2019ರ ಲೋಕಸಭೆ ಚುನಾವಣೆ ವೇಳೆ 300 ಭಾರತೀಯ ಗಣ್ಯರ ಮೊಬೈಲ್‌ ಹ್ಯಾಕ್‌; ತನಿಖಾ ವರದಿ ಬಹಿರಂಗ

2018ರಿಂದ 2019ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿದ್ದ ಇಬ್ಬರು ಸಚಿವರು ಸೇರಿದಂತೆ 40 ಪತ್ರಕರ್ತರು, ಉದ್ಯಮಿಗಳು, ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಸಾಮಾಜಿಕ ಹಕ್ಕುಗಳ ಹೋರಾಟಗಾರರ ಮೊಬೈಲ್‌ ಸಂಖ್ಯೆಗಳನ್ನು ಹ್ಯಾಕ್‌ ಮಾಡಿರುವುದು ಬಯಲಿಗೆ ಬಂದಿದೆ. ಪ್ಯಾರಿಸ್‌ ಮೂಲದ ಎನ್‌ಜಿಒ ಫಾರ್ಬಿಡನ್‌ ಸ್ಟೋರೀಸ್‌ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಜಂಟಿಯಾಗಿ ನಡೆಸಿದ ತನಿಖೆ 'ಪೆಗಾಸಸ್‌ ಪ್ರಾಜೆಕ್ಟ್' ಮೂಲಕ ಹ್ಯಾಕಿಂಗ್‌ ಬಯಲಾಗಿದೆ.

2019ರ ಲೋಕಸಭೆ ಚುನಾವಣೆ ವೇಳೆ 300 ಭಾರತೀಯ ಗಣ್ಯರ ಮೊಬೈಲ್‌ ಹ್ಯಾಕ್‌; ತನಿಖಾ ವರದಿ ಬಹಿರಂಗ
Linkup
ಹೊಸದಿಲ್ಲಿ: ಕಳೆದ ಲೋಕಸಭೆ ಚುನಾವಣೆಗೂ ಒಂದು ವರ್ಷ ಮುನ್ನ ಭಾರತದ 300ಕ್ಕೂ ಅಧಿಕ ಗಣ್ಯರ ಮೊಬೈಲ್‌ಗಳನ್ನು ಇಸ್ರೇಲ್‌ ಅಭಿವೃದ್ಧಿಪಡಿಸಿದ 'ಪೆಗಾಸಸ್‌' ಎಂಬ ಬೇಹುಗಾರಿಕೆ ಸಾಫ್ಟ್‌ವೇರ್‌ ಬಳಸಿ ಹ್ಯಾಕ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಲೋಕಸಭೆ ಚುನಾವಣೆಗೂ ಮುನ್ನ, ಅಂದರೆ 2018ರಿಂದ 2019ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿದ್ದ ಇಬ್ಬರು ಸಚಿವರು ಸೇರಿದಂತೆ 40 ಪತ್ರಕರ್ತರು,ಮೂರು ವಿರೋಧ ಪಕ್ಷದ ನಾಯಕರು, ಉದ್ಯಮಿಗಳು, ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಸಾಮಾಜಿಕ ಹಕ್ಕುಗಳ ಹೋರಾಟಗಾರರ ಮೊಬೈಲ್‌ ಸಂಖ್ಯೆಗಳನ್ನು ಹ್ಯಾಕ್‌ ಮಾಡಿರುವುದು ಬಯಲಿಗೆ ಬಂದಿದೆ. ಪ್ಯಾರಿಸ್‌ ಮೂಲದ ಎನ್‌ಜಿಒ ಫಾರ್ಬಿಡನ್‌ ಸ್ಟೋರೀಸ್‌ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಜಂಟಿಯಾಗಿ ನಡೆಸಿದ ತನಿಖೆ 'ಪೆಗಾಸಸ್‌ ಪ್ರಾಜೆಕ್ಟ್' ಮೂಲಕ ಹ್ಯಾಕಿಂಗ್‌ ಬಯಲಾಗಿದ್ದು, ಈ ತನಿಖಾ ವರದಿಯನ್ನು ಅಂತಾರಾಷ್ಟ್ರೀಯ ಮತ್ತು ಭಾರತೀಯ ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗಿದೆ. ಹ್ಯಾಕ್‌ ಆಗಿರುವ ಮೊಬೈಲ್‌ ಸಂಖ್ಯೆಗಳ ಪೈಕಿ ಒಂದನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಈಗಲೂ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಒಟ್ಟಾರೆಯಾಗಿ 50 ಸಾವಿರ ಸ್ಮಾರ್ಟ್‌ಫೋನ್‌ ಬಳಕೆದಾರರ ಮೇಲೆ ಸರಕಾರ ಪೆಗಾಸಸ್‌ ಮೂಲಕ ಬೇಹುಗಾರಿಕೆ ನಡೆಸಿದೆ ಎಂದು ತನಿಖಾ ವರದಿ ಆರೋಪಿಸಿದೆ. ಈ ವರದಿಯನ್ನು ಕೇಂದ್ರ ಸರಕಾರ ನಿರಾಕರಿಸಿದೆ.