ಹಿರಿಯ ನಟರ ಪುತ್ಥಳಿ ತೆರವು ವಿಚಾರ; ಒಂದಾಗಿ ಹೋರಾಟಕ್ಕಿಳಿದ ರಾಜ್-ವಿಷ್ಣು ಫ್ಯಾನ್ಸ್

ಅನುಮತಿ ಇಲ್ಲದೇ ಬೆಂಗಳೂರಿನಲ್ಲಿ ಅಭಿಮಾನಿಗಳು ಅನಧಿಕೃತವಾಗಿ ಸ್ಥಾಪನೆ ಮಾಡಿರುವ ಪುತ್ಥಳಿಗಳನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಬಿಬಿಎಂಪಿ ಶುರುಮಾಡಿದೆ. ಅದರ ವಿರುದ್ಧ ಈಗ ರಾಜ್‌ಕುಮಾರ್‌ ಮತ್ತು ವಿಷ್ಣುವರ್ಧನ್ ಫ್ಯಾನ್ಸ್ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಹಿರಿಯ ನಟರ ಪುತ್ಥಳಿ ತೆರವು ವಿಚಾರ; ಒಂದಾಗಿ ಹೋರಾಟಕ್ಕಿಳಿದ ರಾಜ್-ವಿಷ್ಣು ಫ್ಯಾನ್ಸ್
Linkup
ಬೆಂಗಳೂರಿನಲ್ಲಿಹಿರಿಯ ನಟರ ಅಭಿಮಾನಿಗಳು ಅನುಮತಿ ಇಲ್ಲದೇ ಅನಧಿಕೃತವಾಗಿ ಪುತ್ಥಳಿ, ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಹೀಗೆ ಪರವಾನಗಿ ಇಲ್ಲದೇ ಸ್ಥಾಪಿತವಾಗಿರುವ ಪುತ್ಥಳಿಗಳನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಶುರುಮಾಡಿದೆ. ಇದಕ್ಕೆ ಅಭಿಮಾನಿಗಳ ವಲಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. , ಡಾ. ಅವರ ಅನೇಕ ಪ್ರತಿಮೆ, ಪುತ್ಥಳಿಗಳನ್ನು ಅಭಿಮಾನಿಗಳು ಸ್ಥಾಪಿಸಿದ್ದಾರೆ. ಇದೀಗ ಆ ಅಭಿಮಾನಿಗಳು ಒಂದಾಗಿದ್ದಾರೆ. ಬಿಬಿಎಂಪಿ ಕಾರ್ಯಾಚರಣೆ ವಿರುದ್ಧ ಹೋರಾಟಕ್ಕೆ ರಾಜ್-ವಿಷ್ಣು ಫ್ಯಾನ್ಸ್ ಜೊತೆಯಾಗಿ ಮುಂದಾಗಿದ್ದಾರೆ. ರಾಜ್‌ಕುಮಾರ್‌ ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿಗಳ ನಡುವೆ ಒಂದು ಸಣ್ಣ ಪ್ರಮಾಣದ ಶೀತಲ ಸಮರ ನಡೆದಿತ್ತು. ಅದು ಗೊತ್ತಿಲ್ಲದ ವಿಚಾರವೇನಲ್ಲ. ಆದರೆ, ಇಂದು ಪುತ್ಥಳಿಗಳ ತೆರವು ವಿಚಾರ ಬಂದಾಗ ಈ ಇಬ್ಬರು ಮಹಾನ್‌ ನಟರ ಅಭಿಮಾನಿಗಳು ಒಂದಾಗಿದ್ದಾರೆ. ನ್ಯಾಯಾಲಯದ ಆದೇಶದ ಮೇರೆ ಪರವಾನಗಿ ಇಲ್ಲದ ಪುತ್ಥಳಿಗಳ ತೆರವು ಮಾಡಲು ಮುಂದಾಗಿದೆ. ಆದರೆ, ನಮಗೂ ನ್ಯಾಯಾಲಯದ ಮೇಲೆ ಗೌರವ ಇದೆ. ಆದರೆ, ಪ್ರತಿಮೆ, ಪುತ್ಥಳಿಗಳು ಅಭಿಮಾನಿಗಳ ಹಕ್ಕು ಎಂಬುದನ್ನು ತೋರಿಸುವ ಸಮಯ ಬಂದಿದೆ. ಹಾಗಾಗಿ, ಇಬ್ಬರು ಕಲಾವಿದರ ಅಭಿಮಾನಿಗಳು ಒಂದಾಗಿದ್ದೇವೆ ಎಂಬ ಮಾತುಗಳನ್ನು ಫ್ಯಾನ್ಸ್ ಹೇಳಿದ್ದಾರೆ. ಈ ಹೋರಾಟದ ಹಿನ್ನೆಲೆಯಲ್ಲಿ ರಾಜ್‌ ಮತ್ತು ವಿಷ್ಣು ಅಭಿಮಾನಿಗಳು ಬೆಂಗಳೂರಿನ ರಾಜಾಜಿನಗರದ ಡಾ. ರಾಜ್‌ಕುಮಾರ್ ಸಮುದಾಯ ಭವನದಲ್ಲಿ ಸೆ.5ರಂದು ಪತ್ರಿಕಾಗೋಷ್ಠಿ ನಡೆಸುವ ಕುರಿತು ಮಾಹಿತಿ ಹೊರಬಿದ್ದಿದೆ. ಹಿಂದಿನ ಸಂಘರ್ಷವನ್ನೆಲ್ಲ ಮರೆತು ಎಲ್ಲರೂ ಒಂದೇ ವೇದಿಕೆಯಿಂದ ಒಗ್ಗಟ್ಟಾಗಿ ಬಿಬಿಎಂಪಿ ಕಾರ್ಯಾಚರಣೆ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಕುರಿತಂತೆ ನಟ ಅನಿರುದ್ಧ ಮಾತನಾಡಿದ್ದರು. 'ಅನುಮತಿ ಇಲ್ಲದೇ ಇರುವ ಧ್ವಜದ ಕಂಬಗಳು, ಕಲಾವಿದರ ಪುತ್ಥಳಿಗಳನ್ನು ತೆರವುಗೊಳಿಸಬೇಕು ಎಂದು ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಇದು ನಿಜಕ್ಕೂ ತುಂಬ ನಾಜೂಕಾದಂತಹ ವಿಷಯ. ನಮ್ಮ ಕನ್ನಡಿಗರು ಬಹಳ ಶ್ರದ್ಧೆಯಿಂದ, ಶ್ರಮದಿಂದ ಆ ಕಂಬಗಳನ್ನು, ಪುತ್ಥಳಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈಗ ಇದ್ದಕ್ಕಿದ್ದಂತೆ ಅದನ್ನು ತೆರವುಗೊಳಿಸಬೇಕು ಎಂದು ಸರ್ಕಾರ ಹೇಳಿದರೆ, ಅದು ಬಹಳ ಕಷ್ಟಕರವಾದ ಕೆಲಸ. ನಮ್ಮ ಅಭಿಮಾನಿಗಳಿಂದ, ಕನ್ನಡಿಗರಿಂದ ತಪ್ಪಾಗಿರುವುದು ಹೌದು. ಆದರೆ, ಇದರಲ್ಲಿ ಸರ್ಕಾರದ ಜವಾಬ್ದಾರಿ ಕೂಡ ಇತ್ತು. ಆಗ ಸ್ಥಾಪನೆ ಮಾಡುವ ವೇಳೆ, ಸರ್ಕಾರವೇ ಬಂದು ಸೂಕ್ತವಾದ ಕ್ರಮಕೈಗೊಳ್ಳಬೇಕಾಗಿತ್ತು. ಆದರೆ ಅದು ತಗೊಂಡಿಲ್ಲ. ಹಾಗಾಗಿ, ಇದರಲ್ಲಿ ಸರ್ಕಾರದ ನಿರ್ಲಕ್ಷ್ಯತನ ಕೂಡ ಇದೆ. ಹಲವು ವರ್ಷಗಳಾದ ಮೇಲೆ, ಈಗ ಪುತ್ಥಳಿಗಳನ್ನು ತೆರವುಗೊಳಿಸಬೇಕು ಎಂದರೆ, ಅದು ಅಷ್ಟು ಸುಲಭ ಅಲ್ಲ. ಈಗ ಅದು ಅದೊಂದು ಪೂಜಾ ಸ್ಥಳ ಆಗಿರುತ್ತದೆ. ಆದ್ದರಿಂದ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ಈಗಿರುವ ಜಾಗದಿಂದ, ಹತ್ತಿರದಲ್ಲೇ ಸೂಕ್ತವಾದ ಜಾಗವನ್ನು ಗುರುತಿಸಿ, ಅಲ್ಲಿ ಪ್ರತಿಷ್ಠಾಪನೆಯನ್ನು ಮಾಡಬೇಕು' ಎಂದಿದ್ದರು ಅವರು.