ಸಾಮಾನ್ಯ ಮಾಸಿಕ ಪಾಸ್ಗಳನ್ನು ಹೊಂದಿರುವವರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ವೋಲ್ವೊ ಬಸ್ಗಳಲ್ಲಿನ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ. ಅಲ್ಲದೇ ಸಾಮಾನ್ಯ ಮಾಸಿಕ ಪಾಸ್ ಹೊಂದಿರುವ ಪ್ರಯಾಣಿಕರು ಭಾನುವಾರಗಳಂದು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು () ಸಾಮಾನ್ಯ ಮಾಸಿಕ ಪಾಸ್ನೊಂದಿಗೆ ವೋಲ್ವೊ ಬಸ್ಗಳಲ್ಲಿ ಪ್ರಯಾಣಿಸಲು ಟಿಕೆಟ್ ದರವನ್ನು ಇಳಿಕೆ ಮಾಡಿದೆ.
ಪ್ರಯಾಣ ದರವನ್ನು 35 ರೂ. ಗಳಿಂದ 25 ರೂ.ಗಳಿಗೆ ಇಳಿಕೆ ಮಾಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಸಾಮಾನ್ಯ ಮಾಸಿಕ ಪಾಸ್ಗಳನ್ನು ಹೊಂದಿರುವವರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ವೋಲ್ವೊ ಬಸ್ಗಳಲ್ಲಿನ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ. 1050 ರೂ.ಗಳ ಮಾಸಿಕ ಹಾಗೂ 945 ರೂ.ಗಳ ಪಾಸ್ ಹೊಂದಿರುವ ಹಿರಿಯ ನಾಗರಿಕರು ಈ ಮೊದಲು 35 ರೂ. ಗಳ (ಜಿಎಎಸ್ಟಿ ಹೊರತುಪಡಿಸಿ) ಟಿಕೆಟ್ ಪಡೆದು ಸಂಚರಿಸಬಹುದಿತ್ತು.
ಸದ್ಯ 25 ರೂ. ಗಳ (ಜಿಎಸ್ಟಿ ಒಳಗೊಂಡು) ಟಿಕೆಟ್ ಪಡೆದು ವೋಲ್ವೊ ಬಸ್ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಅಲ್ಲದೇ ಸಾಮಾನ್ಯ ಮಾಸಿಕ ಪಾಸ್ ಹೊಂದಿರುವ ಪ್ರಯಾಣಿಕರು ಭಾನುವಾರಗಳಂದು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.