ನಾಲ್ಕನೇ ತ್ರೈಮಾಸಿಕದಲ್ಲಿ 759 ಕೋಟಿ ರೂ. ನಿವ್ವಳ ಲಾಭ ಗಳಿಸಿದ ಏರ್‌ಟೆಲ್‌

2019-20ರ ನಾಲ್ಕನೇ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಬರೋಬ್ಬರಿ 5,237 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ ಈ ಬಾರಿ ನಷ್ಟವನ್ನು ಮೀರಿ ಟೆಲಿಕಾಂ ದೈತ್ಯ ಏರ್‌ಟೆಲ್‌ 759 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ 759 ಕೋಟಿ ರೂ. ನಿವ್ವಳ ಲಾಭ ಗಳಿಸಿದ ಏರ್‌ಟೆಲ್‌
Linkup
ಮುಂಬಯಿ: ಮಾರ್ಚ್‌ 31, 2021ಕ್ಕೆ ಅಂತ್ಯವಾದ ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದೈತ್ಯ 759 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕೊರೊನಾ ಕಾರಣಕ್ಕೆ ಮನೆಯಿಂದ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಳವಾಗಿದ್ದು ಮತ್ತು ಈ ಅವಧಿಯಲ್ಲಿ ಹೆಚ್ಚಿನ ಗ್ರಾಹಕರನ್ನು ಸಂಪಾದಿಸಿದ್ದು ಕಂಪನಿಯ ಲಾಭ ಗಳಿಕೆಗೆ ಪ್ರಮುಖ ಕಾರಣವಾಗಿದೆ. ಈ ಅವಧಿಯಲ್ಲಿ ಕಂಪನಿ 25,747 ಕೋಟಿ ರೂ. ಆದಾಯ ಗಳಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಂಪನಿ 23,018 ಕೋಟಿ ರೂ. ಆದಾಯ ಗಳಿಸಿತ್ತು. ಕಂಪನಿಯ ಆದಾಯ ಗಳಿಕೆ ಶೇ. 12ರಷ್ಟು ಹೆಚ್ಚಾಗಿದೆ. ಇನ್ನು ಲಾಭದ ವಿಚಾರಕ್ಕೆ ಬರುವುದಾದರೆ 2019-20ರ ನಾಲ್ಕನೇ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಬರೋಬ್ಬರಿ 5,237 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ ಇದೀಗ ನಷ್ಟವನ್ನು ಮೀರಿ ಲಾಭ ಗಳಿಸಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿಯೂ ಕಂಪನಿ ಲಾಭ ಗಳಿಸಿತ್ತು. ಭಾರತದ ವ್ಯವಹಾರದಿಂದಲೇ ಕಂಪನಿ 18,338 ಕೋಟಿ ರೂ. ಆದಾಯ ಗಳಿಸಿದೆ. ಮೊಬೈಲ್‌ ವ್ಯವಹಾರದಲ್ಲಿ ಕೂಡ ಶೇ. 19.1ರಷ್ಟು ಪ್ರಗತಿ ಸಾಧಿಸಿದೆ. ಇನ್ನು ಪ್ರತಿ ಗ್ರಾಹಕನಿಂದ ಸಂಗ್ರಹಿಸುವ ಸರಾಸರಿ ಆದಾಯ (ಎಆರ್‌ಪಿಯು) 145 ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದು 135 ರೂಪಾಯಿ ಇತ್ತು. ಟೆಲಿಕಾಂ ಉದ್ಯಮದಲ್ಲೇ ಗರಿಷ್ಠ ಎಆರ್‌ಪಿಯುವನ್ನು ಏರ್‌ಟೆಲ್‌ ಹೊಂದಿದೆ. ಜಿಯೋದ ಎಆರ್‌ಪಿಯು 138 ರೂ. ಇದೆ.