![](https://vijaykarnataka.com/photo/88567466/photo-88567466.jpg)
ದೊಡ್ಮನೆ ಮಗ, ನಟ ಅವರು ನಮ್ಮನ್ನೆಲ್ಲ ಅಗಲಿ 2 ತಿಂಗಳು ಕಳೆದಿವೆ. ಆ ಹಿನ್ನೆಲೆಯಲ್ಲಿ ಇಂದು (ಡಿ.29) ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿಗೆ ಡಾ. ರಾಜ್ಕುಮಾರ್ ಕುಟುಂಬ ಭೇಟಿ ನೀಡಿ, ಪೂಜೆ ಸಲ್ಲಿಸಿದೆ. ಈ ವೇಳೆ ಮಾತನಾಡಿದ ಮತ್ತು , ತಾವು ದೇಹದಾನಕ್ಕೆ ನೋಂದಣಿ ಮಾಡಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಪ್ಪು ನೇತ್ರದಾನದ ಅರಿವು ಮೂಡಿಸಿದ'ಅಪ್ಪಾಜಿ ನೇತ್ರದಾನ ಮಾಡಿದ್ದರು. ಆ ಬಳಿಕ ನಾವೆಲ್ಲರೂ ಕೂಡ ನೇತ್ರದಾನಕ್ಕೆ ನೋಂದಣಿ ಮಾಡಿದ್ದೇವೆ. ಒಂದು ಹೆಜ್ಜೆ ಮುಂದೆ ಹೋಗಿ ನಾವು ದೇಹದಾನ ಮಾಡಲು ಕೂಡ ನೋಂದಣಿ ಮಾಡಿಸಿಕೊಂಡಿದ್ದೇವೆ. ಈಗ ಮಿಸ್ಡ್ ಕಾಲ್ ಮೂಲಕ ನೇತ್ರದಾನಕ್ಕೆ ನೋಂದಣಿ ಮಾಡಿಸುವ ಹೊಸ ಯೋಜನೆ ಮಾಡಿದ್ದಾರೆ. ಜನರಲ್ಲಿ ಈಗ ಇನ್ನೂ ಹೆಚ್ಚಿನ ಅರಿವು ಮೂಡಿದೆ. ಇವನು (ಅಪ್ಪು) ಬಂದು ಇನ್ನಷ್ಟು ಅರಿವು ಮೂಡಿಸಿ ಹೋಗಿದ್ದಾನೆ' ಎಂದು ಶಿವರಾಜ್ಕುಮಾರ್ ತಿಳಿಸಿದ್ದಾರೆ.
ವ್ಯಕ್ತಿತ್ವದಲ್ಲಿ ಅಪ್ಪು ನನಗಿಂತ ದೊಡ್ಡೋನು'ನಾನು ಜಾಸ್ತಿ ಸಮಾಧಿ ಸ್ಥಳಕ್ಕೆ ಬರುವುದಿಲ್ಲ. ಬಂದಾಗ ತುಂಬ ನೋವು ಆಗತ್ತೆ. ಪೂಜೆ ಎಲ್ಲ ಮಾಡಿದಾಗ, ಏನೋ ಅವನನ್ನು ದೂರ ತಳ್ಳುತ್ತ ಇದ್ದೀವೇನೋ ಅನ್ನಿಸಿಬಿಡುತ್ತದೆ. ಅವನ ನಗುಮುಖ ನೋಡಿದಾಗ ತುಂಬ ನೋವಾಗುತ್ತದೆ. ನಿಮಗೆ ಇಷ್ಟೊಂದು ನೋವು ಆಗುವಾಗ ನಮಗೆ ಎಷ್ಟು ಆಗುತ್ತಿರಬೇಕು? ಈ ದುಃಖವನ್ನು ಬಹಳ ಸುಲಭವಾಗಿ ಮರೆಯೋಕೆ ಆಗಲ್ಲ. ನಾನು ಅಪ್ಪುಗೆ ವಯಸ್ಸಿನಲ್ಲಿ ದೊಡ್ಡವನು. ಆದರೆ, ವ್ಯಕ್ತಿತ್ವದಲ್ಲಿ ಅಪ್ಪು ನನಗಿಂತ ದೊಡ್ಡೋನು' ಎಂದು ಶಿವಣ್ಣ ತಿಳಿಸಿದ್ದಾರೆ.
ಅಪ್ಪು ಕಣ್ಣಿನಿಂದ 4 ಜನರಿಗೆ ಬೆಳಕಾಗಿದೆ- ರಾಘಣ್ಣ 'ನಾನು ಮತ್ತು ಅಣ್ಣ (ಶಿವರಾಜ್ಕುಮಾರ್) ದೇಹದಾನ ಮಾಡಲು ನೋಂದಣಿ ಮಾಡಿಸಿದ್ದೇವೆ. ಬೆಂಕಿಯಲ್ಲೋ, ಮಣ್ಣಿನಲ್ಲೋ ಯಾಕೆ ಹೋಗಬೇಕು ದೇಹ? 4 ಜನಕ್ಕೆ ಸಹಾಯ ಆಗತ್ತೆ ಅಂದ್ರೆ ಯಾಕೆ ಮಾಡಬಾರದು? ನೀವು ಮಾಡಿ ಅಂತ ನಾವು ಯಾರಿಗೂ ಒತ್ತಾಯ ಮಾಡಲ್ಲ. ನೀವೇ ವಿಚಾರ ಮಾಡಿನೋಡಿ. ಅಪ್ಪು ಅವರ ಕಣ್ಣಿನಿಂದ 4 ಜನರಿಗೆ ಬೆಳಕಾಗಿದೆ ಅಂದಾಗ ಎಷ್ಟು ಖುಷಿಯಾಗುತ್ತದೆ. ಹೀಗೆ ಎಲ್ಲರೂ ಮಾಡುತ್ತ ಹೋದರೆ, ಈ ಪ್ರಪಂಚದಲ್ಲಿ ಅಂಧರೇ ಇರುವುದಿಲ್ಲ. ಮುಂದೆ ಯಾರಿಗಾದರೂ ಕಣ್ಣು ಬಂತು ಅಂದರೆ, ಕರ್ನಾಟಕದಿಂದ ಬಂತು ಅಂತ ಹೇಳಬೇಕು. ಅದು ನಮಗೊಂದು ಹೆಮ್ಮೆ' ಎಂದಿದ್ದಾರೆ ರಾಘಣ್ಣ.
'ಅಪ್ಪು ಇಲ್ಲವಾಗಿ 2 ತಿಂಗಳಾಗಿದೆ. ಅವನಿಗೆ ಏನೆಲ್ಲ ಇಷ್ಟವೋ, ಅದನ್ನೆಲ್ಲ ತಂದಿರಿಸಿ ಪೂಜೆ ಮಾಡಿದ್ದೇವೆ. ಅವನು ಮಾಡಿದ್ದನ್ನು ಮುಂದುವರಿಸಿಕೊಂಡು ಹೋಗಲು ಶಕ್ತಿ ಕೊಡಪ್ಪ ಎಂದು ಕೇಳಿಕೊಳ್ಳುತ್ತೇವೆ. ಅಣ್ಣಂದಿರಿಗೆ ದಾರಿ ತೋರಿಸಿಕೊಟ್ಟು ಹೋಗಿದ್ದಾನೆ' ಎಂದು ರಾಘಣ್ಣ ಹೇಳಿದ್ದಾರೆ.