ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ ಮಕ್ಕಳದ್ದೇ ಚಿಂತೆ!

ಈ ಸಾಂಕ್ರಾಮಿಕ ಕಾಲದಲ್ಲಿ ಎಲ್ಲಾ ತಾಯಂದಿರಂತೆ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ಗೂ ತಮ್ಮ ಮಕ್ಕಳದ್ದೇ ಚಿಂತೆಯಂತೆ. ಮೂವರು ಮಕ್ಕಳ ಆರೋಗ್ಯ ಸುರಕ್ಷತೆ, ಅವರ ಆನ್‌ಲೈನ್‌ ತರಗತಿಗಳ ನಿರ್ವಹಣೆ ಇತ್ಯಾದಿಗಳ ಜೊತೆಗೆ ತಮ್ಮ ಸಿನಿಮಾ ಕೆಲಸಗಳಲ್ಲೂ ಸಿಕ್ಕಾಪಟ್ಟೆ ಬಿಝಿಯಾಗಿರುವ ಅವರು ಈಗ ಮನೆಯೊಳಗೆಯೇ ಇದನ್ನೆಲ್ಲ ನೋಡಿಕೊಳ್ಳುತ್ತಿದ್ದಾರೆ.

ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ ಮಕ್ಕಳದ್ದೇ ಚಿಂತೆ!
Linkup
ವರ್ಕ್ ಫ್ರಮ್‌ ಹೋಮ್‌ ಅನುಭವದ ಬಗ್ಗೆ ಹೇಳಿಕೊಂಡಿರುವ ಅವರು, 'ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ನನಗೀಗ ನನ್ನ ಸಿನಿಮಾ ಕೆಲಸಗಳಿಗೆ ಸಿದ್ಧತೆ ನಡೆಸಲು ಕೂಡ ಹೆಚ್ಚಿನ ಸಮಯ ಸಿಗುತ್ತಿದೆ. ಅನೇಕ ಕಲಾವಿದರು ಇದೇ ರೀತಿ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಸ್ಕ್ರಿಪ್ಟ್ ಓದುವಿಕೆ, ತಮ್ಮ ಪಾತ್ರಕ್ಕೆ ಅಗತ್ಯವಿರುವ ಸಿದ್ಧತೆ ಇತ್ಯಾದಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಕೆಲಸಗಳ ಜೊತೆಗೆ ಮಕ್ಕಳನ್ನೂ ನೋಡಿಕೊಳ್ಳುವುದು, ಪೋಷಕರಾಗಿ ಅವರ ಬಗ್ಗೆ ಸದಾ 'ಪ್ರೊಟೆಕ್ಟಿವ್‌ ಮೋಡ್‌'ನಲ್ಲಿರುವುದು ನಮ್ಮ ಒತ್ತಡವನ್ನು ಹೆಚ್ಚಿಸಿವೆ' ಎಂದಿದ್ದಾರೆ. 'ನಾನು ವಿಡಿಯೋ ಕಾಲ್‌ಗಳಲ್ಲಿ ನನ್ನ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ನನ್ನ ಮಗಳು ಅದೇ ಕೋಣೆಯಲ್ಲಿ ತನ್ನ ಸಹಾಯಕಿಯ ಜೊತೆಗೆ ಪಝಲ್‌ ಬಿಡಿಸುತ್ತಿರುತ್ತಾಳೆ. ಮಕ್ಕಳು ನನ್ನ ಸುತ್ತಮುತ್ತವೇ ಇರಬೇಕು ಎಂದು ನಾನು ಬಯಸುತ್ತೇನೆ. ಅದಕ್ಕಾಗಿ ಅವರ ಸಮಯಕ್ಕೆ ತಕ್ಕಂತೆಯೇ ನನ್ನ ಕೆಲಸದ ವೇಳಾಪಟ್ಟಿಯನ್ನು ನಿಗದಿಗೊಳಿಸುತ್ತೇನೆ. ಈ ಮೂಲಕ ನನ್ನ ಸಿನಿಮಾ ಕೆಲಸ ಮತ್ತು ವರ್ಕೌಟ್‌ ದಿನಚರಿಯಲ್ಲಿ ತೊಡಗಿಸಿಕೊಳ್ಳುವ ಮೊದಲು ಮಕ್ಕಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುತ್ತಿದ್ದೇನೆ' ಎಂದು ಅವರು ಹೇಳಿದ್ದಾರೆ. ಲಾಕ್‌ಡೌನ್‌ಗಿಂತ ಮೊದಲು ನಾನು ಸಿನಿಮಾ ಸೆಟ್‌ಗೆ ಹೋಗುವಾಗ ಮಕ್ಕಳನ್ನು ವ್ಯಾನಿಟಿ ವ್ಯಾನ್‌ನಲ್ಲಿಬಿಡುತ್ತಿದೆ. ಆದರೆ ಸೆಟ್‌ಗೆ ಅವರನ್ನು ಕರೆದೊಯ್ಯುತ್ತಿರಲಿಲ್ಲ. ಅವರು ಆ ದಿನ ಮಾಡಬೇಕಾದ ಕೆಲಸಗಳ ಚಾರ್ಟ್‌ ಮಾಡಿ ಅದರಂತೆ ಮಾಡಲು ಅವರಿಗೆ ಸೂಚಿಸುತ್ತಿದ್ದೆ ಎಂದಿರುವ ಸನ್ನಿ ಲಿಯೋನ್‌, 'ಬೇರೆಡೆ ಪ್ರಯಾಣ ಮಾಡುವಾಗ ನಾವೆಲ್ಲರೂ ನಮ್ಮ ಬಯೋ ಬಬಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದೆವು. ಒಟ್ಟಿನಲ್ಲಿ ಈ ಪ್ಯಾಂಡೆಮಿಕ್‌ ಸಮಯದಲ್ಲಿ ನಮ್ಮ ಮಕ್ಕಳು ಎಲ್ಲಿದ್ದಾರೋ?, ಅವರೇನು ಸ್ಪರ್ಶಿಸಿದರೋ, ಮಾಸ್ಕ್‌ ಹಾಕಿದ್ದಾರೋ, ಇಲ್ವೋ ಎಂಬ ಬಗ್ಗೆ ಯೋಚನೆ ಮಾಡಿಯೇ ಪೋಷಕರ ಒತ್ತಡ ಜಾಸ್ತಿಯಾಗುತ್ತಿದೆ. ನಮ್ಮ ಸುತ್ತಮುತ್ತ ಜನರೇ ಇಲ್ಲದ ಮತ್ತು ನಾವು ನಮ್ಮವರಿಂದಲೇ ಪ್ರತ್ಯೇಕವಾಗಿರಬೇಕಾದ ದಿನಗಳು ಹೋಗಿ ಮತ್ತೆ ಎಂದಿನ ದಿನಗಳು ಮರಳಿ ಬರಲಿ ಎಂದು ಆಶಿಸುತ್ತಿದ್ದೇನೆ' ಎಂದಿದ್ದಾರೆ. ಈಗ ನನಗೆ ಮನೆಯಲ್ಲಿ ಯಾವ ಕೆಲಸಕ್ಕೆ ಎಷ್ಟು ಸಮಯ ನಿಗದಿಗೊಳಿಸಬೇಕು ಎಂದು ಗೊತ್ತಾಗಿದೆ. ಸದ್ಯಕ್ಕೆ ಯಾವುದೇ ಸಮಾರಂಭ ಅಥವಾ ಇತರ ಕಮಿಟ್ಮೆಂಟ್‌ಗಳು ಇಲ್ಲದಿರುವುದರಿಂದ ಮನೆಯಲ್ಲಿ ಸಿನಿಮಾ ಕೆಲಸ ಮತ್ತು ಕುಟುಂಬವೇ ನನ್ನ ಮೊದಲ ಆದ್ಯತೆ. ಟ್ಯೂಟರ್‌ ಒಬ್ಬರ ಮೂಲಕ ಮಲಯಾಳಂ ಭಾಷೆ ಕಲಿಯುತ್ತಿದ್ದೇನೆ. ಇದು ನನ್ನ ಮುಂದಿನ ಸಿನಿಮಾಗೆ ಸಹಾಯವಾಗಲಿದೆ ಎಂದು ಸನ್ನಿ ಲಿಯೋನ್‌ ವಿವರಿಸಿದ್ದಾರೆ. ನಮ್ಮ ಸುತ್ತಮುತ್ತ ಯಾರಿದ್ದಾರೆ?, ಇದಕ್ಕಿಂತ ಮುನ್ನ ಇಲ್ಲಿ ಯಾರಿದ್ದರು ಎಂಬುದರ ಬಗ್ಗೆಯೇ ಆತಂಕ ಪಡುವ ದಿನಗಳು ಹೊಗಿ ನಾವು ಸೇರಿದಂತೆ ನಮ್ಮ ಮಕ್ಕಳು ಕೂಡ ಎಲ್ಲಿ ಬೇಕಾದರೂ ಆಟವಾಡುವ, ನೆಲವನ್ನು ಸ್ಪರ್ಶಿಸುವ, ಹುಲ್ಲಿನ ಹಾಸಿನಲ್ಲಿ ಕುಳಿತುಕೊಳ್ಳುವ, ಭಯರಹಿತವಾಗಿ ಬದುಕುವ ದಿನಗಳು ಬರಬೇಕಿದ್ದರೆ ಈಗ ಆರೋಗ್ಯ ಸುರಕ್ಷೆ ಪಾಲಿಸಲೇಬೇಕು ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.