Kantara: ಹೊಂಬಾಳೆ ಫಿಲ್ಮ್ಸ್‌ನ ಹೊಸ ಸಿನಿಮಾ ಟೈಟಲ್ 'ಕಾಂತಾರ'! ಹೀರೋ ಯಾರು?

ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರಾದ ಹೊಂಬಾಳೆ ಫಿಲ್ಮ್ಸ್‌, ಇದೀಗ ತನ್ನ ಬ್ಯಾನರ್‌ನ 11ನೇ ಸಿನಿಮಾನ್ನು ಘೋಷಣೆ ಮಾಡಿದೆ. ಈ ಸಿನಿಮಾಕ್ಕೆ 'ಕಾಂತಾರ' ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Kantara: ಹೊಂಬಾಳೆ ಫಿಲ್ಮ್ಸ್‌ನ ಹೊಸ ಸಿನಿಮಾ ಟೈಟಲ್ 'ಕಾಂತಾರ'! ಹೀರೋ ಯಾರು?
Linkup
ಹೊಂಬಾಳೆ ಫಿಲ್ಮ್ಸ್‌ನ 11ನೇ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಲಾಂಚ್ ಆಗಿದೆ. ಚಿತ್ರತಂಡ ಹೇಳಿಕೊಂಡಂತೆ, ಶುಕ್ರವಾರ (ಆ.6) ಬೆಳಗ್ಗೆ 11.43ಕ್ಕೆ ಸರಿಯಾಗಿ ಟೈಟಲ್ ಲಾಂಚ್ ಮಾಡಲಾಗಿದೆ. ಈ ಹೊಸ ಸಿನಿಮಾಕ್ಕೆ 'ಕಾಂತಾರ' ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ! ಬರೀ ನಿರ್ದೇಶನ ಮಾತ್ರವಲ್ಲ, ಅವರಿಲ್ಲಿ ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕಂಬಳದ ಕಥೆಯೇ?'ಕಾಂತಾರ'ದ ಫಸ್ಟ್ ಲುಕ್ ನೋಡಿದವರಿಗೆ ತಕ್ಷಣಕ್ಕೆ ಗೊತ್ತಾಗುವ ಮಾಹಿತಿ ಎಂದರೆ, ಇದೊಂದು ಕಂಬಳ ಕುರಿತ ಕಥೆ ಎಂಬುದು. ಚಿತ್ರದಲ್ಲಿ ಕಂಬಳದ ಕೋಣ ಎಲ್ಲ ಕಾಣಿಸಿರುವುದರಿಂದ ಕೂತುಹಲ ಮೂಡಿದೆ. ಆಗಸ್ಟ್ 27ರಿಂದಲೇ ಶೂಟಿಂಗ್ ಶುರು ಮಾಡುವುದಕ್ಕೆ ರಿಷಬ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಉಳಿದಂತೆ, ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಮೂಲತಃ ಕರಾವಳಿ ಕಡೆಯವರಾದ ರಿಷಬ್ ಶೆಟ್ಟಿ, ಈ ಬಾರಿ ತಮ್ಮದೇ ನೆಲದ ಸೊಗಡಿನ ಕಥೆಯನ್ನು ಯಾವ ರೀತಿ ತೆರೆಮೇಲೆ ತರುತ್ತಾರೆ ಎಂಬುದನ್ನು ಕಾದುನೋಡಬೇಕು. 'ಕಾಂತಾರ' ಚಿತ್ರಕ್ಕೆ ಒಂದು ದಂತ ಕಥೆ ಎಂಭ ಅಡಿಬರಹವೂ ಇದೆ. 'ಕಾಂತಾರ' ಎಂಬುದು ಸಂಸ್ಕೃತ ಪದವಾಗಿದ್ದು, ಕಾಡಿನ ದೈವದ ಕುರಿತು ಹೇಳುವಾಗ ಇದನ್ನು ಬಳಸಲಾಗುತ್ತದೆ. 'ಬೆಲ್ ಬಾಟಂ' ಸಿನಿಮಾದಿಂದ ಪೂರ್ಣಪ್ರಮಾಣದ ಹೀರೋ ಆದ ರಿಷಬ್, ಆನಂತರ 'ಹೀರೋ' ಚಿತ್ರದಲ್ಲೂ ನಟಿಸಿದರು. ಸದ್ಯ ಅವರ ಕೈಯಲ್ಲಿ ಬೆಲ್‌ ಬಾಟಂ 2, ಗರುಡ ಗಮನ ವೃಷಭ ವಾಹನ, ಹರಿಕಥೆ ಅಲ್ಲ ಗಿರಿಕಥೆ ಸೇರಿದಂತೆ 3-4 ಸಿನಿಮಾಗಳಿವೆ. ಇನ್ನು, ಈವರೆಗೂ ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದ ರಿಷಬ್ ಈ ಬಾರಿ ಹೀರೋ ಆಗಿದ್ದಾರೆ. ಗುರುವಾರ ರಿಲೀಸ್ ಆದ ಪೋಸ್ಟರ್‌ನಲ್ಲಿ 'ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ..' ಎಂಬ ಟ್ಯಾಗ್ ಲೈನ್ ಎಲ್ಲರ ಗಮನಸೆಳೆದಿತ್ತು. ಸದ್ಯ ಹೊಂಬಾಳೆ ಸಂಸ್ಥೆಯ 'ಕೆಜಿಎಫ್: ಚಾಪ್ಟರ್ 2' ರಿಲೀಸ್‌ಗೆ ಸಿದ್ಧವಾಗಿದೆ. ಅತ್ತ ಹೈದರಬಾದ್‌ನಲ್ಲಿ ಪ್ರಭಾಸ್ ನಟನೆಯ 'ಸಲಾರ್‌'ಗೆ ಮತ್ತೆ ಶೂಟಿಂಗ್ ಶುರುವಾಗಿದೆ. ಅದನ್ನು 2022ರ ಏಪ್ರಿಲ್‌ನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ನಂತರ ನಿರ್ದೇಶಕ ಡಾ. ಸೂರಿ ಮತ್ತು ಶ್ರೀಮುರಳಿ ಕಾಂಬಿನೇಷನ್‌ನ 'ಬಘೀರ' ಶುರುವಾಗಲಿದೆ. ಪುನೀತ್ ರಾಜ್‌ಕುಮಾರ್, ತ್ರಿಷಾ, ನಿರ್ದೇಶಕ ಪವನ್‌ಕುಮಾರ್ ಕಾಂಬಿನೇಷನ್‌ನ 'ದ್ವಿತ್ವ' ಚತ್ರದ ಶೂಟಿಂಗ್ ಶೀಘ್ರದಲ್ಲೇ ಶುರುವಾಗಲಿದೆ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ 'ರಿಚರ್ಡ್‌ ಆಂಟನಿ' ಸಿನಿಮಾದ ಶೂಟಿಂಗ್ ಕೂಡ ಶುರುವಾಗಬೇಕಿದೆ. ಇವಿಷ್ಟು ಸಿನಿಮಾಗಳ ಜೊತೆಗೆ ಈಗ 'ಕಾಂತಾರ' ಹೊಸ ಸೇರ್ಪಡೆ.