3ರಿಂದ 5 ವರ್ಷ ಅವಧಿಯ ಎಫ್‌ಡಿ ಮೇಲೆ ಹೆಚ್ಚು ಬಡ್ಡಿ ನೀಡುವ ಟಾಪ್ 10 ಬ್ಯಾಂಕ್‌ಗಳಿವು!
3ರಿಂದ 5 ವರ್ಷ ಅವಧಿಯ ಎಫ್‌ಡಿ ಮೇಲೆ ಹೆಚ್ಚು ಬಡ್ಡಿ ನೀಡುವ ಟಾಪ್ 10 ಬ್ಯಾಂಕ್‌ಗಳಿವು!
ಕೋವಿಡ್-19 ಬಂದ ನಂತರ ಬ್ಯಾಂಕುಗಳ ಬಡ್ಡಿ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಸಾಲಗಳ ಮೇಲಿನ ಬಡ್ಡಿ ಇಳಿಕೆ ಜತೆಗೆ, ಠೇವಣಿಗಳಿಗೆ ಬ್ಯಾಂಕ್‌ಗಳು ನೀಡುವ ಬಡ್ಡಿ ಮೇಲೂ ಭಾರೀ ಇಳಿಕೆಯಾಗಿದೆ.
ಬೆಂಗಳೂರು: ಕೋವಿಡ್-19 ಬಂದ ನಂತರ ಬ್ಯಾಂಕುಗಳ ಬಡ್ಡಿ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಸಾಲಗಳ ಮೇಲಿನ ಬಡ್ಡಿ ಇಳಿಕೆ ಜತೆಗೆ, ಠೇವಣಿಗಳಿಗೆ ಬ್ಯಾಂಕ್‌ಗಳು ನೀಡುವ ಬಡ್ಡಿ ಮೇಲೂ ಭಾರೀ ಇಳಿಕೆಯಾಗಿದೆ.
ಆದರೆ, ಅಲ್ಪಾವಧಿ ಠೇವಣಿಗಳ ಮೇಲೆ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಬಡ್ಡಿ ಪಡೆಯಬಹುದಾಗಿದೆ. ಸಾಮಾನ್ಯವಾಗಿ ಉಳಿತಾಯ ಖಾತೆಗಳು, ಲಿಕ್ವಿಡ್ ಫಂಡ್, ಅಲ್ಪಾವಧಿ ನಿಧಿ, ನಿಶ್ಚಿತ ಠೇವಣಿಗಳು, ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್ಗಳು, ಟ್ರೆಷರಿ ಬಿಲ್, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್, ರೆಕರಿಂಗ್ ಡೆಪಾಸಿಟ್ಸ್ (RD) ಇವೇ ಮೊದಲಾದವು 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯಕ್ಕೆ (ಅಲ್ಪಾವಧಿಯ ಹಣಕಾಸಿನ ಉದ್ದೇಶಗಳಿಗಾಗಿ) ಸೂಕ್ತವಾದ ಆಯ್ಕೆಗಳಾಗಿವೆ.
ದೀರ್ಘಾವಧಿ ಹೂಡಿಕೆಗಿಂತಲೂ 3 ರಿಂದ 5 ವರ್ಷಗಳವರೆಗೆ ಅಲ್ಪಾವಧಿಯ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗುತ್ತದೆ. ಡಿಐಸಿಜಿಸಿ (ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್) ನೀಡುವ 5 ಲಕ್ಷ ರೂಪಾಯಿವರೆಗಿನ ಠೇವಣಿ ಸುರಕ್ಷತೆ (ಠೇವಣಿ ಮೇಲಿನ ವಿಮೆ) ನೀಡಿದೆ. ಹೀಗಾಗಿ ಹಿರಿಯ ನಾಗರಿಕರು ಹೆಚ್ಚುವರಿ ಆದಾಯ ನೀಡುವ ಮತ್ತು ಹೂಡಿಕೆಗೆ ಅಪಾಯವಿಲ್ಲದ ನಿಶ್ಚಿತ ಠೇವಣಿಗಳನ್ನು ಆಯ್ಕೆ ಮಾಡಬಹುದು.
ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ 3 ರಿಂದ 5 ವರ್ಷಗಳ ನಿಶ್ಚಿತ ಠೇವಣಿಗಳ (2 ಕೋಟಿಗಿಂತ ಕಡಿಮೆ) ಅತ್ಯುತ್ತಮ ನೀಡುತ್ತಿರುವ ಟಾಪ್ 10 ಬ್ಯಾಂಕ್ಗಳ ಬಗೆಗಿನ ಮಾಹಿತಿ ಇಲ್ಲಿದೆ.
ಸಣ್ಣ ಹಣಕಾಸು ಬ್ಯಾಂಕ್ಗಳಲ್ಲಿ 3ರಿಂದ 5 ವರ್ಷದ ಅವಧಿಯ ಎಫ್‌ಡಿ ಮೇಲೆ ಉತ್ತಮ ಬಡ್ಡಿ ನೀಡುವ ಬ್ಯಾಂಕ್‌ಗಳು:
ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 7.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 7.75
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ. 7.25
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ. 7.25
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.75
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.75
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.75
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.50
ಕ್ಯಾಪಿಟಲ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.50 (1 ವರ್ಷದಿಂದ 5 ವರ್ಷದೊಳಗೆ)
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.50
ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.75 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.25
ಖಾಸಗಿ ಬ್ಯಾಂಕ್ಗಳಲ್ಲಿ 3ರಿಂದ 5 ವರ್ಷದ ಅವಧಿಯ ಎಫ್‌ಡಿ ಮೇಲೆ ಉತ್ತಮ ಬಡ್ಡಿ ನೀಡುವ ಬ್ಯಾಂಕ್‌ಗಳು:
ಡಿಸಿಬಿ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.50 ಹಾಗೂ ಹಿರಿಯ ನಾಗರಿಕರಿಗೆ- ಶೇ. 7
ಆರ್ಬಿಎಲ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.30 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.80
ಯೆಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 7
ಇಂಡಸ್ಇಂಡ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.50
ಐಡಿಎಫ್ಸಿ ಫಸ್ಟ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 6 ಹಾಗೂ ಹಿರಿಯ ನಾಗರಿಕರಿಗೆ- ಶೇ. 6.50
ಆಕ್ಸಿಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.40 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.90
ಐಸಿಐಸಿಐ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.35 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.85
ಎಚ್ಡಿಎಫ್ಸಿ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.80
ಬಂಧನ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 6
ಕೊಟಕ್ ಮಹೀಂದ್ರಾ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.20 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.70
ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ 3ರಿಂದ 5 ವರ್ಷದ ಅವಧಿಯ ಫಿಕ್ಸೆಡ್ ಡೆಪಾಸಿಟ್ ಮೇಲೆ ಉತ್ತಮ ಬಡ್ಡಿ ನೀಡುವ ಬ್ಯಾಂಕ್‌ಗಳು:
ಯೂನಿಯನ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.50 ಹಾಗೂ ಹಿರಿಯ ನಾಗರಿಕರಿಗೆ- ಶೇ. 6
ಕೆನರಾ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.50 ಹಾಗೂ ಹಿರಿಯ ನಾಗರಿಕರಿಗೆ- ಶೇ. 6
ಎಸ್ಬಿಐ: ಸಾಮಾನ್ಯ ಎಫ್ಡಿ ದರ- ಶೇ. 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.80
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.80
ಐಡಿಬಿಐ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.80
ಬ್ಯಾಂಕ್ ಆಫ್ ಬರೋಡ: ಸಾಮಾನ್ಯ ಎಫ್ಡಿ ದರ- ಶೇ. 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.75
ಪಂಜಾಬ್ ನ್ಯಾಷನಲ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.75
ಇಂಡಿಯನ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.75
ಇಂಡಿಯನ್ ಓವರ್ಸೀಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ. 5.20 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.70
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಸಾಮಾನ್ಯ ಎಫ್ಡಿ ದರ- ಶೇ. 5 ಹಾಗೂ ಹಿರಿಯ ನಾಗರಿಕರಿಗೆ- ಶೇ. 5.50