ಮೋದಿ ಬ್ಲಾಗ್‌ನಲ್ಲಿ ವಾರ್ಷಿಕ ಸುಧಾರಣೆಗಳ ಮಾಹಿತಿ: ಹೊಸ ನೀತಿಗಳಿಂದ ರಾಜ್ಯಗಳಿಗೆ ಲಾಭ ಎಂದ ಪ್ರಧಾನಿ!

ಕೇಂದ್ರದಿಂದ ಹೆಚ್ಚಿನ ಸಾಲ ಪಡೆಯಲು ಅವಕಾಶ ಮಾಡಿಕೊಟ್ಟ ಸುಧಾರಣಾ ಯೋಜನೆಗಳ ಫಲವಾಗಿ, ​​2020-21ರಲ್ಲಿ ರಾಜ್ಯಗಳಿಗೆ ಹೆಚ್ಚುವರಿ 1.06 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿ ಬ್ಲಾಗ್‌ನಲ್ಲಿ ವಾರ್ಷಿಕ ಸುಧಾರಣೆಗಳ ಮಾಹಿತಿ: ಹೊಸ ನೀತಿಗಳಿಂದ ರಾಜ್ಯಗಳಿಗೆ ಲಾಭ ಎಂದ ಪ್ರಧಾನಿ!
Linkup
ಹೊಸದಿಲ್ಲಿ: ಕೇಂದ್ರದಿಂದ ಹೆಚ್ಚಿನ ಸಾಲ ಪಡೆಯಲು ಅವಕಾಶ ಮಾಡಿಕೊಟ್ಟ ಸುಧಾರಣಾ ಯೋಜನೆಗಳ ಫಲವಾಗಿ, 2020-21ರಲ್ಲಿ ರಾಜ್ಯಗಳಿಗೆ ಹೆಚ್ಚುವರಿ 1.06 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ವಿಸ್ತೃತ ಲೇಖನ ಬರೆದಿರುವ ಪ್ರಧಾನಿ ಮೋದಿ, ದೇಶದ ಒಟ್ಟು 23 ರಾಜ್ಯಗಳು 1.06 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲವನ್ನು ಪಡೆದುಕೊಂಡಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಪನ್ಮೂಲಗಳ ಲಭ್ಯತೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಪಾಲುದಾರಿಕೆ ವಿಧಾನದಿಂದ ಇದು ಸಾಧ್ಯವಾಗಿದೆ ಎಂದೂ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಆತ್ಮನಿರ್ಭರ ಭಾರತ ಯೋಜನೆಯಡಿ 2020-21ರ ಹಣಕಾಸು ವರ್ಷದಲ್ಲಿ, ರಾಜ್ಯಗಳಿಗೆ ವರ್ಧಿತ ಸಾಲವನ್ನು ಅನುಮತಿಸಲಾಗುವುದು ಎಂದು ಕಳೆದ ಮೇ.20ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ರಾಜ್ಯಗಳ ಒಟ್ಟು ದೇಶೀಯ ಉತ್ಪನ್ನದ ಹೆಚ್ಚುವರಿ ಶೇ. 2ರಷ್ಟು ಸಾಲಕ್ಕೆ ಅನುಮತಿ ನೀಡಲಾಗಿದ್ದು, ಅದರಲ್ಲಿ ಶೇಕಡಾ 1 ರಷ್ಟು ಆರ್ಥಿಕ ಸುಧಾರಣೆಗಳ ಅನುಷ್ಠಾನಕ್ಕೆ ಮೀಸಲಿಡಬೇಕು ಎಂಬ ನಿಯಮ ಜಾರಿಗೆ ತರಲಾಗಿತ್ತು. ಈ ಆರ್ಥಿಕ ಸುಧಾರಣೆಗಳು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ, ದುರ್ಬಲರಿಗೆ ಮತ್ತು ಮಧ್ಯಮ ವರ್ಗಕ್ಕೆ ಹೆಚ್ಚಿನ ಅನುಕೂಲತೆಗಳನ್ನು ತಂದು ಕೊಟ್ಟಿದ್ದು, ಇದಕ್ಕೆ ಪ್ರತಿಯಾಗಿ ಜನತೆ ಹಣಕಾಸಿನ ಸುಸ್ಥಿರತೆಯನ್ನು ಉತ್ತೇಜಿಸುವಲ್ಲಿ ಸರ್ಕಾರಗಳಿಗೆ ನೆರವು ಒದಗಿಸಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಯಡಿಯಲ್ಲಿ ಪ್ರಥಮ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದು, ಎರಡನೇ ಹಂತದಲ್ಲಿ ನೂತನ ಕಾಯ್ದೆಗಳ ಅಡಿಯಲ್ಲಿ ವ್ಯವಹಾರಸಂಬಂಧಿತ ಪರವಾನಗಿಗಳ ನವೀಕರಣಕ್ಕೆ ಒತ್ತು ನೀಡಲಾಗಿತ್ತು ಎಂದು ಪ್ರಧಾನಿ ಮೋದಿ ತಮ್ಮ ಬ್ಲಾಗ್‌ ಮೂಲಕ ಮಾಹಿತಿ ನೀಡಿದ್ದಾರೆ. ಮೂರನೇ ಹಂತದಲ್ಲಿ ನಗರೀಕರಣ ಮತ್ತು ಮೂಲಸೌಕರ್ಯಕ್ಕೆ ಉತ್ತೇಜನ ಹಾಗೂ ನಾಲ್ಕನೇ ಹಂತದಲ್ಲಿ ರೈತರಿಗೆ ಉಚಿತ ವಿದ್ಯುತ್ ಬದಲಾಗಿ ನೇರ ಲಾಭ ವರ್ಗಾವಣೆ ಅಥವಾ ಡಿಬಿಟಿಯನ್ನು ಪರಿಚಯಿಸುವ ಮೂಲಕ ಜಾರಿಗೆ ತರಲಾಗಿದೆ ಎಂದೂ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.