Totapuri:‘ಬಾಗ್ಲು ತೆಗಿ ಮೇರಿ ಜಾನ್‌’ ಎಂದು ಜಗ್ಗೇಶ್‌, ಅದಿತಿ ಪ್ರಭುದೇವ ಹೇಳಿದ್ದಕ್ಕೆ ಪ್ಯಾರ್, ದಿಲ್ ಕೊಟ್ಟ ಪ್ರೇಕ್ಷಕರು

ನಟ ಜಗ್ಗೇಶ್, ಅದಿತಿ ಪ್ರಭುದೇವ ನಟನೆಯ 'ತೋತಾಪುರಿ' ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್‌’ ಹಾಡನ್ನು ಅನೇಕರು ಮೆಚ್ಚಿದ್ದಾರೆ. ಈ ಹಾಡನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Totapuri:‘ಬಾಗ್ಲು ತೆಗಿ ಮೇರಿ ಜಾನ್‌’ ಎಂದು ಜಗ್ಗೇಶ್‌, ಅದಿತಿ ಪ್ರಭುದೇವ ಹೇಳಿದ್ದಕ್ಕೆ ಪ್ಯಾರ್, ದಿಲ್ ಕೊಟ್ಟ ಪ್ರೇಕ್ಷಕರು
Linkup
'ಕಭಿ ಕಿಸಿಸೇ ಪ್ಯಾರ್ ದಿಯಾ, ಕಭಿ ಕಿಸಿಕೋ ಪ್ಯಾರ್ ದಿಯಾ' ಎಂಬ ಸಾಲುಗಳನ್ನು ಅನೇಕರು ಕೇಳಿರುತ್ತೀರಿ. ಈಗ ಕೋಟ್ಯಂತರ ಮಂದಿ '' ಸಿನಿಮಾದ ಹಾಡಿಗೆ ಪ್ಯಾರ್ ಕೊಟ್ಟಿದ್ದಾರೆ, ದಿಲ್ ಕೂಡ ನೀಡಿದ್ದಾರೆ. 14 ಕೋಟಿ ವೀಕ್ಷಣೆ ( Baglu tegi meri jaan ) 'ನವರಸ ನಾಯಕ' ಜಗ್ಗೇಶ್‌ ನಟನೆಯ ‘ತೋತಾಪುರಿ’ ಸಿನಿಮಾ ತನ್ನ ‘ಬಾಗ್ಲು ತೆಗಿ ಮೇರಿ ಜಾನ್‌’ ಹಾಡಿನಿಂದ ಸದ್ದು ಮಾಡುತ್ತಿದೆ. ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಲ್ಲೂ ಈ ಸಿನಿಮಾದ ಹಾಡಿನ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದರೂ ಈ ಹಾಡನ್ನು ಹದಿನಾಲ್ಕು ಕೋಟಿಗೂ ಅಧಿಕ ಮಂದಿ ನೋಡಿದ್ದಾರೆ. ಇತ್ತೀಚೆಗೆ ಬಂದ ಹಾಡುಗಳ ಪೈಕಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದ ಹಾಡು ಇದಾಗಿದ್ದು, ದಿನದಿಂದ ದಿನಕ್ಕೆ ಇದರ ಕ್ರೇಜ್‌ ಹೆಚ್ಚಾಗುತ್ತಲೇ ಇದೆ. ರೀಲ್ಸ್‌ನಲ್ಲಿ ಈ ಹಾಡಿಗೆ ಡಾನ್ಸ್‌ ಮಾಡಿ ಅಪ್ಲೋಡ್‌ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಸಿನಿಮಾದಲ್ಲಿರುವ ಕಂಟೆಂಟ್‌ನ ಒಂದು ಝಲಕ್‌ ( Totapuri Movie ) ನಿರ್ದೇಶಕ ವಿಜಯಪ್ರಸಾದ್‌ ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ಹಲವು ಆ್ಯಪ್‌ಗಳಲ್ಲೂ ಈ ಹಾಡಿನ ತುಣುಕು ಹರಿದಾಡುತ್ತಿದೆ. ‘ಜನ ಈ ಹಾಡನ್ನು ಈ ಮಟ್ಟದ ಹಿಟ್‌ ಮಾಡಿರುವುದಕ್ಕೆ ನನಗೆ ಅವರಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೊ ಗೊತ್ತಾಗುತ್ತಿಲ್ಲ. ನನ್ನ ಸಿನಿಮಾದಲ್ಲಿರುವ ಕಂಟೆಂಟ್‌ನ ಒಂದು ಝಲಕ್‌ ಈ ಹಾಡಿನಲ್ಲಿದೆ ಅಷ್ಟೇ. ನಿರ್ಮಾಪಕ ಕೆ. ಎ. ಸುರೇಶ್‌ ಅವರ ಸಹಕಾರದಿಂದ ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ಸದ್ಯದಲ್ಲೇ ರಿಲೀಸ್‌ ದಿನಾಂಕವನ್ನು ಸಹ ಹೇಳುತ್ತೇವೆ’ ಎಂದಿದ್ದಾರೆ ನಿರ್ದೇಶಕ ವಿಜಯ್‌ ಪ್ರಸಾದ್‌. ಧನ್ಯವಾದ ತಿಳಿಸಿದ , ( Jaggesh, ) 'ತೋತಾಪುರಿ' ಚಿತ್ರದ ಹಾಡಿಗೆ ನಿಮ್ಮೆಲ್ಲರ ಸಾಕಷ್ಟು ಪ್ರೀತಿ ದೊರೆತಿದೆ . ಇಡೀ ಚಿತ್ರತಂಡದ ವತಿಯಿಂದ ಪ್ರೀತಿ ತೋರಿದ ಎಲ್ಲ ಹೃದಯಗಳಿಗೆ ಧನ್ಯವಾದಗಳು" ಎಂದು ಅದಿತಿ ಪ್ರಭುದೇವ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. "ಹೃದಯಪೂರ್ವಕ ಧನ್ಯವಾದ ಈ ಪ್ರೀತಿಗೆ" ಎಂದು ನಟ ಜಗ್ಗೇಶ್ ಹೇಳಿದ್ದಾರೆ. ಸಿನಿಮಾದಲ್ಲಿ ಯಾರು ನಟಿಸಿದ್ದಾರೆ? ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಮೊದಲ ಕಾಮಿಡಿ ಸಿನಿಮಾ ಎಂಬ ಖ್ಯಾತಿಯೂ ತೋತಾಪುರಿಗೆ ಇದೆ. ಇದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಡಾಲಿ ಧನಂಜಯ, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌, ಹೇಮಾ ದತ್‌ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.