Flashback 2021: ಈ ವರ್ಷ ನಾನೊಂದು ತೀರಾ.. ನೀನೊಂದು ತೀರಾ ಎಂತಾದ ಸೆಲೆಬ್ರಿಟಿಗಳು

2021ರಲ್ಲಿ ಹಲವು ತಾರೆಯರು ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದರೆ, ಕೆಲವು ಸೆಲೆಬ್ರಿಟಿಗಳು ತಮ್ಮ ವೈವಾಹಿಕ ಬದುಕನ್ನು ಅಂತ್ಯಗೊಳಿಸಿದರು. ಈ ವರ್ಷ ನಾನೊಂದು ತೀರಾ.. ನೀನೊಂದು ತೀರಾ ಎಂತಾದ ಸೆಲೆಬ್ರಿಟಿಗಳು ಇವರೇ ನೋಡಿ…

Flashback 2021: ಈ ವರ್ಷ ನಾನೊಂದು ತೀರಾ.. ನೀನೊಂದು ತೀರಾ ಎಂತಾದ ಸೆಲೆಬ್ರಿಟಿಗಳು
Linkup
2021 ಮುಗಿಯುತ್ತಾ ಬಂತು.. 2022 ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ವರ್ಷವನ್ನು ಹೊಸ ಹರುಷದಿಂದ ಸ್ವಾಗತ ಮಾಡುವ ಮುನ್ನ.. ಒಮ್ಮೆ 2021 ರತ್ತ ಹಿಂದೆ ತಿರುಗಿ ನೋಡೋಣ. 2021ರಲ್ಲಿ ಕೋವಿಡ್ ಭೀತಿಯ ಮಧ್ಯೆಯೂ ಚಿತ್ರರಂಗದಲ್ಲಿ ಕೆಲ ಬಿಗ್ ಬಜೆಟ್ ಸಿನಿಮಾಗಳು ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡಿದವು. ಸಿನಿಮಾಗಳ ವಿಚಾರವಾಗಿ ಕೆಲ ಸೆಲೆಬ್ರಿಟಿಗಳು ಹೆಡ್‌ಲೈನ್ಸ್ ಮಾಡಿದರೆ, ವೈಯುಕ್ತಿಕ ವಿಚಾರವಾಗಿ ಕೆಲ ಸೆಲೆಬ್ರಿಟಿಗಳು ಭಾರೀ ಚರ್ಚೆಗೆ ಗುರಿಯಾಗಿದ್ದರು. 2021ರಲ್ಲಿ ಹಲವು ತಾರೆಯರು ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದರೆ, ಕೆಲವು ಸೆಲೆಬ್ರಿಟಿಗಳು ತಮ್ಮ ವೈವಾಹಿಕ ಬದುಕನ್ನು ಅಂತ್ಯಗೊಳಿಸಿದರು. ಈ ವರ್ಷ ನಾನೊಂದು ತೀರಾ.. ನೀನೊಂದು ತೀರಾ ಎಂತಾದ ಸೆಲೆಬ್ರಿಟಿಗಳು ಇವರೇ ನೋಡಿ…. - ಕಿರಣ್ ರಾವ್ ದಾಂಪತ್ಯದಲ್ಲಿ ಬಿರುಕು ತಮ್ಮ ಹದಿನೈದು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮವಿಡಲು ಆಮೀರ್ ಖಾನ್ ಹಾಗೂ ಕಿರಣ್ ರಾವ್ ನಿರ್ಧರಿಸಿದ್ದು ಇದೇ ವರ್ಷ. ಪರಸ್ಪರ ಒಪ್ಪಿಗೆಯ ಮೇರೆಗೆ ಆಮೀರ್ ಖಾನ್ ಹಾಗೂ ಕಿರಣ್ ರಾವ್ ವಿಚ್ಛೇದನ ಪಡೆಯಲು ಮುಂದಾದರು. ವಿಚ್ಛೇದನದ ಬಗ್ಗೆ ಆಮೀರ್ ಖಾನ್ ಮತ್ತು ಕಿರಣ್ ರಾವ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. ‘’ಇನ್ನು ಮುಂದೆ ನಾವು ಗಂಡ-ಹೆಂಡತಿಯಾಗಿ ಇರುವುದಿಲ್ಲ. ಆದರೆ, ಪುತ್ರ ಆಜಾದ್ ರಾವ್ ಖಾನ್‌ಗೆ ಪೋಷಕರಾಗಿರುತ್ತೇವೆ'' ಎಂದು ಆಮೀರ್ ಖಾನ್ ಹಾಗೂ ಕಿರಣ್ ರಾವ್ ಸಾಮಾಜಿಕ ಜಾಲತಾಣದ ಮುಖಾಂತರ ತಿಳಿಸಿದ್ದರು. - ನಾಗಚೈತನ್ಯ ವಿಚ್ಛೇದನ ನಟ ನಾಗಚೈತನ್ಯ ಹಾಗೂ ಸಮಂತಾ ದೂರಾಗಲು ನಿರ್ಧರಿಸಿದ್ದು ಕೂಡ ಇದೇ ವರ್ಷ. ತಮ್ಮ ವೈವಾಹಿಕ ಬದುಕಿಗೆ ಅಂತ್ಯ ಹಾಡಲು ನಾಗ ಚೈತನ್ಯ ಹಾಗೂ ಸಮಂತಾ ನಿರ್ಧರಿಸಿಬಿಟ್ಟರು. ‘’ಹೆಚ್ಚು ಆಲೋಚನೆ ಮಾಡಿದ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ. ಗಂಡ ಮತ್ತು ಹೆಂಡತಿಯಾಗಿದ್ದ ನಾವು ಈಗ ನಮ್ಮದೇ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಸ್ನೇಹವೇ ನಮ್ಮ ಸಂಬಂಧದ ಹೂರಣ. ಒಂದು ದಶಕದಿಂದ ನಾವಿಬ್ಬರು ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಪೋರ್ಟ್ ಮಾಡಿ ಹಾಗೂ ನಮ್ಮ ವೈಯಕ್ತಿಕ ಬದುಕನ್ನ ಗೌರವಿಸಲು ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು’’ ಎಂದು ನಾಗ ಚೈತನ್ಯ ಹಾಗೂ ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಬೇರೆ ಬೇರೆಯಾದ ಸುಷ್ಮಿತಾ ಸೇನ್ - ರೋಹ್ಮನ್ ಶಾಲ್ ಸುಷ್ಮಿತಾ ಸೇನ್ ಹಾಗೂ ರೋಹ್ಮನ್ ಶಾಲ್ ಲಿವಿಂಗ್-ಟು-ಗೆದರ್ ರಿಲೇಶನ್‌ಶಿಪ್‌ನಲ್ಲಿದ್ದರು. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಈ ವರ್ಷವೇ ಬೇರೆ ಬೇರೆಯಾಗಿದ್ದಾರೆ. '’ನಾವಿಬ್ಬರು ಸ್ನೇಹಿತರಾಗಿ ಪರಿಚಯ ಆದೆವು. ಈಗ ಪುನಃ ಸ್ನೇಹಿತರಾಗಿದ್ದೇವೆ. ಈ ಸಂಬಂಧವು ದೀರ್ಘವಾಗಿತ್ತು. ನಮ್ಮ ನಡುವಿನ ಪ್ರೀತಿ ಮಾತ್ರ ಹಾಗೇ ಉಳಿದಿದೆ'’ ಎಂದು ಬ್ರೇಕಪ್ ಆದ ಕುರಿತು ಸೋಷಿಯಲ್ ಮೀಡಿಯಾ ಸುಷ್ಮಿತಾ ಸೇನ್ ಬರೆದುಕೊಂಡಿದ್ದರು. ದೂರಾದ ಡಿ.ಇಮ್ಮನ್ - ಮೋನಿಕಾ ರಿಚರ್ಡ್ ಸಂಗೀತ ನಿರ್ದೇಶಕ ಡಿ.ಇಮ್ಮನ್ ಮತ್ತು ಮೋನಿಕಾ ರಿಚರ್ಡ್ ಕೂಡ ವಿಚ್ಛೇದನ ಪಡೆದುಕೊಂಡಿದ್ದಾರೆ. ಏಪ್ರಿಲ್ 2008 ರಂದು ಕಂಪ್ಯೂಟರ್ ಎಂಜಿನಿಯರ್ ಮೋನಿಕಾ ರಿಚರ್ಡ್ ಎಂಬುವರನ್ನು ಡಿ.ಇಮ್ಮನ್ ವಿವಾಹವಾಗಿದ್ದರು. ಕಳೆದ ವರ್ಷದಿಂದ ದೂರಾಗಿರುವ ಈ ದಂಪತಿ ಈ ವರ್ಷ ವಿಚ್ಛೇದನ ಪಡೆದುಕೊಂಡಿದ್ದಾರೆ. ಕಾನೂನಾತ್ಮಕವಾಗಿ ವಿಚ್ಚೇದನ ಪಡೆದಿರುವ ಬಗ್ಗೆ ಡಿ.ಇಮ್ಮನ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.