ಚನ್ನಪಟ್ಟಣದ ಆಟಿಕೆಗಳ ಮಾರುಕಟ್ಟೆಗೆ ರಿಲಯನ್ಸ್‌ ಖಲಾರ ನೆರವು!

ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ ಆಟಿಕೆಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸಲು ರಿಲಯನ್ಸ್‌ ಇಂಡಸ್ಟ್ರೀಸ್‌ ಬೆಂಬಲಿತ ಸ್ಟಾರ್ಟಪ್‌ ಖಲಾರ ಮುಂದಾಗಿದೆ. ಚನ್ನಪಟ್ಟಣದ ಆಟಿಕೆಗಳಿಗೆ ಸಿಂಗಾಪೂರದಲ್ಲಿ ಹೊಸ ಗ್ರಾಹಕರನ್ನು ಖಲಾರ ಸೃಷ್ಟಿಸಿದೆ.

ಚನ್ನಪಟ್ಟಣದ ಆಟಿಕೆಗಳ ಮಾರುಕಟ್ಟೆಗೆ ರಿಲಯನ್ಸ್‌ ಖಲಾರ ನೆರವು!
Linkup
ಬೆಂಗಳೂರು: ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ ಆಟಿಕೆಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸಲು ಇಂಡಸ್ಟ್ರೀಸ್‌ ಬೆಂಬಲಿತ ಖಲಾರ ಮುಂದಾಗಿದೆ. ಖಲಾರ ಬಿಟುಬಿ (ಬ್ಯುಸಿನೆಸ್‌ ಟು ಬ್ಯುಸಿನೆಸ್‌) ವೇದಿಕೆಯಾಗಿದ್ದು, ಭಾರತೀಯ ಕುಶಲಕರ್ಮಿಗಳ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದೆ. ಇದರ ಭಾಗವಾಗಿ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಚನ್ನಪಟ್ಟಣದ ಆಟಿಕೆಗಳಿಗೆ ಸಿಂಗಾಪೂರದಲ್ಲಿ ಹೊಸ ಗ್ರಾಹಕರನ್ನು ಖಲಾರ ಸೃಷ್ಟಿಸಿದೆ ಎಂದು ರಿಲಯನ್ಸ್‌ ತಿಳಿಸಿದೆ. ಖಲಾರ ಸಹಭಾಗಿತ್ವದಲ್ಲಿ ದಿಲ್ಲಿಯಲ್ಲಿ ಅಕ್ಟೋಬರ್‌ 28ರಿಂದ 31ರವರೆಗೆ ಕರಕುಶಲ ವಸ್ತುಗಳು ಮತ್ತು ಉಡುಗೊರೆಗಳ ಮೇಳ ಆಯೋಜಿಸಲಾಗಿದೆ. ಗೃಹಲಂಕಾರ, ಕಸೂತಿ, ಉಡುಗೊರೆ, ಒಳಾಂಗಣ ಮತ್ತು ಹೊರಾಂಗಣ ಆಂಲಕಾರಿಕೆಗಳು, ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ರಿಲಯನ್ಸ್‌ ಬೆನ್ನೆಲುಬಾಗಿ ನಿಂತಿರುವ ಖಲಾರ ವೇದಿಕೆಯು ಸಾವಿರಾರು ಭಾರತೀಯ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಇದರ ಭಾಗವಾಗಿ ಚನ್ನಪಟ್ಟಣದ ಆಟಿಕೆಗಳು ಸಿಂಗಾಪುರದ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಚಿನ್ನಮಲೈನಲ್ಲಿ ಕೈಮಗ್ಗದಿಂದ ನೇಯ್ದ ಕಿಚನ್‌ ಟವಲ್‌ ಗಳು ಲಾಸ್‌ ಏಂಜಲೀಸ್‌ ನಲ್ಲಿ, ಬಂಗಾಳದಲ್ಲಿ ಸಬೈ ಹುಲ್ಲಿನಿಂದ ತಯಾರಿಸಿದ ಅಲಂಕಾರಿಕ ಚೌಕಗಳು ಹಾಂಗ್‌ ಕಾಂಗ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಣಿಪುರದ ಲಾಂಗ್ಪಿ ಗ್ರಾಮದಲ್ಲಿ ತಯಾರಿಸಿದ ಮಡಿಕೆಗಳು ಕೆನಾಡಾದ ಮಾರುಕಟ್ಟೆಯಲ್ಲಿ ಸಿಗುತ್ತದೆ. ಜೈಪುರದ ಸಾಂಪ್ರದಾಯಿಕ ಆಭರಣಗಳು ಯುರೋಪ್‌, ಆಸ್ಪ್ರೇಲಿಯಾ, ಕೆನಡಾ, ಅಮೆರಿಕಾ ಮತ್ತಿತರ ದೇಶಗಳ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿವೆ. ಖಲಾರ ತನ್ನ ನೆಟ್‌ವರ್ಕ್ನಲ್ಲಿ 600ಕ್ಕೂ ಸಣ್ಣ ಮತ್ತು ದೊಡ್ಡ ಉತ್ಪಾದಕರು, ಕುಶಲಕರ್ಮಿಗಳು, ತಯಾರಕರು ಮತ್ತು ರಫ್ತುದಾರರನ್ನು ಹೊಂದಿದ್ದು, 50ಕ್ಕೂ ಹೆಚ್ಚು ದೇಶಗಳಿಂದ ಖರೀದಿದಾರರನ್ನು ಹೊಂದಿದೆ. ಒಂದು ವರ್ಷದೊಳಗೆ 40ಕ್ಕೂ ಹೆಚ್ಚು ದೇಶಗಳಿಗೆ ಸರಕುಗಳನ್ನು ತಲುಪಿಸಿದೆ.