ಡಬಲ್ ಎಂಜಿನ್ ಅಭಿವೃದ್ಧಿ ಏನು ಅನ್ನೋದಕ್ಕೆ ಉತ್ತರಪ್ರದೇಶ ಅತ್ಯುತ್ತಮ ಉದಾಹರಣೆ; ನರೇಂದ್ರ ಮೋದಿ

ಉತ್ತರ ಪ್ರದೇಶವು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯುತ್ತಮ ರಾಜ್ಯ ಎನ್ನಿಸಿದೆ. ಡಬಲ್‌ ಎಂಜಿನ್‌ ಅಭಿವೃದ್ಧಿ ಎಂದರೆ ಏನು ಎಂದು ಕೇಳುವವರಿಗೆ ಇದು ಸೂಕ್ತ ನಿದರ್ಶನ ಒದಗಿಸುವ ರಾಜ್ಯವಾಗಿದೆ ಎಂದ ನರೇಂದ್ರ ಮೋದಿ, ಬಿಜೆಪಿ ಅಧಿಕಾರದೊಂದಿಗೆ ರಾಜ್ಯದಲ್ಲಿ ಸುಧಾರಣೆಯ ಪರ್ವ ಕಾಲ ಆರಂಭಗೊಂಡಿತು. ಅದಕ್ಕೂ ಹಿಂದೆ ಬಡವರಿಗಾಗಿ ಮೀಸಲಿಟ್ಟ ಯೋಜನೆಗಳಿಗೂ ಕಿಡಿಗೇಡಿಗಳು ಅಡ್ಡಿಪಡಿಸುತ್ತಿದ್ದರು. ಈಗ ಎಲ್ಲಾ ಯೋಜನೆಗಳೂ ನೇರ ಫಲಾನುಭವಿಗಳ ಮನೆ ತಲುಪುತ್ತಿವೆ' ಎಂದು ಹೇಳಿದರು.

ಡಬಲ್ ಎಂಜಿನ್ ಅಭಿವೃದ್ಧಿ ಏನು ಅನ್ನೋದಕ್ಕೆ ಉತ್ತರಪ್ರದೇಶ ಅತ್ಯುತ್ತಮ ಉದಾಹರಣೆ; ನರೇಂದ್ರ ಮೋದಿ
Linkup
ಅಲಿಗಢ: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದಲ್ಲಿ ಪ್ರಧಾನಿ ಮಂಗಳವಾರ ಯೋಗಿ ಆದಿತ್ಯನಾಥ್‌ ಸರಕಾರದ ಗುಣಗಾನ ಮಾಡಿದರು. ಅಲಿಗಢದಲ್ಲಿ ಬಹು ನಿರೀಕ್ಷಿತ 'ರಾಜಾ ಮಹೇಂದ್ರ ಪ್ರತಾಪ್‌ ಸಿಂಗ್‌ ವಿಶ್ವವಿದ್ಯಾಲಯ'ಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, '2017 ಕ್ಕಿಂತ ಮೊದಲು ಉತ್ತರ ಪ್ರದೇಶ ರಾಜ್ಯದಲ್ಲಿ ಮಾಫಿಯಾ ಮತ್ತು ಗ್ಯಾಂಗ್‌ಸ್ಟರ್‌ಗಳೇ ರಾಜ್ಯ ಆಳುತ್ತಿದ್ದರು. ಈಗ ಯೋಗಿ ಆದಿತ್ಯನಾಥ್‌ ಆಡಳಿತದಲ್ಲಿ ಎಲ್ಲವೂ ಬದಲಾಗಿದ್ದು ದುಷ್ಟ ಶಕ್ತಿಗಳು ಕಂಬಿ ಎಣಿಸುವಂತಾಗಿದೆ. ರಾಜ್ಯದ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಶಕ್ತಿ ಪ್ರಾಪ್ತವಾಗಿದೆ ಎಂದು ಹೇಳಿದರು. ಉತ್ತರ ಪ್ರದೇಶವು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯುತ್ತಮ ರಾಜ್ಯ ಎನ್ನಿಸಿದೆ. ಡಬಲ್‌ ಎಂಜಿನ್‌ ಅಭಿವೃದ್ಧಿ ಎಂದರೆ ಏನು ಎಂದು ಕೇಳುವವರಿಗೆ ಇದು ಸೂಕ್ತ ನಿದರ್ಶನ ಒದಗಿಸುವ ರಾಜ್ಯವಾಗಿದೆ ಎಂದ ನರೇಂದ್ರ ಮೋದಿ, ಬಿಜೆಪಿ ಅಧಿಕಾರದೊಂದಿಗೆ ರಾಜ್ಯದಲ್ಲಿ ಸುಧಾರಣೆಯ ಪರ್ವ ಕಾಲ ಆರಂಭಗೊಂಡಿತು. ಅದಕ್ಕೂ ಹಿಂದೆ ಬಡವರಿಗಾಗಿ ಮೀಸಲಿಟ್ಟ ಯೋಜನೆಗಳಿಗೂ ಕಿಡಿಗೇಡಿಗಳು ಅಡ್ಡಿಪಡಿಸುತ್ತಿದ್ದರು. ಈಗ ಎಲ್ಲಾ ಯೋಜನೆಗಳೂ ನೇರ ಫಲಾನುಭವಿಗಳ ಮನೆ ತಲುಪುತ್ತಿವೆ' ಎಂದು ಹೇಳಿದರು. ಜಾಟ್‌ ಸಮುದಾಯದ ಪ್ರಭಾವಿ ನಾಯಕರೂ ಆಗಿದ್ದ ಮಹೇಂದ್ರ ಪ್ರತಾಪ್‌ ಸಿಂಗ್‌ ಹೆಸರಲ್ಲಿ ವಿವಿ ಸ್ಥಾಪನೆ ಹಿಂದೆ ಕೆಲವೇ ತಿಂಗಳಲ್ಲಿ ನಡೆಯುವ ಚುನಾವಣೆ ಲೆಕ್ಕಾಚಾರವೂ ಇದ್ದು, ಜಾಟ್ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮಹೇಂದ್ರ ಪ್ರತಾಪ್‌ ಸಿಂಗ್‌ ಹೆಸರಲ್ಲಿ ವಿವಿ ಸ್ಥಾಪನೆಗೆ ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಭಯೋತ್ಪಾದನೆಯ ತಾಯಿ; ಆದಿತ್ಯನಾಥ್ಸಂತ ಕಬೀರ್ ನಗರದಲ್ಲಿ ಜಿಲ್ಲಾ ಕಾರಾಗೃಹದ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಅನ್ನು ಭಯೋತ್ಪಾದನೆಯ ತಾಯಿ ಎಂದು ಹೇಳುವ ಮೂಲಕ ವಿಷ ಕಾರಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದಲ್ಲಿಯೇ ಭಯೋತ್ಪಾದನೆಯ ವಿಷ ಬೀಜ ಬಿತ್ತಿದ ಪಕ್ಷ ಎಂದು ಕಿಡಿಕಾರಿದರಲ್ಲದೇ, 2022ರ ಚುನಾವಣೆಯ ನಂತರ ಕಾಂಗ್ರೆಸ್ ನಿರ್ನಾಮವಾಗಿ ಹೋಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆಲ್ಲುವುದು ಕೂಡ ಅನುಮಾನ ಎಂದಿದ್ದಾರೆ.