Upendra: 'ಕಬ್ಜ' ಅಂಗಳಕ್ಕೆ ಕಾಲಿಟ್ಟ 'ಕೆಜಿಎಫ್' ಖ್ಯಾತಿಯ ಲಕ್ಕಿ ರಾಜೇಂದ್ರ!

'ರಿಯಲ್ ಸ್ಟಾರ್' ಉಪೇಂದ್ರ ಮತ್ತು 'ಕಿಚ್ಚ' ಸುದೀಪ್ ಅಭಿನಯದ 'ಕಬ್ಜ' ಚಿತ್ರದ ಬಗ್ಗೆ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಪಾತ್ರವರ್ಗದಿಂದಲೇ ಈ ಸಿನಿಮಾ ಸದ್ದು ಮಾಡುತ್ತಿದೆ. ಈಗ ಈ ಸಿನಿಮಾ ತಂಡಕ್ಕೆ ಮತ್ತೋರ್ವ ನಟ ಸೇರ್ಪಡೆಯಾಗಿದ್ದಾರೆ.

Upendra: 'ಕಬ್ಜ' ಅಂಗಳಕ್ಕೆ ಕಾಲಿಟ್ಟ 'ಕೆಜಿಎಫ್' ಖ್ಯಾತಿಯ ಲಕ್ಕಿ ರಾಜೇಂದ್ರ!
Linkup
ಪದ್ಮಾ ಶಿವಮೊಗ್ಗ ತನ್ನ ಮೇಕಿಂಗ್‌ನಿಂದಲೇ ಸುದ್ದಿಯಾಗುತ್ತಿರುವ ಚಿತ್ರ ''. ಬಹುಭಾಷೆಯಲ್ಲಿ ನಿರ್ಮಾಣಗೊಂಡು ಮತ್ತೊಮ್ಮೆ ದೇಶದ ಗಮನ ಸೆಳೆಯಲು ಸಜ್ಜಾಗುತ್ತಿದ್ದಾರೆ ನಿರ್ದೇಶಕ ಆರ್‌. ಚಂದ್ರು. 'ರಿಯಲ್ ಸ್ಟಾರ್' ನಟನೆಯ ಈ ಬಿಗ್‌ ಬಜೆಟ್‌ ಸಿನಿಮಾದಲ್ಲಿ ನಟ 'ಕಿಚ್ಚ' ಸುದೀಪ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಪ್ಯಾನ್‌ ಇಂಡಿಯಾ ಸಿನಿಮಾಗಾಗಿ ಅದ್ಧೂರಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ವರ್ಷ ಕೊರೊನಾ 2ನೇ ಅಲೆ ನಂತರ ಮತ್ತೆ ಚಿತ್ರೀಕರಣ ಪ್ರಾರಂಭಿಸಿರುವ 'ಕಬ್ಜ' ಟೀಮ್‌ ಈಗ ಮಿನರ್ವ ಮಿಲ್‌ನಲ್ಲಿ ಸೆಟ್‌ ಹಾಕಿದ್ದು, ನಿರಂತರವಾಗಿ ಶೂಟ್‌ನಲ್ಲಿ ತೊಡಗಿಕೊಂಡಿದೆ. ಕೆಲ ದಿನಗಳ ಹಿಂದೆ ಬಾಲಿವುಡ್‌ ನಟ ನವಾಬ್‌ ಶಾ ಚಿತ್ರೀಕರಣಕ್ಕೆ ಹಾಜರಾಗಿ ತಮ್ಮ ಪಾಲಿನ ಚಿತ್ರೀಕರಣವನ್ನು ಮಾಡಿದ್ದಾರೆ. ಚಿತ್ರದಲ್ಲಿ ಪ್ರಮುಖವಾದ ನೆಗೆಟಿವ್‌ ರೋಲ್‌ನಲ್ಲಿ ಅವರು ನಟಿಸಿದ್ದಾರೆ. ಈಗ ಮತ್ತೊಬ್ಬ ನಟನ ಎಂಟ್ರಿಯಾಗಿದೆ. '' ಚಿತ್ರದಲ್ಲಿ ನಟಿಸಿದ್ದ ಲಕ್ಕಿ ಲಕ್ಷ್ಮಣ್‌ 'ಕಬ್ಜ' ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜೇಂದ್ರ ಅವರ ಫಸ್ಟ್‌ ಲುಕ್‌ ನಿನ್ನೆ ರಿವೀಲ್‌ ಆಗಿದೆ. 'ಕೆಜಿಎಫ್‌' ಸಿನಿಮಾದಲ್ಲಿ ತಾವು ನಟಿಸಿದ್ದ ಪಾತ್ರ 'ಲಕ್ಕಿ ರಾಜೇಂದ್ರ'ನ ಹೆಸರಿನಿಂದಲೇ ಗುರುತಿಸಲ್ಪಡುತ್ತಿದ್ದಾರೆ ಲಕ್ಷ್ಮಣ್‌. 'ಕಬ್ಜ' ಪಿರಿಯಾಡಿಕಲ್‌ ಸಿನಿಮಾ ಆಗಿದ್ದು, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಕಾಲಘಟ್ಟವನ್ನು ತೆರೆಯ ಮೇಲೆ ತರಲಾಗುತ್ತಿದೆ. ಈಗ ರಾಜೇಂದ್ರ 1960ರಲ್ಲಿ ನಡೆಯುವ ಸನ್ನಿವೇಶದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವತಂತ್ರ ಭಾರತದ ರಾಜಕೀಯ ಬೆಳವಣಿಗೆ, ಎಲೆಕ್ಷನ್‌, ಭೂಗತ ಜಗತ್ತಿನ ಚಟುವಟಿಕೆ, ರಾಜಕಾರಣಿಗಳ ಬಗ್ಗೆಯೂ ಸಿನಿಮಾದಲ್ಲಿರಲಿದ್ದು, ಪ್ರಮುಖ ರಾಜಕಾರಣಿಯಾಗಿ ರಾಜೇಂದ್ರ ನಟಿಸಲಿದ್ದಾರೆ. ಈಗಾಗಲೇ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 'ಕನ್ನಡದ ಒಳ್ಳೆಯ ಕಲಾವಿದ ರಾಜೇಂದ್ರ. 'ಕೆಜಿಎಫ್‌' ಚಿತ್ರ ನೋಡಿದಾಗ ಅವರ ನಟನೆ ಇಷ್ಟ ಆಯ್ತು. ಹಾಗಾಗಿ ಅವರನ್ನು ಆಯ್ಕೆ ಮಾಡಿದೆವು. 'ಕಬ್ಜ' ಚಿತ್ರದಲ್ಲಿ ಲಕ್ಕಿ ರಾಜೇಂದ್ರ ಅವರಿಗೆ ಮೇಕ್‌ ಓವರ್‌ ಮಾಡಿ ಬೇರೆ ಥರಾನೇ ತೋರಿಸುತ್ತಿದ್ದೇವೆ. ಅವರ ಲುಕ್‌ ವಿಭಿನ್ನವಾಗಿದೆ' ಎಂದಿದ್ದಾರೆ ನಿರ್ದೇಶಕ ಆರ್‌. ಚಂದ್ರು. ಲಕ್ಕಿ ರಾಜೇಂದ್ರ ಅವರು ಉಪೇಂದ್ರ ಜತೆಯೂ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಕಬ್ಜ' ಚಿತ್ರದಲ್ಲಿ ಉಪೇಂದ್ರ, 'ಕಿಚ್ಚ' ಸುದೀಪ್ ಜೊತೆಗೆ 'ಐ' ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕೇನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್ ರಾವ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರಿದ್ದಾರೆ. 'ಕಬ್ಜ' ಚಿತ್ರಕ್ಕೆ ಆಕ್ಷನ್-ಕಟ್ ಹೇಳುವ ಜೊತೆಗೆ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನೂ ಆರ್. ಚಂದ್ರು ಅವರೇ ಹೊತ್ತಿದ್ದಾರೆ. 'ಕಬ್ಜ' ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಎ.ಜೆ. ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂ ಮೋರ್, ವಿಜಯ್ ಸಾಹಸ ನಿರ್ದೇಶನ 'ಕಬ್ಜ' ಚಿತ್ರಕ್ಕಿದೆ.