ವಿಪಕ್ಷಗಳ ಭೂ ಹಗರಣ ಆರೋಪಕ್ಕೆ ಅಯೋಧ್ಯಾ ರಾಮಮಂದಿರ ಟ್ರಸ್ಟ್‌ ಬೇಸರ..

'ರಾಮ ಮಂದಿರ ನಿರ್ಮಾಣದ ಕುರಿತಾಗಿ ಕೆಲವರು ತಪ್ಪು ಮಾಹಿತಿಯನ್ನು ಹರಡುತ್ತಿರೋದು ಸ್ವಾರ್ಥ ಸಾಧನೆಯಾಗಿದೆ' - ಜುನಾ ಅಖಾರಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿಅವದೇಶಾನಂದ ಗಿರಿ ತೀವ್ರ ಅಸಮಾಧಾನ

ವಿಪಕ್ಷಗಳ ಭೂ ಹಗರಣ ಆರೋಪಕ್ಕೆ ಅಯೋಧ್ಯಾ ರಾಮಮಂದಿರ ಟ್ರಸ್ಟ್‌ ಬೇಸರ..
Linkup
ಲಖನೌ (ಉತ್ತರ ಪ್ರದೇಶ): ಅಯೋಧ್ಯಾ ಶ್ರೀರಾಮ ನಿರ್ಮಾಣ ಕಾರ್ಯವು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಟ್ರಸ್ಟ್‌ ಸ್ಪಷ್ಟಪಡಿಸಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಜುನಾ ಅಖಾರಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವದೇಶಾನಂದ ಗಿರಿ ಅವರು, ಇದೊಂದು ದೈವಿಕ ಅಭಿಯಾನವಾಗಿದ್ದು, ಈ ಅಭಿಯಾನಕ್ಕೆ ಕೆಟ್ಟ ಹೆಸರು ತರಲು ಯತ್ನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣದ ಕುರಿತಾಗಿ ತಪ್ಪು ಮಾಹಿತಿಯನ್ನು ಹರಡುತ್ತಿರೋದು ಸ್ವಾರ್ಥ ಸಾಧನೆಯಾಗಿದೆ ಎಂದು ಸ್ವಾಮಿ ಅವದೇಶಾನಂದ ಗಿರಿ ಅವರು ಅಸಮಾಧಾನಗೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ರಚಿತವಾಗಿರುವ ನಿರ್ಮಾಣ ಟ್ರಸ್ಟ್‌, ಭೂ ಅವ್ಯವಹಾರದಲ್ಲಿ ಭಾಗಿಯಾಗಿದೆ ಎಂದು ಉತ್ತರ ಪ್ರದೇಶದ ಎರಡು ಪ್ರಮುಖ ಪ್ರತಿಪಕ್ಷಗಳು ಭಾನುವಾರ ಆರೋಪಿಸಿದ್ದವು. ಲಖನೌನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಆಮ್‌ ಆದ್ಮಿ ಪಕ್ಷ ಹಾಗೂ ಸಮಾಜವಾದಿ ಪಕ್ಷದ ನಾಯಕರು, ಭೂ ಹಗರಣದ ಆಪಾದನೆ ಮಾಡಿದ್ದರು. ಖಾಸಗಿ ವ್ಯಕ್ತಿಯಿಂದ ರಿಯಲ್ ಎಸ್ಟೇಟ್ ಡೀಲರ್‌ಗಳು 2 ಕೋಟಿ ರೂ.ಗೆ ಭೂಮಿಯೊಂದನ್ನು ಖರೀದಿಸಿ ಅದನ್ನು ಟ್ರಸ್ಟ್‌ಗೆ 18.5 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಆರೋಪ ಭಾರೀ ಮಹತ್ವ ಪಡೆದುಕೊಂಡಿದೆ. ರಾಮಮಂದಿರ ವಿಚಾರವೇ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಟ್ರಂಪ್ ಕಾರ್ಡ್‌ ಆಗಲಿದೆ.