ನಟಿ ಕತ್ರೀನಾ ಕೈಫ್‌ & ವಿಕ್ಕಿ ಕೌಶಲ್ ಮದುವೆ ಸ್ಥಳ ಬಹಿರಂಗವಾಗೋಯ್ತು!

ಬಾಲಿವುಡ್ ನಟಿ ಕತ್ರೀನಾ ಕೈಫ್, ನಟ ವಿಕ್ಕಿ ಕೌಶಲ್ ಅವರು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಎಲ್ಲಿ ನಡೆಯಲಿದೆ ಅವರ ಮದುವೆ? ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಟಿ ಕತ್ರೀನಾ ಕೈಫ್‌ & ವಿಕ್ಕಿ ಕೌಶಲ್ ಮದುವೆ ಸ್ಥಳ ಬಹಿರಂಗವಾಗೋಯ್ತು!
Linkup
ಮುಂಬರುವ ಡಿಸೆಂಬರ್‌ನಲ್ಲಿ , ಹಸೆಮಣೆ ಏರುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ವಿಷಯವನ್ನು ಕೆಲವರು ಅಲ್ಲಗಳೆದರು. ಆದರೆ ಈಗ ಅವರು ಎಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ವಿಷಯವನ್ನು ಕೂಡ 'ಟೈಮ್ಸ್ ಆಫ್ ಇಂಡಿಯಾ' ಬಹಿರಂಗ ಮಾಡಿದೆ. ವಿಕ್ಕಿ ಕೌಶಲ್, ಕತ್ರೀನಾ ಕೈಫ್ ಮದುವೆ ಎಲ್ಲಿ ನಡೆಯಲಿದೆ? ರಾಜಸ್ಥಾನದ Ranthambore National Parkನಿಂದ 30 ನಿಮಿಷಗಳಷ್ಟು ದೂರದಲ್ಲಿರುವ Sawai Madhopur ರೆಸಾರ್ಟ್‌ನಲ್ಲಿ ಕತ್ರೀನಾ ಕೈಫ್, ವಿಕ್ಕಿ ಕೌಶಲ್ ಮದುವೆ ನಡೆಯುವುದಂತೆ. ಡಿಸೆಂಬರ್ ಮೊದಲ ವಾರದಲ್ಲಿ ಮದುವೆ ನಡೆಯಲಿದೆ. Six Senses Fort Barwara 14ನೇ ಶತಮಾನದ ಕೋಟೆಯಾಗಿದೆ, ಈಗ ಅದು ರೆಸಾರ್ಟ್, ಸ್ಪಾ ಆಗಿ ಪರಿವರ್ತನೆಯಾಗಿದೆ. ಆ ಕೋಟೆಯೊಳಗಡೆ ಅರಮನೆ, 2 ದೇವಸ್ಥಾನಗಳು ಕೂಡ ಇವೆ. 700 ವರ್ಷಗಳ ಹಿಂದಿನ ಶೈಲಿಯ ವಿನ್ಯಾಸವು ಅಲ್ಲಿದೆ. ಕತ್ರೀನಾ ಕೈಫ್‌ಗೆ ಸಬ್ಯಸಾಚಿ ಉಡುಗೆ, ಮೌನತಾಳಿದ ವಿಕ್ಕಿ ಕೌಶಲ್ ತಂದೆ ಸಂಪ್ರದಾಯಬದ್ಧವಾದ ಆರತಕ್ಷತೆ ಕಾರ್ಯಕ್ರಮ, ಚರ್ಚ್ ವೆಡ್ಡಿಂಗ್ ಅಲ್ಲಿ ನಡೆಯಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಕತ್ರೀನಾ ಕೈಫ್ ಅವರ ಮದುವೆಯ ಉಡುಗೆಯನ್ನು ಸಬ್ಯಸಾಚಿ ವಿನ್ಯಾಸ ಮಾಡಲಿದ್ದಾರೆ. ವಿಕ್ಕಿ ಕೌಶಲ್ ತಂದೆ ಶ್ಯಾಮ್ ಕೌಶಲ್ ಮಾತ್ರ ಯಾರು ಏನೇ ಕೇಳಿದರೂ, ಮುಂಗಡ ಶುಭಾಶಯ ತಿಳಿಸಿದರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕತ್ರೀನಾ ಕೈಫ್, ವಿಕ್ಕಿ ಕೌಶಲ್ ಭೇಟಿ ಎಲ್ಲಿ? ಪ್ರೀತಿ ಶುರುವಾಗಿದ್ದು ಯಾವಾಗ? ಸಾಕಷ್ಟು ಸಮಾರಂಭಗಳಲ್ಲಿ ಕತ್ರೀನಾ ಕೈಫ್ ಜೊತೆ ವಿಕ್ಕಿ ಕೌಶಲ್ ಫ್ಲರ್ಟ್ ಮಾಡಿದ್ದರು, ನನ್ನಂತೆ ಇರುವ ಹುಡುಗನನ್ನು ಮದುವೆಯಾಗಿ ಅಂತ ಪರೋಕ್ಷವಾಗಿ ಹೇಳಿದ್ದರು. ಸಾಕಷ್ಟು ಬಾರಿ ವಿಕ್ಕಿ, ಕತ್ರೀನಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ದೀಪಾವಳಿಯ ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ಅವರಿಬ್ಬರು ಭೇಟಿಯಾಗಿದ್ದರು. ಕಾಫಿ ವಿತ್ ಕರಣ್ ಶೋ ನಂತರ ಅವರ ಸ್ನೇಹ ಮುಂದುವರೆದು, ಅವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆಯಿತು. ‘ಶೇರ್‌ಷಾ’ ಚಿತ್ರದ ಸ್ಕ್ರೀನಿಂಗ್ ವೇಳೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಒಟ್ಟಿಗೆ ಕ್ಯಾಮರಾ ಮುಂದೆ ಬಂದಿದ್ದರು. ಇತ್ತೀಚೆಗೆ ‘ಸರ್ದಾರ್ ಉಧಮ್ ಸಿಂಗ್’ ಚಿತ್ರದ ಸ್ಕ್ರೀನಿಂಗ್‌ನಲ್ಲೂ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಒಟ್ಟಿಗೆ ಕಾಣಿಸಿಕೊಂಡಿದ್ದರು.ಸಾಕಷ್ಟು ಬಾರಿ ಕತ್ರೀನಾ ಕೈಫ್ ಮನೆಗೆ ವಿಕ್ಕಿ ಬಂದಿದ್ದು ಕೂಡ ಕ್ಯಾಮರಾ ಕಣ್ಣಿಗೆ ಬಿದ್ದಿತ್ತು. ನಿಶ್ಚಿತಾರ್ಥದ ಸುದ್ದಿ ಪ್ರೀತಿ ಬಗ್ಗೆ ವಿಕ್ಕಿ ಕೌಶಲ್ ಆಗಲೀ, ಕತ್ರೀನಾ ಕೈಫ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಬ್ಬರು ಬಹಳ ಮೌನದಿಂದಿದ್ದಾರೆ, ಆದರೆ ವಿಕ್ಕಿ ಕೌಶಲ್ ಇತ್ತೀಚೆಗೆ ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ತೀನಿ ಎಂದಿದ್ದಾರೆ. ಕಳೆದ ಆಗಸ್ಟ್ 18 ರಂದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ದೊಡ್ಡ ವದಂತಿ ಹರಡಿತ್ತು.