ಮೊದಲ ಪತ್ನಿ ಆರೋಪ: ನನ್ನ ಹಾಗೂ ಪತಿ ಮುಸ್ತಫಾ ರಾಜ್ ಸಂಬಂಧ ಭದ್ರವಾಗಿದೆ ಎಂದ ಪ್ರಿಯಾಮಣಿ

ನಟಿ ಪ್ರಿಯಾಮಣಿ ಪತಿ ಮುಸ್ತಫಾ ರಾಜ್‌ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ, ಹೀಗಾಗಿ ಪ್ರಿಯಾಮಣಿ-ಮುಸ್ತಫಾ ಮದುವೆ ಅಸಿಂಧು ಎಂದು ಮುಸ್ತಫಾ ಮೊದಲ ಪತ್ನಿ ಆಯೆಷಾ ದೂರು ನೀಡಿದ್ದಾರೆ. ಪ್ರಿಯಾಮಣಿ ತನ್ನ ಹಾಗೂ ಮುಸ್ತಫಾ ಸಂಬಂಧ ಭದ್ರತೆಯಿಂದ ಕೂಡಿದೆ ಎಂದಿದ್ದಾರೆ.

ಮೊದಲ ಪತ್ನಿ ಆರೋಪ: ನನ್ನ ಹಾಗೂ ಪತಿ ಮುಸ್ತಫಾ ರಾಜ್ ಸಂಬಂಧ ಭದ್ರವಾಗಿದೆ ಎಂದ ಪ್ರಿಯಾಮಣಿ
Linkup
ಉದ್ಯಮಿ ಅವರು ಮೊದಲ ಪತ್ನಿ ಆಯೆಷಾಗೆ ವಿಚ್ಛೇದನ ನೀಡದೆ ಮದುವೆಯಾಗಿದ್ದಾರೆ. ಹೀಗಾಗಿ ಅವರಿಬ್ಬರ ಮದುವೆ ಅಸಿಂಧು ಎಂದು ಆರೋಪಿಸಿ ಆಯೆಷಾ, ಮುಸ್ತಫಾ ಹಾಗೂ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದರು. ಆದ್ದರಿಂದ ಪ್ರಿಯಾಮಣಿ-ಮುಸ್ತಫಾ ಮದುವೆ ಕತೆ ಏನು ಎಂದು ಚರ್ಚೆಯಾಗುತ್ತಲಿತ್ತು. ಅದಕ್ಕೆ ಪ್ರಿಯಾಮಣಿ ಉತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಮಣಿ, "ನನ್ನ ಹಾಗೂ ಮುಸ್ತಫಾ ರಾಜ್ ಸಂಬಂಧ ಹೇಗಿದೆ ಎಂದು ಪ್ರಶ್ನಿಸಿದರೆ ತುಂಬ ಭದ್ರತೆಯಿಂದ ಕೂಡಿದೆ ಎಂದು ಹೇಳುವೆ. ಈಗ ಅವರು ಅಮೆರಿಕದಲ್ಲಿದ್ದಾರೆ. ಮುಸ್ತಫಾ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ನಾವಿಬ್ಬರೂ ಮಾತನಾಡಿಕೊಳ್ಳುತ್ತೇವೆ. ಕೆಲಸ ತುಂಬ ಇದ್ದಾಗ ಒಮ್ಮೊಮ್ಮೆ ಹಾಯ್, ಹೆಲೋ ಅಂತಲಾದರೂ ಮೆಸೇಜ್ ಮಾಡಿಕೊಳ್ಳುತ್ತೇವೆ" ಎಂದು ಪ್ರಿಯಾಮಣಿ ಹೇಳಿದ್ದಾರೆ. "ಮುಸ್ತಫಾ ತುಂಬ ಬ್ಯುಸಿಯಿದ್ದರೆ ಫ್ರೀ ಮಾಡಿಕೊಂಡು ಕಾಲ್ ಮಾಡ್ತಾರೆ, ಮೆಸೇಜ್ ಮಾಡ್ತಾರೆ. ನಾನು ಶೂಟಿಂಗ್‌ನಲ್ಲಿ ಬ್ಯುಸಿಯಿದ್ದರೆ ನಾನು ಕೂಡ ಹಾಗೆ ಮಾಡುವೆ. ನಿತ್ಯ ನಾವಿಬ್ಬರು ಮಾತನಾಡಲು ಪ್ರಯತ್ನಪಡುತ್ತೇವೆ. ಆಮೇಲೆ ನೀವು ಚೆನ್ನಾಗಿದ್ದೀರಾ ಅಂತಲಾದರೂ ಕೇಳಿಕೊಳ್ಳುತ್ತೇವೆ. ನಮ್ಮ ಸಂಬಂಧ ಭದ್ರತೆಯಿಂದ ಕೂಡಿದೆ. ನಾವಿಬ್ಬರೂ ಮಾತನಾಡಿಕೊಳ್ಳುತ್ತೇವೆ, ಅದೇ ನಮ್ಮ ಸಂಬಂಧದ ಕೀ" ಎಂದು ಪ್ರಿಯಾಮಣಿ ಹೇಳಿದ್ದಾರೆ. ಮುಸ್ತಫಾ- ಆಯೆಷಾ 2013ರಲ್ಲಿ ಬೇರೆ ಬೇರೆಯಾಗಿ ವಾಸವಿದ್ದಾರೆ. ಈ ದಂಪತಿಗೆ ಎರಡು ಮಕ್ಕಳಿವೆ. 2017ರಲ್ಲಿ ಮುಸ್ತಫಾ ಹಾಗೂ ಪ್ರಿಯಾಮಣಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆಯೆಷಾಗೆ ವಿಚ್ಛೇದನ ನೀಡಿಯಾಗಿದೆ, ನನ್ನ ಬಳಿ ಹಣ ವಸೂಲಿ ಮಾಡಲು ಆಯೆಷಾ ಈ ರೀತಿ ಆರೋಪ ಮಾಡುತ್ತಿದ್ದಾಳೆ, 2017ರಲ್ಲಿ ನಾನು ಪ್ರಿಯಾರನ್ನು ಮದುವೆಯಾದೆ. ಇಷ್ಟುವರ್ಷಗಳ ಕಾಲ ಯಾಕೆ ಆಯೆಷಾ ಸುಮ್ಮನಿದ್ದರು? ಎಂದು ಮುಸ್ತಫಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಮಣಿಯನ್ನು ಮದುವೆಯಾಗುವಾಗ ಕೋರ್ಟ್‌ಗೆ ಮುಸ್ತಫಾ ತಾನು ಬ್ಯಾಚುಲರ್ ಎಂದು ಹೇಳಿದ್ದರು.