₹400 ಕೋಟಿ ಮೌಲ್ಯದ ಹೆರಾಯಿನ್ ತುಂಬಿದ್ದ ಪಾಕಿಸ್ತಾನದ ದೋಣಿ ಗುಜರಾತ್‌ನಲ್ಲಿ ವಶಕ್ಕೆ

₹ 400 ಕೋಟಿ ಮೌಲ್ಯದ ಹೆರಾಯಿನ್ ತುಂಬಿದ್ದ ಪಾಕಿಸ್ತಾನದ ಮೀನುಗಾರಿಕಾ ಬೋಟ್‌ ಒಂದನ್ನು ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಉಗ್ರ ನಿಗ್ರಹ ದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದಿದ್ದಾರೆ.

₹400 ಕೋಟಿ ಮೌಲ್ಯದ ಹೆರಾಯಿನ್ ತುಂಬಿದ್ದ ಪಾಕಿಸ್ತಾನದ ದೋಣಿ ಗುಜರಾತ್‌ನಲ್ಲಿ ವಶಕ್ಕೆ
Linkup
ಹೊಸ ದಿಲ್ಲಿ: ಸುಮಾರು ₹ 400 ಕೋಟಿ ಮೌಲ್ಯದ ಹೆರಾಯಿನ್ ತುಂಬಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿಯೊಂದನ್ನು ಬಂದರಿನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಉಗ್ರ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ದೋಣಿಯನ್ನು ದಸ್ತಗಿರಿ ಮಾಡಲಾಗಿದೆ. "ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಉಗ್ರ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಮೀನುಗಾರಿಕಾ ಬೋಟ್‌ 'ಅಲ್‌ ಹುಸೈನಿ' ಯನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಆರು ಮಂದಿ ಸಿಬ್ಬಂದಿಗಳಿದ್ದರು. ಅವರಿಂದ ₹ 400 ಕೋಟಿ ಮೌಲ್ಯದ 77 ಕೆಜಿ ವಶಕ್ಕೆ ಪಡೆಯಲಾಗಿದೆ" ಎಂದು ಭಾರತೀಯ ರಕ್ಷಣಾ ಇಲಾಖೆಯ ಗುಜರಾತ್‌ ಪಿಆರ್‌ಓ ಟ್ವೀಟ್‌ ಮಾಡಿದೆ. ಈ ದೋಣಿಯು ಭಾರತಕ್ಕೆ ಸೇರಿದ ಜಲ ಪ್ರದೇಶದಲ್ಲಿ ಸಂಚರಿಸುತ್ತಿದ್ದನ್ನು ಗಮನಿಸಿದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಸಿಬ್ಬಂದಿಗಳನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಲಾಗುತ್ತಿದ್ದು, ಯಾವ ಕಾರಣಕ್ಕೆ ಈ ದೋಣಿ ಭಾರತದ ಜಲ ಮಾರ್ಗಕ್ಕೆ ಬಂದಿದೆ? ಈ ಮಾದಕ ವಸ್ತುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದರ ಹಿಂದೆ ಯಾರ ಕೈವಾಡ ಇದೆ. ಸೇನೆ ಅಥವಾ ಉಗ್ರರ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆಯಾ? ಮುಂತಾದ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. 2021ರಲ್ಲಿ 3 ಸಾವಿರ ಕೆ. ಜಿ.ಗಳಷ್ಟು ಹೆರಾಯಿನ್‌ ವಶ..! 2021 ರಲ್ಲಿ 3 ಸಾವಿರ ಕೆ. ಜಿ. ಗಳಷ್ಟು ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಭಾರಿ ಪ್ರಮಾಣದಲ್ಲಿ ಹೆರಾಯಿನ್‌ ಸಾಗಣೆಯಾಗುತ್ತಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ಜತೆಗೆ, ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲವು ಭಾರತವನ್ನು ಕೇಂದ್ರವಾಗಿ ರೂಪಿಸಿರುವ ಆತಂಕವೂ ವ್ಯಕ್ತವಾಗಿದೆ. ವಿಶೇಷವಾಗಿ ಮುಂಬಯಿ ಹಾಗೂ ಗುಜರಾತ್‌ನ ವಿವಿಧ ನಗರಗಳ ಬಂದರುಗಳ ಮೂಲಕ ಹೆರಾಯಿನ್‌ ಭಾರಿ ಪ್ರಮಾಣದಲ್ಲಿ ಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ. ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಗಳಾದ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಮತ್ತು ಡೈರೆಕ್ಟೊರೇಟ್‌ ಆಫ್‌ ರೆವೆನ್ಯೂ ಇಂಟೆಲಿಜೆನ್ಸ್‌ (ಡಿಆರ್‌ಐ) ಅಧಿಕಾರಿಗಳು ಈ ಜಾಲವನ್ನು ಪತ್ತೆ ಮಾಡಲು ಕಾರ್ಯತಂತ್ರ ರೂಪಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಲಾಕ್‌ ಡೌನ್‌ ಹಾಗೂ ಇತರ ಸಂಚಾರ ನಿರ್ಬಂಧಗಳ ಹೊರತಾಗಿಯೂ ರಾಜ್ಯವಾರು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿರುವ ಹೆರಾಯಿನ್‌ ಸೇರಿದಂತೆ ಮಾದಕ ವಸ್ತುಗಳ ಪ್ರಮಾಣ ಗಣನೀಯವಾಗಿದೆ. ಲಾಕ್‌ ಡೌನ್‌ ಸಂದರ್ಭದಲ್ಲಿ ದೇಶಾದ್ಯಂತ ಸಿಕ್ಕಿದ್ದು, ಬರೋಬ್ಬರಿ 202 ಕೆ.ಜಿ. ಹೆರಾಯಿನ್‌..! ಇನ್ನು 2022ರ ವಿಷಯಕ್ಕೆ ಬಂದರೆ, ಕಳೆದ ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 3000 ಕೆ. ಜಿ. ಹೆರಾಯಿನ್‌ ವಶಕ್ಕೆ ಪಡೆಯಲಾಗಿತ್ತು. ಇದರ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯವು 21 ಸಾವಿರ ಕೋಟಿ ರೂ. ಗೂ ಅಧಿಕ ಎಂದು ಗೊತ್ತಾದ ಕೂಡಲೇ ಅಧಿಕಾರಿಗಳೇ ಗಾಬರಿ ಬಿದ್ದಿದ್ದರು. ಈ ವರ್ಷ 2022ರ ಸೆಪ್ಟೆಂಬರ್‌ ಅಂತ್ಯದವರೆ 9,000 ಕೆ. ಜಿ. ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ.