ಮಂದಿರ ಟ್ರಸ್ಟ್ ಸದಸ್ಯನ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದ ಪತ್ರಕರ್ತನ ವಿರುದ್ಧ ಎಫ್‌ಐಆರ್!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯನ ವಿರುದ್ಧ ಭೂಹಗರಣದ ಆರೋಪ ಮಾಡಿದ್ದ ಓರ್ವ ಪತ್ರಕರ್ತ ಹಾಗೂ ಇತರ ಇಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂದಿರ ಟ್ರಸ್ಟ್ ಸದಸ್ಯನ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದ ಪತ್ರಕರ್ತನ ವಿರುದ್ಧ ಎಫ್‌ಐಆರ್!
Linkup
ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯನ ವಿರುದ್ಧ ಭೂಹಗರಣದ ಆರೋಪ ಮಾಡಿದ್ದ ಓರ್ವ ಪತ್ರಕರ್ತ ಹಾಗೂ ಇತರ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಮುಖಂಡ ಹಾಗೂ ರಾಮ ಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಹೋದರ ಸಂಜಯ್ ಬನ್ಸಲ್ ದಾಖಲಿಸಿದ್ದ ದೂರಿನ ಅನ್ವಯ, ಪತ್ರಕರ್ತ ವಿನೀತ್ ನರೈನ್, ಅಲ್ಕಾ ಲಾಹೋತಿ ಮತ್ತು ರಜನೀಶ್ ಎಂಬುವವವರ ವಿರುದ್ಧ ಯುಪಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿರುದ್ಧ ಸುಳ್ಳು ಭೂಹಗರಣದ ಆರೋಪ ಮಾಡಿದ್ದಾರೆ ಎಂದು ಈ ಮೂವರ ವಿರುದ್ಧ ದೂರು ದಾಖಲಾಗಿದ್ದು, ಈ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಚಂಪತ್ ರಾಯ್ ಅವರು ತಮ್ಮ ಸಹೋದರ ಸಂಜಯ್ ಬನ್ಸಲ್ ಮುಖಾಂತರ ಬಿಜ್ನೋರ್‌ನಲ್ಲಿ ಭೂಕಬಳಿಕೆ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಪತ್ರಕರ್ತ ವಿನೀತ್ ನರೈನ್ ಮೂರು ದಿನಗಳ ಹಿಂದೆ ತಮ್ಮ ಫೇಸ್‌ಬುಕ್‌ ಪೋಸ್ಟ್ ಮೂಲಕ ಆರೋಪ ಮಾಡಿದ್ದರು. ಅಲ್ಕಾ ಲಾಹೋತಿ ಒಡೆತನದ ಗೋವು ಕೇಂದ್ರದ 20,000 ಚದರ್ ಮೀಟರ್ ಭೂಮಿಯನ್ನು ಸಂಜಯ್ ಬನ್ಸಲ್ ಅತಿಕ್ರಮಿಸಿದ್ದಾರೆ ಎಂದು ವಿನೀತ್ ನರೈನ್ ಗಂಭಿರ ಆರೋಪ ಮಾಡಿದ್ದರು. ಈ ಕುರಿತು ಸ್ಪಷ್ಟನೆ ಬಯಸಿ ವಿನೀತ್ ನರೈನ್ ಅವರಿಗೆ ಕರೆ ಮಾಡಿದಾಗ, ರಜನೀಶ್ ಎಂಬ ವ್ಯಕ್ತಿ ತಮಗೆ ಕೊಲೆ ಬೆದರಿಕೆ ಹಾಕಿದ್ದಾಗಿ ಸಂಜಯ್ ಬನ್ಸಲ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಮಾತನಾಡಿರುವ ಬಿಜ್ನೋರ್ ಪೊಲೀಸ್ ಮುಖ್ಯಸ್ಥ ಡಾ.ಧರ್ಮ್ ವೀರ್ ಸಿಂಗ್, ಚಂಪತ್ ರಾಯ್ ಹಾಗೂ ಸಂಜಯ್ ಬನ್ಸಲ್ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಪತ್ರಕರ್ತ ವಿನೀತ್ ನರೈನ್ ಹಾಗೂ ಇತರ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.