ಬೆಂಗಳೂರಿನ ಹಲವು ಏರಿಯಾಗಳಲ್ಲಿ 2 ದಿನ ಕಾವೇರಿ ನೀರು ಪೂರೈಕೆ ವ್ಯತ್ಯಯ

ನೀರು ಸರಬರಾಜು ಮಾರ್ಗದಲ್ಲಿ ಸೋರಿಕೆ ಆಗುತ್ತಿರುವ ಕಾರಣ ಬುಧವಾರ ಹಾಗೂ ಗುರುವಾರ ನಗರದ ಕೆಲವೆಡೆ ಕಾವೇರಿ ನದಿ ನೀರು ಸರಬರಾಜು ನಿಲುಗಡೆ ಆಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಬೆಂಗಳೂರಿನ ಹಲವು ಏರಿಯಾಗಳಲ್ಲಿ 2 ದಿನ ಕಾವೇರಿ ನೀರು ಪೂರೈಕೆ ವ್ಯತ್ಯಯ
Linkup
: ಪಿಳ್ಳಪ್ಪನ ಕಟ್ಟೆ ರಾಜಕಾಲುವೆ ಬಳಿ 900 ಮಿ. ಮೀ. ವ್ಯಾಸದ ಸರಬರಾಜು ಮಾರ್ಗದಲ್ಲಿ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರಿಪೇರಿ ಕಾಮಗಾರಿ ಕೈಗೊಂಡಿರುವುದರಿಂದ ಜೂನ್ 23 ಮತ್ತು 24 ರಂದು ನಗರದ ಕೆಲವು ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ನಾಗಪುರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಮಹಾಲಕ್ಷ್ಮಿ ಪುರಂ, ಮಂಜುನಾಥ ನಗರ, ಶಿವ ನಗರ, ಮಹಾ ಗಣಪತಿ ನಗರ, ತಿಮ್ಮಯ್ಯ ರಸ್ತೆ, ಬಸವೇಶ್ವರ ನಗರ, ಎಚ್‌ಬಿಸಿಎಸ್‌, ಶಕ್ತಿ ಗಣಪತಿ ನಗರ, ಶಂಕರ ಮಠ, ಕಮಲಾ ನಗರ, ಕಾಮಾಕ್ಷಿ ಪಾಳ್ಯ, ಶಾರದಾ ಕಾಲೋನಿ, ಬಿಇಎಂಎಲ್‌ ಬಡಾವಣೆ, ವೃಷಭಾವತಿ ನಗರ, ಸಣ್ಣಕ್ಕಿ ಬಯಲು, ವೈಯಾಲಿಕಾವಲ್‌, ಕರ್ನಾಟಕ ಲೇಔಟ್‌, ಕಿರ್ಲೋಸ್ಕರ್‌ ಕಾಲೋನಿ, ಮೀನಾಕ್ಷಿ ನಗರದಲ್ಲಿ ಕಾವೇರಿ ನೀರು ಬರೋದಿಲ್ಲ. ಸರ್‌. ಎಂ. ವಿ. 1 ರಿಂದ 9ನೇ ಬ್ಲಾಕ್‌, ಬಿಇಎಲ್‌ 1 ನೇ ಮತ್ತು 2ನೇ ಹಂತ, ಬಾಲಾಜಿ ಲೇಔಟ್‌, ಮಲ್ಲತ್ತಹಳ್ಳಿ, ರೈಲ್ವೆ ಲೇಔಟ್‌ 2ನೇ ಹಂತ, ಬಿಟಿಎಸ್‌ ಲೇಔಟ್‌, ಅಂಜನಾನಗರ, ಕೆಇಬಿ ರಸ್ತೆ, ಬ್ಯಾಡರಹಳ್ಳಿ, ರಾಜೀವ್‌ಗಾಂಧಿ ನಗರ, ಅಗ್ರಹಾರ ದಾಸರಹಳ್ಳಿ, ಕೆಎಚ್‌ಬಿ 2ನೇ ಹಂತ, ಪಾಪಯ್ಯ ಗಾರ್ಡನ್‌, ಮಹಾಲಕ್ಷ್ಮಿ ಲೇಔಟ್‌, ಸರಸ್ವತಿ ಪುರ, ಜೆಸಿ ನಗರ, ಗೆಳೆಯರ ಬಳಗ, ಕುರುಬರಹಳ್ಳಿ, ಸುಬ್ರಮಣ್ಯ ನಗರ ಎ, ಇ, ಡಿ ಬ್ಲಾಕ್‌, ಪ್ರಕಾಶ್‌ ನಗರ, ರಾಜಾಜಿನಗರ 1ನೇ, 2 ನೇ, 3 ನೇ, 4 ನೇ, 5 ನೇ ಮತ್ತು 6 ನೇ ಬ್ಲಾಕ್‌ ಹಾಗೂ 1 ನೇ ಎನ್‌ ಬ್ಲಾಕ್‌, ಜೈ ಮಾರುತಿ ನಗರ, ಕಂಠೀರವ ನಗರ, ನಂದಿನಿ ಲೇಔಟ್‌, ನಂಜುಂಡೇಶ್ವರ ನಗರದಲ್ಲೂ ನೀರು ಬರಲ್ಲ. ಶ್ರೀಕಂಠೇಶ್ವರ ನಗರ, ಶಂಕರ ನಗರ, ಕೃಷ್ಣಾ ನಂದ ನಗರ, ಕೆಎಚ್‌ಬಿ ಕಾಲೊನಿ, ಮಲ್ಲಿಗೆ ತೋಟ, ವಿದ್ಯಾರಣ್ಯ ನಗರ, ಎನ್‌. ಆರ್‌. ಗಾರ್ಡನ್‌, ಚೆಲುವಪ್ಪ ಗಾರ್ಡನ್‌, ಗಂಗಪ್ಪ ಗಾರ್ಡನ್‌, ಶಂಕರಪ್ಪ ಗಾರ್ಡನ್‌, ಮಾಗಡಿ ರಸ್ತೆ ಬಲ ಭಾಗ, ಭುವನೇಶ್ವರಿ ನಗರ, ಗೊರಗುಂಟೆ ಪಾಳ್ಯ, ಪರಿಮಳನಗರ, ಚೋಳೂರ ಪಾಳ್ಯ, ಗೋಪಾಲಪುರ, ಕೆ.ಪಿ.ಅಗ್ರಹಾರ, ರಜನಿ ನಗರ 6ನೇ ಬ್ಲಾಕ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.