ಮಹಾತ್ಮ ಗಾಂಧಿ-ನೆಹರೂ ಕೂಡ ಉಗ್ರರಾಗಿದ್ದರು: ಮೌಲಾನ ಅರ್ಷದ್‌ ಮದಾನಿ ಎಡವಟ್ಟು

ತಾಲಿಬಾನ್‌ ಉಗ್ರರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಜಮಿಯತ್‌ ಉಲ್ಮಾ-ಇ-ಹಿಂದ್‌ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅರ್ಷದ್‌ ಮದಾನಿ ಎಡವಟ್ಟೊಂದನ್ನು ಮಾಡಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. 'ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್‌ ನೆಹರೂ ಕೂಡ ಉಗ್ರರಾಗಿದ್ದರು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಾತ್ಮ ಗಾಂಧಿ-ನೆಹರೂ ಕೂಡ ಉಗ್ರರಾಗಿದ್ದರು: ಮೌಲಾನ ಅರ್ಷದ್‌ ಮದಾನಿ ಎಡವಟ್ಟು
Linkup
ಹೊಸದಿಲ್ಲಿ: ಉಗ್ರರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಜಮಿಯತ್‌ ಉಲ್ಮಾ-ಇ-ಹಿಂದ್‌ ರಾಷ್ಟ್ರೀಯ ಅಧ್ಯಕ್ಷ ಅವರು, '' ಮತ್ತು ಜವಾಹರಲಾಲ್‌ ನೆಹರೂ ಕೂಡ ಉಗ್ರರಾಗಿದ್ದರು,'' ಎಂದು ಹೇಳಿದ್ದಾರೆ. ''ಸ್ವಾತಂತ್ರ್ಯವು ಎಲ್ಲರ ಹಕ್ಕು. ತಾಲಿಬಾನಿಗಳು ದಾಸ್ಯದಿಂದ ಹೊರಬಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ. ಇದು ಭಯೋತ್ಪಾದನೆ ಆದಲ್ಲಿ, ಮಹಾತ್ಮ ಗಾಂಧಿ ಹಾಗೂ ನೆಹರೂ ಕೂಡ ಉಗ್ರರೇ ಆಗಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದವೆಲ್ಲರೂ ಉಗ್ರರೇ,'' ಎಂದು ಮದಾನಿ ಹೇಳಿದ್ದಾರೆ. ಅಫ್ಘಾನಿಸ್ತಾನದ ಯುವಕ-ಯುವತಿಯರು ಪ್ರತ್ಯೇಕವಾಗಿ ಶಿಕ್ಷಣ ಪಡೆಯಬೇಕೆಂಬ ತಾಲಿಬಾನ್‌ ಸರಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಮುಂದುವರಿದ ರಾಕ್ಷಸಿ ಪ್ರವೃತಿ!ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಕ್ರೌರ್ಯದ ಅತಿರೇಕದ ವರ್ತನೆ ತೋರುತ್ತಿರುವ ತಾಲಿಬಾನ್‌ ಉಗ್ರರು ಇತ್ತೀಚೆಗೆ ಸೆರೆಸಿಕ್ಕ ಆಫ್ಘಾನ್‌ ಸೇನೆಯ ಸೈನಿಕನೊಬ್ಬನನ್ನು ವಿಚಿತ್ರವಾಗಿ ಹಿಂಸಿಸಿ, ತಲೆ ಕಡಿದಿದ್ದಾರೆ. ನಂತರ ಥೇಟ್‌ ರಾಕ್ಷಸರಂತೆ ರುಂಡವನ್ನು ಕೈಯ್ಯಲ್ಲಿ ಹಿಡಿದುಕೊಂಡು ಕುಣಿದಾಡಿದ್ದಾರೆ. 36 ಸೆಕೆಂಡ್‌ಗಳ ಈ ಭಯಾನಕ ವಿಡಿಯೋವನ್ನು ತಾಲಿಬಾನ್‌ ಉಗ್ರರು ಮತ್ತು ಬೆಂಬಲಿಗರ ಖಾಸಗಿ ಚಾಟ್‌ರೂಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅದು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ, ಆರು ತಾಲಿಬಾನಿಗಳು ಒಬ್ಬ ಸೈನಿಕನನ್ನು ಸುತ್ತುವರಿದು ಆತನ ಮೇಲೆ ಮುಗಿಬೀಳುತ್ತಾರೆ.ಸೈನಿಕನ ಬೆನ್ನ ಮೇಲೆ ಆರೂ ಮಂದಿ ಕುಳಿತು ಕತ್ತಿಯಿಂದ ಆತನ ತಲೆ ಕಡಿಯುತ್ತಾರೆ. ಹಲವು ಬಾರಿ ಕುತ್ತಿಗೆಯ ಭಾಗಕ್ಕೆ ಕತ್ತಿಯಿಂದ ಪ್ರಹಾರ ನಡೆಸುತ್ತಾರೆ. ರಕ್ತ ಚಿಮ್ಮಿ ಹರಿಯುತ್ತಿರುವುದನ್ನು ಏಳನೇ ಉಗ್ರ ಚಿತ್ರೀಕರಿಸಿದ್ದಾನೆ. ಶಿರಚ್ಛೇದದ ಬಳಿಕ ಸೈನಿಕನ ರುಂಡವನ್ನು ಹಿಡಿದುಕೊಂಡ ಉಗ್ರರು ನೃತ್ಯ ಮಾಡುತ್ತಾರೆ. 'ಮುಜಾಹಿದ್ದೀನ್‌, ಅಲ್ಲಾಹು ಅಕ್ಬರ್‌, ಅಖುಂಡ್‌ಜಾದಾ ಚಿರಾಯುವಾಗಲಿ' ಎಂಬ ಘೋಷಣೆಗಳನ್ನು ಕೂಗುತ್ತಾರೆ.