ಬಾಲಕಿಯರ ಮೇಲೆ ಅತ್ಯಾಚಾರ: 76 ವರ್ಷದ ಅರ್ಚಕನಿಗೆ ಜೀವಾವಧಿ ಶಿಕ್ಷೆ

ದಿಲ್ಲಿಯಲ್ಲಿ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ದೇವಸ್ಥಾನದ ಆವರಣದಲ್ಲಿ ಅತ್ಯಾಚಾರ ಎಸಗಿದ್ದ ವೃದ್ಧ ಅರ್ಚಕನಿಗೆ ಸ್ಥಳೀಯ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ವಯಸ್ಸಿನ ಕಾರಣಕ್ಕೆ ಕರುಣೆ ತೋರಿಸಲು ಆಗುವುದಿಲ್ಲ ಎಂದು ಅದು ಹೇಳಿದೆ.

ಬಾಲಕಿಯರ ಮೇಲೆ ಅತ್ಯಾಚಾರ: 76 ವರ್ಷದ ಅರ್ಚಕನಿಗೆ ಜೀವಾವಧಿ ಶಿಕ್ಷೆ
Linkup
ಹೊಸದಿಲ್ಲಿ: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ನಡೆಸಿದ ಪ್ರಕರಣದಲ್ಲಿ 76 ವರ್ಷದ ಅರ್ಚಕನಿಗೆ ದಿಲ್ಲಿ ನ್ಯಾಯಾಲಯವೊಂದು ವಿಧಿಸಿದೆ. ದೇವಾಲಯದ ಅರ್ಚಕನ ಪವಿತ್ರ ವೃತ್ತಿಯನ್ನೂ ಲೆಕ್ಕಿಸದೆ ಹಾಗೂ ಅತ್ಯಂತ ಸುರಕ್ಷಿತ ಸ್ಥಳ ಎನಿಸಬೇಕಿದ್ದ ಪ್ರಾರ್ಥನೆಯ ಮಂದಿರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಕೋರ್ಟ್ ಹೇಳಿದೆ. ದೇವಾಲಯದ ಪವಿತ್ರ ಸ್ಥಳದಲ್ಲಿ ಮಕ್ಕಳ ಮೇಲೆ ಅತ್ಯಾಚಾರದಂತಹ ಅಪರಾಧ ಎಸಗಿದ್ದನ್ನು ಒಪ್ಪಲು ಸಾಧ್ಯವಿಲ್ಲ. ಅವರನ್ನು ಬಿಡುಗಡೆ ಮಾಡಿದರೆ ತನ್ನ ಕರ್ತವ್ಯಕ್ಕೆ ಎಸಗುವ ಲೋಪವಾಗುತ್ತದೆ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಜೇತಾ ಸಿಂಗ್ ರಾವತ್ ಹೇಳಿದರು. 'ವಿಚಾರಣೆಯ ವೇಳೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ಈ ಪ್ರಕರಣದ ವಾಸ್ತವಗಳು ಹಾಗೂ ಸಂದರ್ಭಗಳನ್ನು ಪರಿಗಣಿಸಿ, ಅವರ ಮೇಲೆ ಯಾವುದೇ ವಿನಾಯಿತಿ ಪ್ರದರ್ಶಿಸಿದರೆ, ಆ ಮಕ್ಕಳ ಹೋರಾಟವನ್ನು ಕಡೆಗಣಿಸದಂತೆ ಆಗಲಿದೆ. ಈ ಮಕ್ಕಳಿಗೆ ಅವರ ಭವಿಷ್ಯದ ಬಗ್ಗೆ ಭಯವಿದೆ' ಎಂದು ಅಪರಾಧಿ ವಿಶ್ವ ಬಂಧು ಎಂಬಾತನಿಗೆ ಶಿಕ್ಷೆ ವಿಧಿಸುವ ವೇಳೆ ಅವರು ಹೇಳಿದರು. ವಯೋವೃದ್ಧನಾಗಿರುವ ಕಾರಣ ತನ್ನ ವಯಸ್ಸನ್ನು ಪರಿಗಣಿಸಿ ಬಿಡುಗಡೆ ಮಾಡಬೇಕು ಎಂದು ಆತ ಕೋರಿದ್ದ. ಆದರೆ ಮಕ್ಕಳು ಸುರಕ್ಷಿತರಾಗಿರಬೇಕಾದ ಹಾಗೂ ಯಾವ ರಕ್ಷಣೆಗೂ ಅಗತ್ಯವಿಲ್ಲದಂತಹ ದೇವಾಲಯವನ್ನೇ ಆತ ಅಪವಿತ್ರಗೊಳಿಸಿರುವುದರಿಂದ ಇಂತಹ ರೂಢಿಗತ ಕಾಮುಕರನ್ನು ಯಾವ ಕಾರಣಕ್ಕೂ ನಂಬಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಟ್ಟರು. ಅಪರಾಧಿಗೆ ಜೀವಾವಧಿ ಶಿಕ್ಷೆ, ಅತ್ಯಾಚಾರಕ್ಕಾಗಿ 50,000 ರೂ ದಂಡ ಮತ್ತು ಅಪರಾಧ ಕೃತ್ಯಕ್ಕಾಗಿ 10,000 ರೂ ದಂಡ ವಿಧಿಸಿದರು. ಜತೆಗೆ ಅತ್ಯಾಚಾರ ಸಂತ್ರಸ್ತ ಬಾಲಕಿಯರಿಗೆ ಮಾನಸಿಕ ಆರೋಗ್ಯ ಹಾಗೂ ಭಾವನೆಗಳ ಸುರಕ್ಷತೆಗೆ ತಲಾ 7.5 ಲಕ್ಷ ರೂ ಪರಿಹಾರ ನೀಡುವಂತೆ ಸೂಚಿಸಿದರು. ಜತೆಗೆ ಅವರಿಗೆ ಭವಿಷ್ಯದಲ್ಲಿ ಉತ್ತಮ ಶಿಕ್ಷಣ ದೊರಕುವಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದರು.