ಅನ್ನದಾತರ ಮುಷ್ಕರಕ್ಕೆ ಅರ್ಧ ವರ್ಷ, ಮೇ 26ರ ರೈತ ಪ್ರತಿಭಟನೆಗೆ 12 ಪಕ್ಷಗಳ ಬೆಂಬಲ

ಕೃಷಿ ಕಾಯಿದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆರು ತಿಂಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮೇ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದೆ. ಇದಕ್ಕೆ 12 ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ.

ಅನ್ನದಾತರ ಮುಷ್ಕರಕ್ಕೆ ಅರ್ಧ ವರ್ಷ, ಮೇ 26ರ ರೈತ ಪ್ರತಿಭಟನೆಗೆ 12 ಪಕ್ಷಗಳ ಬೆಂಬಲ
Linkup
ಹೊಸದಿಲ್ಲಿ: ಕೃಷಿ ಕಾಯಿದೆ ವಿರೋಧಿ ಪ್ರತಿಭಟನೆಗೆ ಆರು ತಿಂಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮೇ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದ್ದು, ಅದಕ್ಕೆ 12 ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ. ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದಿಲ್ಲಿ ಗಡಿಯಲ್ಲಿ ಕಳೆದ ಆರು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಬೇಡಿಕೆಯನ್ನು ಸಂಪೂರ್ಣವಾಗಿ ಒಪ್ಪದ ಕೇಂದ್ರ ಸರಕಾರ, ಕಾಯಿದೆಗಳಿಗೆ ಇನ್ನಷ್ಟು ಸುಧಾರಣೆ ತರುವ ಇಂಗಿತ ವ್ಯಕ್ತಪಡಿಸಿದೆ. ಕಾಯಿದೆಗಳನ್ನು ರದ್ದುಗೊಳಿಸುವುದೊಂದೇ ಏಕೈಕ ಪರಿಹಾರ ಎಂದು ರೈತರು ಪಟ್ಟು ಹಿಡಿದಿದ್ದು, ಬಿಕ್ಕಟ್ಟು ಜಟಿಲಗೊಂಡಿದೆ. ಮೇ 26ಕ್ಕೆ ಪ್ರತಿಭಟನೆಗೆ ಆರು ತಿಂಗಳು ಪೂರ್ಣಗೊಳ್ಳಲಿದ್ದು, ಅಂದು ದೇಶವ್ಯಾಪಿ ಪ್ರತಿಭಟನೆಗೆ ಕಿಸಾನ್‌ ಮೋರ್ಚಾ ಕರೆ ನೀಡಿದೆ. ಇದಕ್ಕೆ ಕಾಂಗ್ರೆಸ್‌, ಟಿಎಂಸಿ, ಜೆಡಿಎಸ್‌ ಸೇರಿದಂತೆ 12 ಪ್ರತಿಪಕ್ಷಗಳು ಬೆಂಬಲ ಘೋಷಿಸಿವೆ. ಈ ಸಂಬಂಧ ಸೋನಿಯಾ ಗಾಂಧಿ (ಕಾಂಗ್ರೆಸ್‌), ಎಚ್‌.ಡಿ.ದೇವೇಗೌಡ (ಜೆಡಿಎಸ್‌), ಶರದ್‌ ಪವಾರ್‌ (ಎನ್‌ಸಿಪಿ), ಮಮತಾ ಬ್ಯಾನರ್ಜಿ (ಟಿಎಂಸಿ), ಉದ್ಧವ್‌ ಠಾಕ್ರೆ (ಶಿವಸೇನೆ), ಎಂ.ಕೆ.ಸ್ಟಾಲಿನ್‌ (ಡಿಎಂಕೆ), ಹೇಮಂತ್‌ ಸೊರೇನ್‌ (ಜೆಎಂಎಂ), ಅಖಿಲೇಶ್‌ ಯಾದವ್‌ (ಎಸ್‌ಪಿ), ತೇಜಸ್ವಿ ಯಾದವ್‌ (ಆರ್‌ಜೆಡಿ) ಸೇರಿ 12 ಮುಖಂಡರು ಭಾನುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.