಂದ ಜಗತ್ತಿಗೇ ಭೀತಿ?
Linkup
ಜಗತ್ತಿಗೆ ಕೊರೊನಾ ಹರಡಲು ಕಾರಣವಾದ ಚೀನಾದಲ್ಲೀಗ ಮಂಕಿ ಬಿ ಸೋಂಕು (ಬಿವಿ) ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಇದು ಸಹ ಕೊರೊನಾದಂತೆ ಹರಡುವ ಭೀತಿ ಎದುರಾಗಿದೆ. ಏನಿದು ಮಂಕಿ ಬಿ ಸೋಂಕು?ಮಂಗನಿಂದ ಮಾನವನಿಗೆ ಹರಡುವ ಸೋಂಕು ಇದಾಗಿದೆ. ಚೀನಾದ ಪಶುವೈದ್ಯನಿಗೂ ಎರಡು ಮಂಗಗಳ ಶವದಿಂದ ಮಂಕಿ ಬಿ ಹರಡಿರುವುದು ಸಾಬೀತಾಗಿದೆ. ಮಂಗಗಳು ಕಚ್ಚಿದರೆ, ಅವುಗಳು ಮನುಷ್ಯರ ಮೈ ಮುಟ್ಟಿದರೆ, ಅವುಗಳ ಎಂಜಲು ತಾಕಿದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಮೊದಲಿನಿಂದಲೂ ಇದೆಯೇ?ವಿಶ್ವದಲ್ಲೇ ಮೊದಲ ಬಾರಿಗೆ 1932ರಲ್ಲಿ ಮಕಾಕ ಎಂಬ ತಳಿಯ ಮಂಗದಿಂದ ಮಾನವನಿಗೆ ಸೋಂಕು ಹರಡಿತು. ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಂಗ ಕಚ್ಚಿದ ಬಳಿಕ ಆತನಿಗೆ ಈ ಸೋಂಕು ಹರಡಿತ್ತು. ಸೋಂಕು ದೃಢಪಟ್ಟ ಬಳಿಕ ತೀವ್ರ ಜ್ವರದಿಂದ ಬಳಲಿದ ಆತ 15 ದಿನಗಳ ಬಳಿಕ ಮೃತಪಟ್ಟರು ಎಂದು ತಿಳಿದುಬಂದಿದೆ. ಲಕ್ಷಣಗಳು ಯಾವವು?ಸೋಂಕು ತಗುಲಿದ 15-21 ದಿನದಲ್ಲಿ ಲಕ್ಷಣಗಳು ಕಾಣಿಸಲಾರಂಭಸುತ್ತವೆ. ಜ್ವರ, ಶೀತ, ಸ್ನಾಯುನೋವು, ತಲೆನೋವು, ಆಯಾಸ ಮಂಕಿ ಬಿ ಲಕ್ಷಣಗಳು. ನೇರ ಹಾಗೂ ದೈಹಿಕ ಸಂಪರ್ಕದಿಂದ ಸೋಂಕು ಹರಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ, 1932ರಿಂದ ಇದುವರೆಗೆ ಮಂಕಿ ಬಿ ಸಂಬಂಧಿತ ಸೋಂಕಿನಿಂದ 24ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಕಳೆದ 12 ವರ್ಷದಲ್ಲಿಯೇ ಐವರು ಮೃತಪಟ್ಟಿದ್ದಾರೆ. ತುಂಬ ಅಪಾಯಕಾರಿಯೇ?ಮಂಕಿ ಬಿ ಅಪಾಯಕಾರಿಯಾಗಿದ್ದು, ಸೋಂಕು ತಗುಲಿದ ಬಳಿಕ ಮನುಷ್ಯನ ನರಮಂಡಲಕ್ಕೆ ಆವರಿಸುತ್ತದೆ. ಸೋಂಕು ತಗುಲಿದರೆ ಸಾವಿನ ಪ್ರಮಾಣ ಶೇ.70ಧ-80ರಷ್ಟು ಇದೆ ಎಂದು ಅಮೆರಿಕ ಸಂಶೋಧಕರು ತಿಳಿಸಿದ್ದಾರೆ. ಆದಾಗ್ಯೂ, ಕೊರೊನಾದಂತೆ ವಿಶ್ವಾದ್ಯಂತ ಪಸರಿಸುವ ಸಾಧ್ಯತೆ ಕಡಿಮೆ ಇದೆ ಎಂದೂ ಮಾಹಿತಿ ನೀಡಿದ್ದಾರೆ.