ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಸಮಸ್ಯೆ, 'ಇನ್ಫೋಸಿಸ್‌'ಗೆ ಟ್ಯಾಗ್‌ ಮಾಡಿ ಟ್ಟೀಟ್‌ ಮಾಡಿದ ನಿರ್ಮಲಾ

ಐಟಿ ದಿಗ್ಗಜ ಇನ್ಫೋಸಿಸ್‌ ಹಾಗೂ ಇದರ ಸಹ ಸಂಸ್ಥಾಪಕ ನಂದನ್‌ ನೀಲೇಕಣಿ ಅವರನ್ನು ಟ್ಯಾಗ್‌ ಮಾಡಿ ಟ್ಟೀಟ್‌ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, 'ಸೇವೆಗಳ ಗುಣಮಟ್ಟದಲ್ಲಿ ನಮ್ಮ ತೆರಿಗೆದಾರರನ್ನು ನಿರಾಸೆಗೊಳಿಸುವುದಿಲ್ಲ' ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಸಮಸ್ಯೆ, 'ಇನ್ಫೋಸಿಸ್‌'ಗೆ ಟ್ಯಾಗ್‌ ಮಾಡಿ ಟ್ಟೀಟ್‌ ಮಾಡಿದ ನಿರ್ಮಲಾ
Linkup
ಹೊಸದಿಲ್ಲಿ: ಸೋಮವಾರ ಆರಂಭಗೊಂಡಿರುವ ಇಲಾಖೆಯ ಹೊಸ ಇ - ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ಭಾರಿ ಸಮಸ್ಯೆಗಳು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಐಟಿ ದಿಗ್ಗಜ ಹಾಗೂ ಇದರ ಸಹ ಸಂಸ್ಥಾಪಕ ಅವರನ್ನು ಟ್ಯಾಗ್‌ ಮಾಡಿ ಹಣಕಾಸು ಸಚಿವೆ ಟ್ಟೀಟ್‌ ಮಾಡಿದ್ದಾರೆ. ಟ್ಟೀಟ್‌ನಲ್ಲಿ ಅವರು ಇನ್ಫೋಸಿಸ್‌ ಹಾಗೂ ನೀಲೇಕಣಿ, ಸೇವೆಗಳ ಗುಣಮಟ್ಟದಲ್ಲಿ ನಮ್ಮ ತೆರಿಗೆದಾರರನ್ನು ನಿರಾಸೆಗೊಳಿಸುವುದಿಲ್ಲ' ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. "ಬಹುನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಅನ್ನು ಕಳೆದ ರಾತ್ರಿ 20: 45 ಗಂಟೆಗೆ ಪ್ರಾರಂಭಿಸಲಾಯಿತು. ನನ್ನ ಟೈಮ್‌ ಲೈನ್‌ನಲ್ಲಿ ಕುಂದುಕೊರತೆ ಮತ್ತು ತೊಂದರೆಗಳನ್ನು ನಾನು ಗಮನಿಸುತ್ತಿದ್ದೇನೆ. ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ಸೇವೆಯ ಗುಣಮಟ್ಟದಲ್ಲಿ ನಮ್ಮ ತೆರಿಗೆದಾರರನ್ನು ನಿರಾಸೆಗೊಳಿಸುವುದಿಲ್ಲ ಎಂದು ಭಾವಿಸುತ್ತೇವೆ. ತೆರಿಗೆ ಪಾವತಿದಾರರಿಗೆ ಸುಲಭವಾಗಿ ಅನುಸರಣೆ ಮಾಡುವಂತೆ ಮಾಡುವುದು ನಮ್ಮ ಆದ್ಯತೆಯಾಗಿರಬೇಕು" ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 2019ರಲ್ಲಿ ಇನ್ಫೋಸಿಸ್‌ಗೆ ಮುಂದಿನ ತಲೆಮಾರಿನ ತೆರಿಗೆ ಫೈಲಿಂಗ್‌ ವ್ಯವಸ್ಥೆಯನ್ನು ರಚಿಸುವ ಗುತ್ತಿಗೆ ನೀಡಲಾಗಿತ್ತು. ರಿಟರ್ನ್ಸ್‌ಗಳ ಪ್ರಕ್ರಿಯೆಯ್ನು 63 ದಿನಗಳಿಂದ 1 ದಿನಕ್ಕೆ ಇಳಿಸಿ, ತ್ವರಿತವಾಗಿ ಮರುಪಾವತಿ ಮಾಡುವಂತ ವ್ಯವಸ್ಥೆ ರಚಿಸಲು ಸೂಚಿಸಲಾಗಿತ್ತು. ಈ ಹಿಂದೆ ಜಿಎಸ್‌ಟಿ ಪಾವತಿ ಹಾಗೂ ರಿಟರ್ನ್ ಫೈಲಿಂಗ್‌ಗೆ ಬಳಸುತ್ತಿರುವ ಜಿಎಸ್‌ಟಿ ನೆಟ್ವರ್ಕ್‌ (ಜಿಎಸ್‌ಟಿಎನ್‌) ಪೋರ್ಟಲ್‌ನ್ನೂ ಕೂಡ ಇನ್ಫೋಸಿಸ್‌ ಅಭಿವೃದ್ಧಿಪಡಿಸಿತ್ತು. ಜಿಎಸ್‌ಟಿ ಪೋರ್ಟಲ್‌ನಲ್ಲಿನ ಸಮಸ್ಯೆಗಳ ಕಾರಣಕ್ಕೆಯೂ 2017ರಲ್ಲಿ ಕಂಪನಿ ಭಾರಿ ಟೀಕೆ ಎದುರಿಸಿತ್ತು. ಈ ಹಿಂದೆ ಜಾರಿಯಲ್ಲಿದ್ದ ವೆಬ್‌ಸೈಟ್‌ನ ಜಾಗದಲ್ಲಿ ಹೊಸ ವೆಬ್‌ಸೈಟ್‌ ಸೋಮವಾರ ರಾತ್ರಿ 8.45ರಿಂದ ಅಸ್ತಿತ್ವಕ್ಕೆ ಬಂದಿದೆ. ಹೊಸ ಪೋರ್ಟಲ್‌ ಚಾಲನೆ ಪಡೆದುಕೊಳ್ಳುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಜನರು ಲಾಗಿನ್‌ ಆಗಿದ್ದರು. ಈ ವೇಳೆ ಹಲವು ಸಮಸ್ಯೆಗಳು ಕಂಡು ಬಂದಿದ್ದವು. ಈ ಸಂಬಂಧ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಗಳನ್ನು ತೆರೆದಿಟ್ಟಿದ್ದರು.