Fuel Price: ದೇಶದ ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲಿಯೇ ತೈಲ ಬೆಲೆ ಕಡಿಮೆ

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ತೈಲ ಬೆಲೆ ಅತ್ಯಂತ ಕಡಿಮೆ ಇದೆ. ಬೇರೆ ಯಾವ ರಾಜ್ಯವೂ ಕರ್ನಾಟಕದಷ್ಟು ಸುಂಕ ಕಡಿತ ಮಾಡಿಲ್ಲ.

Fuel Price: ದೇಶದ ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲಿಯೇ ತೈಲ ಬೆಲೆ ಕಡಿಮೆ
Linkup
ಬೆಂಗಳೂರು: ದೇಶದ ಇತರೆ ಎಲ್ಲ ಮೆಟ್ರೋ ನಗರಗಳಿಗಿಂತಲೂ ನಗರದ ವಾಹನ ಸವಾರರು ಪೆಟ್ರೋಲ್ ಮತ್ತು ಡೀಸೆಲ್‌ಗೆ ಕಡಿಮೆ ಹಣ ಪಾವತಿಸುತ್ತಿದ್ದಾರೆ. ಗುರುವಾರ ರಾತ್ರಿಯಿಂದಲೂ ದೇಶದ ಇತರೆ ಮೆಟ್ರೋಪಾಲಿಟನ್ ನಗರಗಳಿಗಿಂತಲೂ ಕರ್ನಾಟಕದಲ್ಲಿ ಕಡಿಮೆ ಇದೆ. ಬಹುಶಃ ಇದೇ ಮೊದಲ ಬಾರಿಗೆ ದೇಶದ ರಾಜಧಾನಿ ದಿಲ್ಲಿಗಿಂತಲೂ ಬೆಂಗಳೂರಿನಲ್ಲಿ ತೈಲ ದರ ಅಗ್ಗವಾಗಿದೆ. ಭಾನುವಾರ (ನ. 7) ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100.58 ರೂಪಾಯಿ ಇದೆ. ಹಾಗೆಯೇ ಲೀಟರ್‌ಗೆ 85.01 ರೂ ಇದೆ. ಹೊಸದಿಲ್ಲಿಯಲ್ಲಿ 103.97 ರೂಪಾಯಿ ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 86.67 ರೂಪಾಯಿಯಷ್ಟಿದೆ. ಪ್ರಮುಖ ನಗರಗಳ ಪೈಕಿ ಪೆಟ್ರೋಲ್ ಮೇಲಿನ ಅತಿ ಹೆಚ್ಚಿನ ದರ ಮುಂಬಯಿಯಲ್ಲಿದೆ. ಹಾಗೆಯೇ ಹೈದರಾಬಾದ್‌ನಲ್ಲಿ ಡೀಸೆಲ್ ದರ ಅತ್ಯಧಿಕವಾಗಿದೆ. 'ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ಪೆಟ್ರೋಲ್ ದರದಲ್ಲಿ ಅಷ್ಟೇನೂ ದೊಡ್ಡ ವ್ಯತ್ಯಾಸವಿಲ್ಲ. ಏಕೆಂದರೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು 2021ರ ಆಗಸ್ಟ್ ತಿಂಗಳಿನಲ್ಲಿಯೇ ಪೆಟ್ರೋಲ್ ಮೇಲಿನ ಸುಂಕವನ್ನು ಲೀಟರ್‌ಗೆ 3 ರೂಪಾಯಿಯಷ್ಟು ತಗ್ಗಿಸಿದ್ದರು' ಎಂದು ಅಖಿಲ ಪೆಟ್ರೋಲಿಯಂ ಟ್ರೇಡರ್ಸ್ ಸಂಸ್ಥೆ ಅಧ್ಯಕ್ಷ ಕೆಎಂ ಬಸವೇಗೌಡ ಹೇಳಿದ್ದಾರೆ. ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.40 ರೂಪಾಯಿ ಇದೆ. ಆದರೆ ಡೀಸೆಲ್ ದರದಲ್ಲಿ ವ್ಯತ್ಯಾಸ ದೊಡ್ಡದಾಗಿದೆ. ಚೆನ್ನೈನಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 91.43 ರೂಪಾಯಿ ಇದೆ. ಗಡಿಯಲ್ಲಿ ಕಳ್ಳಸಾಗಣೆಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿನ ಡೀಸೆಲ್ ದರದಲ್ಲಿನ ವ್ಯತ್ಯಾಸದ ಪರಿಣಾಮವಾಗಿ ಆನೇಕಲ್, ದಕ್ಷಿಣ ಕನ್ನಡ, ಬೆಳಗಾವಿ, ಕೋಲಾರ, ಬೀದರ್, ಕಲಬುರಗಿ, ಚಾಮರಾಜನಗರ ಮತ್ತು ರಾಯಚೂರು ಭಾಗಗಳಲ್ಲಿ ರಾಜ್ಯದಿಂದ ಕಡಿಮೆ ಬೆಲೆಯಲ್ಲಿ ಡೀಸೆಲ್ ಖರೀದಿ ಮಾಡಿ ತಮ್ಮ ರಾಜ್ಯಗಳಲ್ಲಿ ಮಾರಾಟ ಮಾಡುವ ಚಟುವಟಿಕೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. 'ಪಕ್ಕದ ಆಂಧ್ರಪ್ರದೇಶಕ್ಕಿಂತಲೂ ಕರ್ನಾಟಕದಲ್ಲಿ ಡೀಸೆಲ್ 10 ರೂಪಾಯಿ ಅಗ್ಗವಾಗಿದೆ. ಆಂಧ್ರದ ಚಿತ್ತೂರಿನಿಂದ ಹಾಗೂ ತಮಿಳುನಾಡಿನ ಕೃಷ್ಣಗಿರಿಯಿಂದ ಜನರು ಕೋಲಾರಕ್ಕೆ ಬರುತ್ತಿದ್ದಾರೆ. ಹೊಸೂರಿನ ಜನರು ಆನೇಕಲ್‌ಗೆ ಬಂದು ದೊಡ್ಡ ದೊಡ್ಡ ಕ್ಯಾನ್‌ಗಳಲ್ಲಿ ಡೀಸೆಲ್ ಖರೀದಿ ತಮ್ಮ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಗಡಿ ಭಾಗಗಳಲ್ಲಿ ಸೈಕಲ್‌ಗಳಲ್ಲಿ 100 ಲೀಟರ್‌ವರೆಗೂ ಸಾಗಿಸುತ್ತಾರೆ. ಮೊಪೆಡ್‌ಗಳಲ್ಲಿ 200 ಲೀಟರ್ ಮತ್ತು ಆಟೋ ರಿಕ್ಷಾಗಳಲ್ಲಿ 500 ಲೀಟರ್‌ವರೆಗೂ ಸಾಗಿಸುತ್ತಿದ್ದಾರೆ. ಅವರು ಅಲ್ಲಿ ಪ್ರತಿ ಲೀಟರ್‌ಗೆ 5 ರೂಪಾಯಿ ಕಡಿಮೆ ದರಕ್ಕೆ ಮಾರಾಟ ಮಾಡಿದರೂ ಅವರು ದಿನವೊಂದಕ್ಕೆ ಸಾವಿರಾರು ರೂಪಾಯಿ ಲಾಭ ಗಳಿಸುತ್ತಾರೆ' ಎಂದು ಬಸವೇಗೌಡ ತಿಳಿಸಿದ್ದಾರೆ. ರಾಜ್ಯದಲ್ಲಿ ಡೀಸೆಲ್ ಮಾರಾಟ ಕೂಡ ಹೆಚ್ಚಾಗಿದೆ. ಅನೇಕ ಅಂತಾರಾಜ್ಯ ಟ್ರಕ್‌ಗಳು, ಬಸ್‌ಗಳು ಕರ್ನಾಟಕದಲ್ಲಿ ಡೀಸೆಲ್ ಖರೀದಿಸುತ್ತಿವೆ. ಟ್ರಕ್‌ಗಳಲ್ಲಿ 400-800 ಲೀಟರ್‌ ಡೀಸೆಲ್ ತುಂಬಿಸುವ ಸಾಮರ್ಥ್ಯ ಇರುತ್ತವೆ. ಇದರ ಜತೆಗೆ ಅವರು ಹೆಚ್ಚುವರಿ ಕ್ಯಾನ್‌ಗಳನ್ನು ತಂದು ಡೀಸೆಲ್ ಖರೀದಿಸುತ್ತಾರೆ. ಕೇಂದ್ರ ಸರ್ಕಾರ ಬುಧವಾರ ಸಂಜೆ ಪೆಟ್ರೋಲ್ ಮೇಲೆ 5 ರೂ ಹಾಗೂ ಡೀಸೆಲ್ ಮೇಲೆ 10 ರೂ ಸುಂಕ ಕಡಿತ ಮಾಡಿತ್ತು. ಅದರ ಘೋಷಣೆ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೈಲ ಮೇಲೆ ತಲಾ ಏಳು ರೂಪಾಯಿ ಕಡಿತ ಘೋಷಿಸಿದ್ದರು. ಹೀಗಿದ್ದರೂ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೂ 100 ರೂಪಾಯಿಗೂ ಅಧಿಕವಾಗಿದೆ.