ಮಂಗಳೂರಿನಲ್ಲಿ ಅಕ್ಟೋಬರ್‌ 9, 10ರಂದು ಎಸ್‌ಬಿಐ ಗೃಹ ಸಾಲ ಹಬ್ಬ

ಭಾರತೀಯ ಸ್ಟೇಟ್‌ ಬ್ಯಾಂಕ್‌ ವತಿಯಿಂದ ಬೃಹತ್‌ ಗೃಹ ಸಾಲ ಹಬ್ಬವನ್ನು ಅ.9, 10ರಂದು ನಗರದ ಡಾ.ಟಿಎಂಎ ಪೈ ಕನ್ವೆನ್ಶನಲ್‌ ಸೆಂಟರ್‌ನಲ್ಲಿಆಯೋಜಿಸಲಾಗಿದೆ. ಎರಡೂ ದಿನ ಸಂಜೆ 7.30ರವರೆಗೆ ಸಾಲ ಮೇಳ ನಡೆಯಲಿದೆ.

ಮಂಗಳೂರಿನಲ್ಲಿ ಅಕ್ಟೋಬರ್‌ 9, 10ರಂದು ಎಸ್‌ಬಿಐ ಗೃಹ ಸಾಲ ಹಬ್ಬ
Linkup
ಮಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ ವತಿಯಿಂದ ಬೃಹತ್‌ ಗೃಹ ಸಾಲ ಹಬ್ಬವನ್ನು ಅ.9, 10ರಂದು ನಗರದ ಡಾ.ಟಿಎಂಎ ಪೈ ಕನ್ವೆನ್ಶನಲ್‌ ಸೆಂಟರ್‌ನಲ್ಲಿಆಯೋಜಿಸಲಾಗಿದೆ. ಅ.9ರಂದು ಬೆಳಗ್ಗೆ 10 ಗಂಟೆಗೆ ಸಾಲ ಹಬ್ಬಕ್ಕೆ ಚಾಲನೆ ನೀಡಲಿದ್ದು, ಎರಡೂ ದಿನ ಸಂಜೆ 7.30ರ ತನಕ ಸಾರ್ವಜನಿಕರು ಉಚಿತವಾಗಿ ಭೇಟಿ ನೀಡಬಹುದು. ನಗರದ 25ಕ್ಕೂ ಹೆಚ್ಚಿನ ಪ್ರಮುಖ ನಿರ್ಮಾಣ ಸಂಸ್ಥೆಗಳು, 40ಕ್ಕೂ ಹೆಚ್ಚಿನ ಪ್ರಾಜೆಕ್ಟ್ಗಳೊಂದಿಗೆ ಭಾಗವಹಿಸಲಿದ್ದಾರೆ. ನಿರ್ಮಾಣ ಸಂಸ್ಥೆಗಳು ಒದಗಿಸುವ ಸೌಲಭ್ಯಗಳನ್ನು ಹಾಗೂ ಸೌಕರ್ಯಗಳನ್ನು ಸ್ಥಳದಲ್ಲಿಯೇ ಹೋಲಿಕೆ ಮಾಡಿ ತಮಗೆ ಸೂಕ್ತವಾದ ಕನಸಿನ ಮನೆಯನ್ನು ಆಯ್ಕೆ ಮಾಡಿಕೊಳ್ಳುವ ಜತೆಗೆ ಎಸ್‌ಬಿಐನ ಶೇ. 6.70 ಕನಿಷ್ಠ ಬಡ್ಡಿ ದರದ ಸಾಲ ಸೌಲಭ್ಯವನ್ನು ಕೂಡ ಸ್ಥಳದಲ್ಲಿಪಡೆಯುವ ಅವಕಾಶ ಒದಗಿಸಲಾಗಿದೆ. ಗ್ರಾಹಕರ ಪುಟ್ಟ ಮಕ್ಕಳ ಮನೋರಂಜನೆಗೂ ವಿಶೇಷ ಗಮನ ನೀಡುತ್ತಿದ್ದು, ಕಂದಮ್ಮಗಳ ಮನ ಸೆಳೆಯುವ ಅನೇಕ ರೀತಿಯ ಕ್ರೀಡಾ ಸಾಮಗ್ರಿ ಹಾಗೂ ಚಾಕಲೇಟ್‌ ಫೌಂಟೇನ್‌ ಇತ್ಯಾದಿಗಳನ್ನು ವ್ಯವಸ್ಥೆಗೊಳಿಸುವುದು ಗೃಹ ಸಾಲ ಹಬ್ಬದ ಮೆರುಗನ್ನು ಹೆಚ್ಚಿಸಲಿದೆ. ಗೃಹ ಸಾಲದ ಜತೆಗೆ ಕಾರು ಸಾಲ, ಚಿನ್ನದ ಸಾಲ, ಶೈಕ್ಷಣಿಕ ಸಾಲ, ಎಸ್‌ಎಂಇ ಸಾಲ, ವೈಯಕ್ತಿಕ ಸಾಲ, ಪಿಂಚಣಿ ಸಾಲ ಇತ್ಯಾದಿ ಸಾಲ ಸೌಲಭ್ಯಗಳ ಬಗ್ಗೆಯೂ ಸೂಕ್ತ ರೀತಿಯ ಮಾಹಿತಿ ಹಾಗೂ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಗೃಹಸಾಲಗಳ ಬಡ್ಡಿದರ ಇಳಿಕೆ ಹಬ್ಬಗಳ ಸೀಸನ್‌ ಆಗಮನದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಬ್ಯಾಂಕ್‌ಗಳು ನಾನಾ ಕೊಡುಗೆಗಳನ್ನು, ರಿಯಾಯಿತಿಗಳನ್ನು ಗ್ರಾಹಕರಿಗೆ ಘೋಷಿಸಿವೆ. ಅವುಗಳ ಪೈಕಿ ಗೃಹ ಸಾಲ ಬಡ್ಡಿ ದರಗಳು ಗಣನೀಯವಾಗಿ ಕೆಳ ಮಟ್ಟದಲ್ಲಿ ಕಡಿಮೆಯಾಗಿರುವುದು ವಿಶೇಷ. ಆದ್ದರಿಂದ ಹೊಸ ಮನೆ ಖರೀದಿಸುವವರಿಗೆ ಇದು ಸಕಾಲವಾಗಿದೆ. ಸಾರ್ವಜನಿಕ ವಲಯದ ಎಸ್‌ಬಿಐನಿಂದ ಹಿಡಿದು ಖಾಸಗಿ ಬ್ಯಾಂಕ್‌ಗಳವರೆಗೆ ಎಲ್ಲಾ ಬ್ಯಾಂಕ್‌ಗಳಲ್ಲೂ ಗೃಹ ಸಾಲಕ್ಕೆ ಕನಿಷ್ಠ ಬಡ್ಡಿ ದರವಿದೆ. ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐನಲ್ಲಿ ಗೃಹ ಸಾಲಕ್ಕೆ ಬಡ್ಡಿ ದರವನ್ನು ಶೇ. 6.7ಕ್ಕೆ ಕಡಿತಗೊಳಿಸಲಾಗಿದೆ. ಯಾವುದೇ ಮೊತ್ತದ ಸಾಲಕ್ಕೆ ಇದೇ ಮೊದಲ ಬಾರಿಗೆ ಏಕರೂಪದ ಬಡ್ಡಿ ದರ ನಿಗದಿಯಾಗಿದೆ. ಈ ಹಿಂದೆ 75 ಲಕ್ಷ ರೂ.ಗಿಂತ ಹೆಚ್ಚಿನ ಸಾಲಕ್ಕೆ ಶೇ. 7.15ರ ಬಡ್ಡಿ ದರ ಇತ್ತು. ಆದರೆ ಇದೀಗ ಯಾವುದೇ ಮೊತ್ತದ ಗೃಹಸಾಲಕ್ಕೆ ಶೇ. 6.70ರ ಬಡ್ಡಿಗೆ ಪಡೆಯಬಹುದು. ಇದರಿಂದ ಗ್ರಾಹಕರಿಗೆ ಶೇ. 0.45 ಉಳಿತಾಯವಾಗಲಿದ್ದು, 75 ಲಕ್ಷ ರೂ. ಸಾಲದಲ್ಲಿ 30 ವರ್ಷಗಳ ಅವಧಿಯ ಮರುಪಾವತಿಯಲ್ಲಿ 8 ಲಕ್ಷ ರೂ. ಬಡ್ಡಿ ಉಳಿತಾಯವಾಗಲಿದೆ.