
ಮುಂಬಯಿ: ‘’ ಎಂಬ ಕೈಗೆಟುಕುವ ದರದ 4ಜಿ ಫೋನನ್ನು ಗುರುವಾರ ಬಿಡುಗಡೆ ಮಾಡಿದೆ. ಲಿ.ನ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿ ಅಧ್ಯಕ್ಷ ಈ ಫೋನ್ ಬಿಡುಗಡೆ ಮಾಡಿದ್ದಾರೆ.
ಗೂಗಲ್ ಜತೆ ಸೇರಿ ರಿಲಯನ್ಸ್ ಜಿಯೋ ಈ ಫೋನ್‌ನನ್ನು ಅಭಿವೃದ್ಧಿಪಡಿಸಿದೆ. ಕೈಗೆಟುಕುವ ದರದಲ್ಲಿ ವೈಶಿಷ್ಟ್ಯ ಭರಿತ ಅಪ್ಲಿಕೇಶನ್‌ಗಳಿರುವ ಫೋನ್ ಇದಾಗಿದೆ ಎಂದು ಅಂಬಾನಿ ಹೇಳಿದ್ದಾರೆ.
"ಜಿಯೋ ವಿಶ್ವದ ಅತ್ಯುತ್ತಮ ಗುಣಮಟ್ಟದ, ಅತ್ಯಂತ ಒಳ್ಳೆ 4ಜಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕವನ್ನು ನಿಜವಾಗಿಯೂ ಪ್ರಜಾಪ್ರಭುತ್ವಗೊಳಿಸಿದೆ. ಹೀಗಿದ್ದೂ ಭಾರತವು ಇನ್ನೂ ಸುಮಾರು 30 ಕೋಟಿ ಸಾಮಾನ್ಯ ಮೊಬೈಲ್ ಬಳಕೆದಾರರನ್ನು ಹೊಂದಿದ್ದು, ಇವರಿಗೆ ಅಸಮರ್ಥ 2ಜಿ ಸೇವೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಮೂಲ ಬೆಲೆಯ 4ಜಿ ಸ್ಮಾರ್ಟ್‌ಫೋನ್‌ನ್ನು ಸಹ ಇವರಿಗೆ ಕೊಳ್ಳಲಾಗುತ್ತಿಲ್ಲ. ಆದ್ದರಿಂದ, ಭಾರತವನ್ನು '2 ಜಿ-ಮುಕ್ತ' ಮಾಡಲು ಕೈಗೆಟುಕುವ ದರದ 4ಜಿ ಸ್ಮಾರ್ಟ್‌ಫೋನ್ ಅತ್ಯಗತ್ಯ," ಎಂದು ಅಂಬಾನಿ ಪ್ರತಿಪಾದಿಸಿದ್ದಾರೆ.
ಜಿಯೋಫೋನ್ ನೆಕ್ಸ್ಟ್ ಹೆಸರಿನ ಈ ಫೋನ್‌ನ್ನು ಗೂಗಲ್ ಮತ್ತು ಜಿಯೋ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಇದು ಗೂಗಲ್ ಮತ್ತು ಜಿಯೋದ ಎಲ್ಲಾ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಇದರಲ್ಲಿ ಭಾರತಕ್ಕೆಂದೇ ಅಭಿವೃದ್ಧಿಪಡಿಸಿದ ಆಂಡ್ರಾಯ್ಡ್ ಅಪ್ಲಿಕೇಶನ್ ಇರಲಿದೆ.
ಧ್ವನಿ ಸಹಾಯಕ, ಪರದೆ ಮೇಲಿನ ಬರಹದ ಸ್ವಯಂಚಾಲಿತ ಓದು, ಭಾಷೆಗಳ ತರ್ಜುಮೆ, ಫಿಲ್ಟರ್‌ಗಳನ್ನು ಹೊಂದಿದ ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಹಲವು ಫೀಚರ್‌ಗಳನ್ನು ಈ ಫೋನ್ ಹೊಂದಿರಲಿದೆ.
ಜಿಯೋಫೋನ್ ನೆಕ್ಸ್ಟ್ ಬಿಡುಗಡೆಯಾಗಿದ್ದರೂ ಸದ್ಯಕ್ಕೆ ಮಾರಾಟ ಲಭ್ಯವಿಲ್ಲ. ಈ ವರ್ಷದ ಸೆಪ್ಟೆಂಬರ್ 10 ರಂದು ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ. ಆದರೆ ಇದರ ದರವನ್ನು ಇನ್ನೂ ಬಹಿರಂಗಪಡಿಸಿಲ್ಲ.