ತ್ರಿಪುರ ಸಿಎಂ ವಿಪ್ಲವ್‌ ದೇವ್‌ ಹತ್ಯೆಗೆ ಯತ್ನ, ಮೂವರ ಬಂಧನ

ವಾಹನ ತನ್ನ ಮೇಲೆ ಹರಿದು ಹೋಗದಂತೆ ಸಿಎಂ ವಿಪ್ಲದ್‌ ದೇವ ಪಕ್ಕಕ್ಕೆ ಜಿಗಿದು ಬಚಾವಾದರು. ಆದರೆ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ವಿವರ ನೀಡಿದ್ದಾರೆ.

ತ್ರಿಪುರ ಸಿಎಂ ವಿಪ್ಲವ್‌ ದೇವ್‌ ಹತ್ಯೆಗೆ ಯತ್ನ, ಮೂವರ ಬಂಧನ
Linkup
ಅಗರ್ತಲಾ: ತ್ರಿಪುರ ಸಿಎಂ ಅವರ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಎಂ ಗುರುವಾರ ಸಂಜೆ ಶ್ಯಾಮಪ್ರಸಾದ್ ಮುಖರ್ಜಿ ಲೇನ್‌ನಲ್ಲಿರುವ ಅವರ ಅಧಿಕೃತ ನಿವಾಸದ ಬಳಿ ಸಂಜೆಯ ನಡಿಗೆಯಲ್ಲಿ ತೊಡಗಿದ್ದಾಗ ಈ ಮೂವರು ಕಾರನ್ನು ಭದ್ರತಾ ವಲಯದ ಮೂಲಕ ಚಲಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ತನ್ನ ಮೇಲೆ ಹರಿದು ಹೋಗದಂತೆ ವಿಪ್ಲದ್‌ ದೇವ್ ಪಕ್ಕಕ್ಕೆ ಜಿಗಿದು ಬಚಾವಾದರು. ಆದರೆ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಮುಖ್ಯಮಂತ್ರಿಯವರ ಭದ್ರತೆಯವರು ಕಾರನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ. ಮೂವರನ್ನು ಗುರುವಾರ ತಡರಾತ್ರಿ ಕೆರ್ಚೌಮುಹಾನಿ ಪ್ರದೇಶದಿಂದ ಬಂಧಿಸಲಾಗಿದ್ದು, ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಇವರನ್ನು ನ್ಯಾಯಾಧೀಶರ ಮುಂದೆ ಶುಕ್ರವಾರ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಲ್ಲಾ ಮೂವರು 20ರ ಆಸುಪಾಸಿನ ವಯಸ್ಸಿನವರಾಗಿದ್ದು, ಇವರ ಉದ್ದೇಶ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಸಹಾಯಕ ಪಬ್ಲಿಷ್‌ ಪ್ರಾಸಿಕ್ಯೂಟರ್‌ ವಿದ್ಯುತ್‌ ಸೂತ್ರಧಾರ್‌ ಹೇಳಿದ್ದಾರೆ.