ದಿಲ್ಲಿಯಲ್ಲಿ ಪೆಟ್ರೋಲ್ ದರ 8 ರೂ ಕಡಿತಗೊಳಿಸಿದ ಕೇಜ್ರಿವಾಲ್ ಸರ್ಕಾರ

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಗ್ಗಿಸಿ ಸುಮಾರು ಒಂದು ತಿಂಗಳ ಬಳಿಕ ದಿಲ್ಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ದರ 8 ರೂ ಕಡಿತಗೊಳಿಸಿದ ಕೇಜ್ರಿವಾಲ್ ಸರ್ಕಾರ
Linkup
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಹನ ಸವಾರರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಬುಧವಾರ ಖುಷಿ ಸುದ್ದಿ ನೀಡಿದೆ. ಪೆಟ್ರೋಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆ () ಅನ್ನು ಸರ್ಕಾರ ಶೇ 30 ರಿಂದ ಶೇ 19.40ಗೆ ಕಡಿತ ಮಾಡಿದೆ. ಈ ತೆರಿಗೆ ಇಳಿಕೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಪ್ರತಿ ಲೀಟರ್‌ಗೆ 8 ರೂಪಾಯಿಯಷ್ಟು ಕಡಿಮೆಯಾಗಿದೆ. ಹೊಸ ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ದಿಲ್ಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಪ್ರಸ್ತುತ 103.97 ರೂ ಇದೆ. ತೆರಿಗೆ ಕಡಿತದ ಬಳಿಕ ಪೆಟ್ರೋಲ್ ಬೆಲೆ ಲೀಟರ್‌ಗೆ 95.97 ರೂ ಆಗಲಿದೆ. ದರ ಲೀಟರ್‌ಗೆ 86.67 ರೂ ಇದೆ. ಡೀಸೆಲ್ ಮೇಲಿನ ವ್ಯಾಟ್ ಕಡಿತಕ್ಕೆ ಎಎಪಿ ಸರ್ಕಾರ ಮುಂದಾಗಿಲ್ಲ. ತೈಲ ಕಂಪೆನಿಗಳು ಸತತ 27ನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನವೆಂಬರ್ ಮೊದಲ ವಾರದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕದಲ್ಲಿ ಕಡಿತ ಮಾಡಿ ಆದೇಶ ಹೊರಡಿಸಿತ್ತು. ಇದರಿಂದ ಪೆಟ್ರೋಲ್ ದರ 5 ರೂ ಹಾಗೂ ಡೀಸೆಲ್ ದರ 10 ರೂ ಇಳಿಕೆಯಾಗಿತ್ತು. ಈ ಘೋಷಣೆ ಬೆನ್ನಲ್ಲೇ ದಿಲ್ಲಿಯಲ್ಲಿನ ವಿರೋಧ ಪಕ್ಷ ಬಿಜೆಪಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು 10 ರೂದಷ್ಟು ಕಡಿತಗೊಳಿಸಬೇಕು ಎಂದು ಒತ್ತಾಯಿಸಿತ್ತು. ಮೆಟ್ರೋ ನಗರಗಳ ಪೈಕಿ ಅತಿ ಹೆಚ್ಚು ದರಕ್ಕೆ ಪೆಟ್ರೋಲ್ ಮಾರಾಟವಾಗುತ್ತಿರುವುದು ವಾಣಿಜ್ಯ ನಗರಿ ಮುಂಬಯಿಯಲ್ಲಿ. ಇಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂ ಇದೆ. ಡೀಸೆಲ್ 94.14 ರೂ ದರದಂತೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರವು ಅಬಕಾರಿ ಸುಂಕ ಕಡಿತಗೊಳಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಇಳಿಕೆ ಮಾಡಿತ್ತು. ಎರಡೂ ತೈಲಗಳು ತಲಾ ಏಳು ರೂ ಇಳಿಕೆಯಾಗಿದ್ದವು. ಬುಧವಾರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 100.58 ರೂ ಇದೆ. ಡೀಸೆಲ್ ಬೆಲೆ 85.01 ರೂದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಜಾಗತಿಕವಾಗಿ ಶೇ 2ಕ್ಕಿಂತಲೂ ಅಧಿಕವಾಗಿದೆ. ಕೆಲವು ದಿನಗಳ ಹಿಂದೆ ತೈಲೆ ಬೆಲೆಯಲ್ಲಿ ಇಳಿಕೆಯಾಗಿತ್ತು. ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 1.90 ಡಾಲರ್‌ನಷ್ಟು (ಶೇ 2.7) ಅಧಿಕವಾಗಿದೆ. ಇದರಿಂದ ಒಂದು ಬ್ಯಾರೆಲ್ ದರ 71.13ರಷ್ಟು ಏರಿಕೆಯಾಗಿದೆ. ಮಂಗಳವಾರ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಶೇ 3.9ರಷ್ಟು ಕುಸಿತ ಕಂಡಿತ್ತು.