ರಣವಿತ್‌ ಶೆಟ್ಟಿ ಅಣ್ಣನಾಗಲಿದ್ದಾನೆ; ಖುಷಿ ವಿಚಾರ ಹಂಚಿಕೊಂಡ ನಟ ರಿಷಬ್ ಶೆಟ್ಟಿ ದಂಪತಿ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ತಂದೆಯಾಗಲಿದ್ದಾರಂತೆ. ಈ ವಿಚಾರವನ್ನು ರಿಷಬ್ ಶೆಟ್ಟಿ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ರಣವಿತ್‌ ಶೆಟ್ಟಿ ಅಣ್ಣನಾಗಲಿದ್ದಾನೆ; ಖುಷಿ ವಿಚಾರ ಹಂಚಿಕೊಂಡ ನಟ ರಿಷಬ್ ಶೆಟ್ಟಿ ದಂಪತಿ
Linkup
ನಟ, ನಿರ್ದೇಶಕ ಮತ್ತೊಮ್ಮೆ ತಂದೆಯಾಗಲಿದ್ದಾರಂತೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂತೆಯೇ ಅವರ ಪತ್ನಿ ಕೂಡ ಈ ಖುಷಿಯ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಫುಲ್ ಖುಷ್ "ಹೊಸ ವರ್ಷಕ್ಕೆ ಹೊಸ 'ಸಂತಸ'ವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ, ರಣ್‌ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ" ಎಂದು ರಿಷಬ್ ಶೆಟ್ಟಿ ಅವರು ಪ್ರಗತಿ ಶೆಟ್ಟಿ, ಮಗ ರಣ್ವಿತ್ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಪ್ರಗತಿ ಶೆಟ್ಟಿ ಹೇಳಿದ್ದೇನು? "ನಾವು ಪುಣ್ಯ ಮಾಡಿದ್ದೇವೆ, ಮತ್ತೊಮ್ಮೆ ಪಾಲಕರಾಗುತ್ತಿರುವುದಕ್ಕೆ ಖುಷಿಯಿದೆ. ಈ ಖುಷಿಯ ಜೊತೆಗೆ ಹೊಸ ವರ್ಷ ಬರಮಾಡಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ. ಬೇಸಿಗೆ ಬರುತ್ತಿದ್ದಂತೆ ನಮ್ಮ ಕುಟುಂಬದಲ್ಲಿ ನಾಲ್ಕು ಮಂದಿ ಸದಸ್ಯರು ಇರುತ್ತಾರೆ ಎಂದು ಹೇಳಲು ಸಂತಸವಾಗುತ್ತದೆ" ಎಂದು ಪ್ರಗತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ಸಾಕಷ್ಟು ಮಂದಿ ಶುಭಾಶಯ ತಿಳಿಸುತ್ತಿದ್ದಾರೆ. ವಿಭಿನ್ನವಾಗಿ ಮಗನ ಫೋಟೋ, ಹೆಸರು ರಿವೀಲ್ ಮಾಡಿದ್ದ ರಿಷಬ್ ದಂಪತಿ ಪ್ರಗತಿ ಶೆಟ್ಟಿ ಗಂಡು ಮಗುವಿಗೆ ಜನ್ಮ ನೀಡಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಪತ್ನಿ ಜತೆಗಿನ ಸೆಲ್ಫಿ ಹಾಕಿ “Yes…… it’s a Hero” ಎಂದು ನಟ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದರು. 2019ರ ಏಪ್ರಿಲ್ ತಿಂಗಳಲ್ಲಿ ರಣ್‌ವಿತ್ ಶೆಟ್ಟಿ ಜನಿಸಿದ್ದನು. ಇನ್ನು ಮಗನ ಫೋಟೋ, ಹೆಸರನ್ನು ರಿವೀಲ್ ಮಾಡುವಾಗಲೂ ಕೂಡ ರಿಷಬ್ ಶೆಟ್ಟಿ ಅವರು ಅಲ್ಲಿಯೂ ಕ್ರಿಯೆಟಿವಿಟಿ ತೋರಿಸಿದ್ದರು. ಲಾಕ್‌ಡೌನ್ ಕಾರಣದಿಂದ ಮಗನ ಮೊದಲ ಬರ್ತ್‌ಡೇಯನ್ನು ಅವರು ಊರಿನ ತೋಟದಲ್ಲಿ ಆಚರಿಸಿದ್ದರು. ಅಡಿಗೆ ತೋಟದಲ್ಲಿ ಸಿಗುವ ವಸ್ತುಗಳಿಂದಲೇ ಅಲಂಕಾರ ಕೂಡ ಮಾಡಿದ್ದು ಬಹಳ ವಿಶೇಷವಾಗಿತ್ತು. ಹ್ಯಾಂಡ್ಸಪ್ ಹಾಡಿಗೆ ರಣವಿತ್ ಸ್ಟೆಪ್ 9 ತಿಂಗಳ ಪ್ರಾಯವಿದ್ದಾಗ ರಣ್‌ವಿತ್ ಅವರು ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ 'ಹ್ಯಾಂಡ್ಸಪ್‌' ಹಾಡಿಗೆ ಸ್ಟೆಪ್ ಹಾಕಿದ್ದನು. ಆ ವಿಡಿಯೋ ವೈರಲ್ ಆಗಿತ್ತು. ಮಗನ ಜೊತೆಗಿನ ಫೋಟೋಗಳನ್ನು ಆಗಾಗ ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಪ್ರಗತಿ ಶೆಟ್ಟಿ ಅವರು ರಿಷಬ್ ಶೆಟ್ಟಿ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಪತಿ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆಯ 'ಹೀರೋ', 'ಗರುಡ ಗಮನ ವೃಷಭ ವಾಹನ' ಸಿನಿಮಾಗಳು ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅವರೀಗ ಇನ್ನೂ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರು ಸಖತ್ ಬ್ಯುಸಿ ಎನ್ನಬಹುದು. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕಾಂಬಿನೇಶನ್‌ನಲ್ಲಿ ಯಾವಾಗ 'ಕಿರಿಕ್ ಪಾರ್ಟಿ 2' ಬರಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ 'ಕಿರಿಕ್ ಪಾರ್ಟಿ' ರಿಲೀಸ್ ಆಗಿ 5 ವರ್ಷಗಳು ಆಯ್ತು.