Hindi Divas: ದೇಶದ ಏಕತೆಗೆ ಹಿಂದಿ ಅಗತ್ಯ. ಹಿಂದಿ ಬಳಸುವಂತೆ ನಾವೆಲ್ಲ ಪ್ರತಿಜ್ಞೆ ಮಾಡಬೇಕು: ಅಮಿತ್‌ ಶಾ

ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಿಂದಿ ಭಾಷಣ ಮಾಡುತ್ತಾರೆ ಎಂದಾದರೇ ನಾವೇಕೆ ಹಿಂದಿ ಮಾತನಾಡಲು ಹಿಂದೇಟು ಹಾಕಬೇಕು? ಹಿಂದಿ ಬಳಕೆ ಮಾಡುವಂತೆ ರಾಷ್ಟ್ರವಾಸಿಗಳಿಗೆ ಗೃಹ ಸಚಿವ ಕರೆ

Hindi Divas: ದೇಶದ ಏಕತೆಗೆ ಹಿಂದಿ ಅಗತ್ಯ. ಹಿಂದಿ ಬಳಸುವಂತೆ ನಾವೆಲ್ಲ ಪ್ರತಿಜ್ಞೆ ಮಾಡಬೇಕು: ಅಮಿತ್‌ ಶಾ
Linkup
ಹೊಸ ದಿಲ್ಲಿ: ಹಾಗೂ ವಿರುದ್ಧ ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದರೇ, ಗೃಹ ಸಚಿವ ಮತ್ತೆ ಹಿಂದಿ ದಿವಸ್‌ ಅನ್ನು ಸಮರ್ಥನೆ ಮಾಡಿದ್ದಾರೆ. ರಾಷ್ಟ್ರದ ಏಕತೆ ಮತ್ತು ಸಾಂಸ್ಕೃತಿಕ ಪ್ರಜ್ಞೆಗೆ ಹಿಂದಿ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೇ ದೇಶದ ಎಲ್ಲಾ ನಾಗರೀಕರು ಹಿಂದಿ ಭಾಷೆಯನ್ನು ಬಳಕೆ ಮಾಡುವಂತೆ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ನಡೆದ ಹಿಂದಿ ದಿವಸ್‌ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಹಿಂದಿ ಭಾಷೆ ದೇಶದ ಎಲ್ಲಾ ಭಾಷೆಗಳ ಸ್ನೇಹಿತ. ಹೀಗಾಗಿ ಎಲ್ಲಾ ಭಾಷೆಗಳನ್ನು ಬೆಂಬಲಿಸಬೇಕು ಹಾಗೂ ಪ್ರಚಾರ ಮಾಡಬೇಕು' ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಮಕ್ಕಳು ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಮನೆಯಲ್ಲಿ ಮಾತೃಭಾಷೆಯನ್ನೇ ಮಾತನಾಡಬೇಕು. ಇಲ್ಲದಿದ್ದರೇ ಮಕ್ಕಳು ಮೂಲವನ್ನು ಮರೆತು ಹೋಗುತ್ತಾರೆ ಎಂದು ಹೇಳಿದ್ದಾರೆ. 'ಹಿಂದಿ ದಿವಸದ ಈ ಘಳಿಗೆಯಲ್ಲಿ ದೇಶದ ಎಲ್ಲಾ ನಾಗರಿಕರು, ತಮ್ಮ ಮಾತೃಭಾಷೆಯ ಜತೆಗೆ ದೇಶದ ಅಧಿಕೃತ ಭಾಷೆಗಳಲ್ಲಿ ಒಂದಾದ ಹಿಂದಿಯನ್ನು ಬಳಕೆ ಮಾಡುವುದಾಗಿ ಶಪಥ ಮಾಡಬೇಕು. ಭಾರತದ ಅಭಿವೃದ್ಧಿ ಮಾತೃ ಭಾಷೆ ಹಾಗೂ ಪ್ರಾದೇಶಿಕ ಭಾಷೆಯ ಸಂಯೋಜನೆಯಲ್ಲಿ ನಿಂತಿದೆ' ಎಂದು ಅಭಿಪ್ರಾಯ ಪಟ್ಟರು. ಅಲ್ಲದೇ ಭಾಷೆಯಲ್ಲೂ ಆತ್ಮನಿರ್ಭರವಾಗಬೇಕು ಎಂದು ಕರೆ ನೀಡಿರುವ ಅವರು, ರಾಷ್ಟ್ರೀಯ ಏಕತೆ ಹಾಗೂ ಸಾಂಸ್ಕೃತಿಕ ಪ್ರಜ್ಞೆಗೆ ಹಿಂದಿ ಭಾಷೆ ಅಗತ್ಯ. ಪುರಾತನ ನಾಗರೀಕತೆ ಹಾಗೂ ಆಧುನಿಕ ಅಭಿವೃದ್ಧಿ ನಡುವೆ ಸೇತುವಾಗಿ ಹಿಂದಿ ಕೆಲಸ ನಿರ್ವಹಿಸುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಿಂದಿ ಭಾಷಣ ಮಾಡುತ್ತಾರೆ ಎಂದಾದರೇ ನಾವೇಕೆ ಹಿಂದಿ ಮಾತನಾಡಲು ಹಿಂದೇಟು ಹಾಕಬೇಕು? ಕೋವಿಡ್‌ ವೇಳೆ ದೇಶವನ್ನುದ್ದೇಶಿ ಭಾಷಣ ಮಾಡುವಾಗ ಹಾಗೂ ಕೋವಿಡ್‌ ನಿಗ್ರಹಕ್ಕೆ ಬೇಕಾಗಿ ಸಂಬಂಧಪಟ್ಟ ವ್ಯಕ್ತಿಗಳ ಜತೆ ಮಾತನಾಡುವಾಗ ಪ್ರಧಾನಿಯವರು ಹಿಂದಿಯಲ್ಲೇ ಸಂವಹನ ಮಾಡಿದ್ದಾರೆ. ಇದು ತಳ ಮಟ್ಟದ ವರೆಗೆ ತಲುಪಲು ಕಾರಣವಾಯ್ತು ಎಂದು ಶಾ ನುಡಿದಿದ್ದಾರೆ. ಅಲ್ಲದೇ ಇದೇ ವೇಳೆ ಹಿಂದಿ ಜತೆಗೆ ಇತರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೂ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಶಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೇಶ ವಾಸಿಗಳಿಗೆ ಹಿಂದಿ ದಿವಸದ ಶುಭಾಶಯಗಳನ್ನು ಕೋರಿದ್ದು, 'ದೇಶದ ವಿವಿಧ ಭಾಗಗಳ ಮಂದಿ ಹಿಂದಿಯನ್ನು ಸಮರ್ಥ ಭಾಷೆಯನ್ನಾಗಿ ಮಾಡಲು ಉಲ್ಲೇಖನೀಯ ಭೂಮಿಕೆಯನ್ನು ನಿಭಾಯಿಸಿದ್ದಾರೆ. ಅವರೆಲ್ಲರ ಪ್ರಯಾಸದ ಫಲವಾಗಿ ಇಂದು ಹಿಂದಿ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ' ಎಂದು ಟ್ವೀಟ್‌ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಿಂದಿ ದಿವಸದ ಬಗ್ಗೆ ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದು, ಒಂದು ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕಾದರೇ ಇನ್ನೊಂದು ಭಾಷೆಯ ಬಗ್ಗೆ ಜ್ಞಾನ ಇರಬೇಕು ಎಂದು ಹೇಳಿದ್ದಾರೆ.