Delhi Rains: ಯಮುನೆಯ ರೌದ್ರಾವತಾರ: ಮಳೆ ನಿಂತರೂ ದಿಲ್ಲಿ ಮುಳುಗುತ್ತಿರುವುದು ಏಕೆ?

ಹೊಸದಿಲ್ಲಿ: ರಾಜಧಾನಿ ದಿಲ್ಲಿ ಅಕ್ಷರಶಃ ಮುಳುಗಿದೆ. ಯಮುನಾ ನದಿಯ ಪ್ರವಾಹ ಬುಧವಾರ ರಾತ್ರಿ ಮತ್ತಷ್ಟು ಹೆಚ್ಚಿದ್ದು, ಅನೇಕ ಮನೆಗಳು ಹಾಗೂ ರಸ್ತೆಗಳು ಜಲಾವೃತವಾಗಿವೆ. ಇದರಿಂದ ರಕ್ಷಣೆ ಹಾಗೂ ಪರಿಹಾರ ಚಟುವಟಿಕೆಗಳಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡುವುದನ್ನು ಮುಂದುವರಿಸಲಾಗಿದೆ. ಇದರಿಂದ ಬೆಳಿಗ್ಗ 8 ಗಂಟೆ ಸುಮಾರಿಗೆ ಯಮುನಾ ನದಿ ನೀರಿನ ಮಟ್ಟ 208.48 ಮೀಟರ್‌ಗೆ ತಲುಪಿದೆ. ಈಗಿನ ನೀರಿನ ಮಟ್ಟವು ಅಪಾಯದ ಗುರುತಿಗಿಂತ ಮೂರು ಮೀಟರ್ ಅಧಿಕವಿದೆ. 1978ರಲ್ಲಿ ಯಮುನಾ ನದಿ ನೀರಿನ ಮಟ್ಟವು 207.49 ಮೀಟರ್ ತಲುಪಿದ್ದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಮತ್ತು ಜಲಾಶಯದಿಂದ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಬ್ಯಾರೇಜ್‌ನ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವುದು ಅನಿವಾರ್ಯ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.

Linkup