5 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಬುದ್ಧದೆಬ್ ದಾಸ್‌ಗುಪ್ತ ನಿಧನಕ್ಕೆ ಸಂತಾಪ ಸೂಚಿಸಿದ ಮಮತಾ ಬ್ಯಾನರ್ಜಿ!

ಐದು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಬುದ್ಧದೆಬ್ ದಾಸ್‌ಗುಪ್ತ ಅವರು ನಿಧನರಾಗಿದ್ದಾರೆ. ಈ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

5 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಬುದ್ಧದೆಬ್ ದಾಸ್‌ಗುಪ್ತ ನಿಧನಕ್ಕೆ ಸಂತಾಪ ಸೂಚಿಸಿದ ಮಮತಾ ಬ್ಯಾನರ್ಜಿ!
Linkup
ಬೆಂಗಾಳಿ ನಿರ್ದೇಶಕ ಅವರು ಇಂದು (ಜೂನ್ 10) ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಕಿಡ್ನಿ ಸಮಸ್ಯೆಯಿಂದಾಗಿ ಬುದ್ಧದೆಬ್ ಅವರು ಇಹಲೋಕ ತ್ಯಜಿಸಿದ್ದಾರೆ. ಪ್ರತಿದಿನ ಕೋಲ್ಕತ್ತಾದಲ್ಲಿ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಬುದ್ಧದೆಬ್ ನಿಧನದ ಸುದ್ದಿ ಕೇಳಿ ಟ್ವೀಟ್ ಮಾಡಿದ ಸಿಎಂ ಅವರು "ದೊಡ್ಡ ನಷ್ಟ" ಎಂದು ಹೇಳಿದ್ದಾರೆ. "ಬುದ್ಧದೆಬ್ ದಾಸ್‌ಗುಪ್ತ ನಿಧನದ ಸುದ್ದಿ ಕೇಳಿ ಬಹಳ ಬೇಸರವಾಯಿತು. ಕೆಲಸದ ಮೂಲಕ ಭಾವನೆಗಳನ್ನು ಸಿನಿಮಾದ ಭಾಷೆಯೊಳಗಡೆ ಸೇರಿಸಿದ್ದರು. ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬ, ಸಹದ್ಯೋಗಿಗಳು, ಹಿತೈಶಿಗಳು ದುಃಖ ಭರಿಸುವ ಶಕ್ತಿ ಸಿಗಲಿ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 'ದೂರತ್ವ', 'ಗ್ರಿಹಜುದ್ಧ', 'ಅಂಧಿ ಗಲಿ' ಸಿನಿಮಾಗಳಲ್ಲಿ ಬುದ್ಧದೆಬ್ ದಾಸ್‌ಗುಪ್ತ ನಟಿಸಿದ್ದಾರೆ. ಈ ಸಿನಿಮಾಗಳು ಬಂಗಾಳದಲ್ಲಿನ ನಕ್ಸಲೈಟ್‌ ಚಳುವಳಿಯ ಮೇಲೆ ಪ್ರಭಾವ ಬೀರಿದ್ದವು. ಅಷ್ಟೇ ಅಲ್ಲದೆ ಬಂಗಾಳಿಗಳಿಗೆ ಜಾಗೃತ ಭಾವ ಮೂಡಿಸಲು ಸಹಾಯ ಮಾಡಿದ್ದವು. "ಬುದ್ಧದೆಬ್ ಅವರು ಸಿನಿಮಾ ಮಾಡುತ್ತಿದ್ದರು, ಲೇಖನ ಬರೆಯುತ್ತಿದ್ದರು, ಅನಾರೋಗ್ಯದಿಂದ ಇದ್ದರೂ ಕೂಡ ಆಕ್ಟಿವ್ ಆಗಿರುತ್ತಿದ್ದರು. ಅನಾರೋಗ್ಯದಲ್ಲಿದ್ದಾಗಲೂ ಕೂಡ 'ತೋಪ್', 'ಉರೊಜಹಾಸ್' ಸಿನಿಮಾ ಮಾಡಿದ್ದರು. ಅವರ ನಿಧನ ನಮ್ಮೆಲ್ಲರಿಗೂ ನಷ್ಟದ ವಿಚಾರ" ಎಂದು ನಿರ್ದೇಶಕ ಗೌತಮ್ ಘೋಷ್ ಅವರು ಬೇಸರ ಹೊರಹಾಕಿದ್ದಾರೆ. ಬುದ್ಧದೆಬ್ ದಾಸ್‌ಗುಪ್ತ ಅವರು ಐದು ಬಾರಿ ಪಡೆದಿದ್ದರು. "ಬಾಗ್ ಬಹಾದುರ್", 'ಚರಾಚಾರ್', 'ಲಾಲ್ ದರ್ಜಾ', 'ಮೊಂಡೊ ಮೆಯೆರ್ ಉಪಖ್ಯಾನ್', 'ಕಾಲ್‌ಪುರುಷ್' ಸಿನಿಮಾಗಳಿಗೆ ದಾಸ್‌ಗುಪ್ತ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.