ನಿರಂತರವಾಗಿ ಏರುತ್ತಿರುವ ( Price) ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಮತ್ತೆ ನಿರಾಸೆಯಾಗಿದ್ದು, ಬಂಗಾರದ ಬೆಲೆ ಮತ್ತೆ ಏರಿಕೆಯಾಗಿದೆ. ಬುಧವಾರ ಬೆಳಗ್ಗೆ () 1 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ 4,666 ರೂ. ದಾಖಲಿಸಿದೆ.
ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ 10 ಗ್ರಾಂ ಚಿನ್ನದ ಬೆಲೆ (22 ಕ್ಯಾರಟ್) 44,460 ರೂ. ಇದ್ದರೆ, 10 ಗ್ರಾಂ ಅಪರಂಜಿ ಚಿನ್ನದ ಬೆಲೆ (24 ಕ್ಯಾರಟ್) 48,500 ರೂ. ದಾಖಲಾಗಿದೆ. ಇನ್ನು, ದಿಲ್ಲಿಯಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 46,610 ರೂ. ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 50,840 ರೂ. ಇದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 46,660 ರೂ. ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 47,660 ರೂ. ಇದೆ. ಇನ್ನು, ಕೋಲ್ಕತ್ತಾದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 46,960 ರೂ. ಇದ್ದು, 10 ಗ್ರಾಂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 49,660 ರೂ. ಇದೆ. ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 44,860 ರೂ. ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 48,940 ರೂ. ದಾಖಲಾಗಿದೆ.
ಬೆಳ್ಳಿ ದರದಲ್ಲೂ ಏರಿಕೆ..!ಚಿನ್ನದ ಬೆಲೆಯಂತೆ ಬೆಳ್ಳಿ ದರವೂ ಏರಿಕೆಯಾಗಿದ್ದು, ಬುಧವಾರ ಬೆಳಗ್ಗೆ 1 ಕೆಜಿ ಬೆಳ್ಳಿಗೆ 63,400 ರೂ. ದಾಖಲಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬರೋಬ್ಬರಿ 600 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿಯೂ ಕೂಡ ಬುಧವಾರ ಬೆಳಗ್ಗೆ ಕೆಜಿಗೆ 600 ರೂ. ಏರಿಕೆ ಕಂಡಿದ್ದು, 63,400 ರೂ. ದಾಖಲಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ದರ ಹೀಗಿದೆ..!ಬೆಂಗಳೂರು: ₹44,460 (22 ಕ್ಯಾರಟ್), ₹48,500 (24 ಕ್ಯಾರಟ್)
ಚೆನ್ನೈ: ₹44,860 (22 ಕ್ಯಾರಟ್), ₹48,940 (24 ಕ್ಯಾರಟ್)
ದಿಲ್ಲಿ: ₹46,610 (22 ಕ್ಯಾರಟ್), ₹50,840 (24 ಕ್ಯಾರಟ್)
ಹೈದರಾಬಾದ್: ₹44,460 (22 ಕ್ಯಾರಟ್) ₹48,500 (24 ಕ್ಯಾರಟ್)
ಕೋಲ್ಕತಾ: ₹46,960 (22 ಕ್ಯಾರಟ್), ₹49,660 (24 ಕ್ಯಾರಟ್)
ಮಂಗಳೂರು: ₹44,460 (22 ಕ್ಯಾರಟ್), ₹48,500 (24 ಕ್ಯಾರಟ್)
ಮುಂಬಯಿ: ₹46,660 (22 ಕ್ಯಾರಟ್), ₹47,660 (24 ಕ್ಯಾರಟ್
ಮೈಸೂರು: ₹44,460 (22 ಕ್ಯಾರಟ್), ₹48,500 (24 ಕ್ಯಾರಟ್)