![](https://vijaykarnataka.com/photo/90010902/photo-90010902.jpg)
ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಹೇಗಿರುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೇ ಇರುತ್ತದೆ, ಇದು ಈಗ ಸಹಜವಾಗಿಬಿಟ್ಟಿದೆ ಬಿಡಿ. ಆದರೆ "ನನ್ನ ವೈಯಕ್ತಿಕ ಜೀವನ ತಿಳಿದುಕೊಂಡು ಜನರು ಏನೂ ಮಾಡಬೇಕಿಲ್ಲ" ಎಂದು ನಟ ಮೋಹನ್ ಲಾಲ್ ಪುತ್ರ ಪ್ರಣವ್ ಹೇಳಿಬಿಟ್ಟಿದ್ದಾರೆ. ಈ ವಿಷಯವನ್ನು ಈಗ ಪ್ರಸ್ತಾಪ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಕೆಲವರಿಗೆ ಮೂಡಬಹುದು.
ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ '' ( )
ಮಲಯಾಳಂನಲ್ಲಿ ಜನವರಿಯಲ್ಲಿ 'ಹೃದಯಂ' ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತು. ಓಟಿಟಿಯಲ್ಲಿಯೂ ಕೂಡ ಜನರು ಈ ಚಿತ್ರವನ್ನು ಪದೇ ಪದೇ ನೋಡಿ ಹೊಗಳಿದ್ದಾರೆ. 6 ಕೋಟಿ ರೂಪಾಯಿ ಬಜೆಟ್‌ನಲ್ಲಿ ರೆಡಿಯಾದ ಈ ಚಿತ್ರ ಥಿಯೇಟರ್ ರಿಲೀಸ್ ಮಾಡಿದಾಗಲೇ 50 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ.
ಪ್ರೇಕ್ಷಕರು ಗೂಗಲ್ ಮಾಡಿದ ವಿಷಯ ಯಾವುದು?
'ಹೃದಯಂ' ಸಿನಿಮಾದ ಕಥೆ, ಚಿತ್ರಕಥೆ, ಹಾಡುಗಳು, ಸಿನಿಮಾಟೋಗ್ರಫಿಗೆ ಭಾರೀ ಮೆಚ್ಚುಗೆ ಸಿಕ್ಕಿದೆ. ಕೆಲ ಪ್ರೇಕ್ಷಕರು ಈ ಚಿತ್ರದ ಹೀರೋ, ಹೀರೋಯಿನ್ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡಿದ್ದರು. ಅಂದಹಾಗೆ ಈ ಚಿತ್ರದ ಹೀರೋ ನಟ ಮೋಹನ್ ಲಾಲ್ ( ) ಪುತ್ರ ಪ್ರಣವ್, ಹೀರೋಯಿನ್ ಕಲ್ಯಾಣಿ ಪ್ರಿಯದರ್ಶನ್. ಈ ಸಿನಿಮಾವನ್ನು ಮನದುಂಬಿ ಮೆಚ್ಚಿಕೊಂಡ ಪ್ರೇಕ್ಷಕರು ಪ್ರಣವ್ ಯಾರು? ಅವರ ಹಿನ್ನಲೆ ಏನು? ಪ್ರಣವ್‌ಗೆ ಮದುವೆಯಾಗಿದೆಯಾ? ಲವ್ವರ್ ಇದಾರಾ ಅಂತ ಗೂಗಲ್‌ನಲ್ಲಿ ಹೆಚ್ಚು ಹೆಚ್ಚು ಸರ್ಚ್ ಮಾಡುತ್ತಿದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ವೈಯಕ್ತಿಕ ವಿಷಯ ಹೇಳೋದು ಪ್ರಣವ್‌ಗೆ ಇಷ್ಟ ಇಲ್ಲ
"ವಿಶೇಷವಾಗಿ ಭಾರತದಲ್ಲಿಸೆಲೆಬ್ರಿಟಿಗಳ ಸಿನಿಮಾಗಳಿಗಿಂತ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಿಕ್ಕಾಪಟ್ಟೆ ಇರುತ್ತದೆ. ಈ ಕಾರಣಕ್ಕೆ ಇಟಲಿಯಲ್ಲಿ ನಾನು, ದೀಪಿಕಾ ಮದುವೆಯಾದೆವು, ಕೆಲ ವರ್ಷಗಳ ಕಾಲ ಪ್ರೀತಿ ವಿಷಯ ಮುಚ್ಚಿಟ್ಟೆವು" ಎಂದು ರಣ್‌ವೀರ್ ಸಿಂಗ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಂತೆಯೇ ನಟ ಮೋಹನ್ ಲಾಲ್ ಪುತ್ರ ಪ್ರಣವ್ ಕೂಡ ಅವರ ವೈಯಕ್ತಿಕ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿಯಾಗಲೀ, ಸಂದರ್ಶನದಲ್ಲಿಯಾಗಲೀ, ಇನ್ಯಾವುದೇ ಸಮಾರಂಭಗಳಲ್ಲಾಗಲೀ ಹೇಳಿಕೊಳ್ಳಲು ಬಯಸೋದಿಲ್ಲ. ಇನ್ನೂ ಕೆಲ ಸೆಲೆಬ್ರಿಟಿಗಳು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸಪರೇಟ್ ಆಗಿ ಇಡಲು ಬಯಸುತ್ತೇವೆ ಎಂದು ಈಗಾಗಲೇ ಹೇಳಿಕೆ ಕೂಡ ನೀಡಿದ್ದಾರೆ.
ದೊಡ್ಡ ಯಶಸ್ಸು ಕೊಟ್ಟ 'ಹೃದಯಂ' ( ) ( )
'ಹೃದಯಂ' ಸಿನಿಮಾ ಪ್ರಣವ್‌ಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಈಗ ಅವರಿಗೆ ಒಂದಾದ ಮೇಲೆ ಒಂದರಂತೆ ಸಿನಿಮಾ ಅವಕಾಶಗಳು ಬರುತ್ತಿವೆ. 2016ರಿಂದ ಬೆರಳೆಣಿಕೆ ಸಿನಿಮಾ ಮಾಡಿರುವ ಅವರಿಗೆ 'ಆದಿ' ಚಿತ್ರದ ನಂತರ ಇದು ಎರಡನೇ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿದ್ದಾಗಿದೆ.