ಮತ್ತೆ 61,000 ಡಾಲರ್ ದಾಟಿದ ಬಿಟ್‌ಕಾಯಿನ್: ಟಾಪ್ 10 ಕ್ರಿಪ್ಟೋ ಕರೆನ್ಸಿಗಳ ಬೆಲೆ ಎಷ್ಟು?
ಮತ್ತೆ 61,000 ಡಾಲರ್ ದಾಟಿದ ಬಿಟ್‌ಕಾಯಿನ್: ಟಾಪ್ 10 ಕ್ರಿಪ್ಟೋ ಕರೆನ್ಸಿಗಳ ಬೆಲೆ ಎಷ್ಟು?
ಕ್ರಿಪ್ಟೋಕರೆನ್ಸಿಗಳ ಬೆಲೆ ಏರಿಕೆ ಮುಂದುವರಿದಿದ್ದು, ಬಿಟ್‌ಕಾಯಿನ್ ಕಳೆದ 6 ತಿಂಗಳಲ್ಲಿ ಇದೇ ಮೊದಲ ಬಾರಿಗೆ 61 ಸಾವಿರ ಡಾಲರ್ ಗಡಿ ದಾಟಿದೆ. ಅ.16ರಂದು ಕ್ರಿಪ್ಟೋ ಮಾರುಕಟ್ಟೆ ಗಾತ್ರ 2.48 ಟ್ರಿಲಿಯನ್ ಡಾಲರ್ ದಾಟಿದೆ.
ಹೊಸದಿಲ್ಲಿ: ಕ್ರಿಪ್ಟೋಕರೆನ್ಸಿಗಳ ಬೆಲೆ ಏರಿಕೆ ಮುಂದುವರಿದಿದ್ದು, ಕಳೆದ 6 ತಿಂಗಳಲ್ಲಿ ಇದೇ ಮೊದಲ ಬಾರಿಗೆ 61 ಸಾವಿರ ಡಾಲರ್ ಗಡಿ ದಾಟಿದೆ. ಅ.16ರಂದು ಕ್ರಿಪ್ಟೋ ಮಾರುಕಟ್ಟೆ ಶೇ. 4. 52ರಷ್ಟು ಬೆಳವಣಿಗೆ ದಾಖಲಿಸಿದ್ದು, ಈ ಮೂಲಕ ಕ್ರಿಪ್ಟೋ ಮಾರುಕಟ್ಟೆ ಗಾತ್ರ 2.48 ಟ್ರಿಲಿಯನ್ ಡಾಲರ್ ದಾಟಿದೆ.
ಬಿಟ್‌ಕಾಯಿನ್ ತನ್ನ ಗತವೈಭವವನ್ನು ಮರಳಿ ಪಡೆದಿದ್ದು, ಪ್ರತಿ ಬಿಟ್‌ಕಾಯಿನ್ ಬೆಲೆ 60 ಸಾವಿರ ಡಾಲರ್ ದಾಟಿದೆ. ಶನಿವಾರ ಒಂದು ಬಿಟ್‌ಕಾಯಿನ್ 61,348 ಡಾಲರ್ ಮೌಲ್ಯದಲ್ಲಿ ವಹಿವಾಟು ನಡೆಸಿದೆ. ಒಟ್ಟು ಕ್ರಿಪ್ಟೋ ಮಾರುಕಟ್ಟೆಯಲ್ಲಿ ಬಿಟ್‌ಕಾಯಿನ್ ಶೇ.46.60ರಷ್ಟು ಪಾಲು ಹೊಂದಿದೆ. ಕಳೆದ ಒಂದು ದಿನದಲ್ಲಿ ಶೇ. 1.15ರಷ್ಟು ಹೆಚ್ಚಳ ಕಂಡಿದೆ.
ಕಳೆದ 6 ತಿಂಗಳಲ್ಲಿ ಇದೇ ಮೊದಲ ಬಾರಿಗೆ (ಅ.15ರಂದು) ಬಿಟ್‌ಕಾಯಿನ್ 60,000 ಡಾಲರ್ ಗಡಿದಾಟಿತ್ತು. ಶನಿವಾರ (ಅ.16) ಇದು 61 ಸಾವಿರ ಗಡಿದಾಟಿದ್ದು ಇತ್ತೀಚಿನ ಗರಿಷ್ಠ ಬೆಲೆಯಾಗಿದೆ.
ವಿಶ್ವದ ಅತಿ ದುಬಾರಿ ಬಿಟ್‌ಕಾಯಿನ್ ಕಳೆದ ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆಯ ಮೌಲ್ಯ (61,869 ಡಾಲರ್) ಹೊಂದಿತ್ತು. ಇದೀಗ ಮತ್ತೆ 61 ಸಾವಿರ ಡಾಲರ್ ಗಡಿ ದಾಟಿದೆ. ಕಳೆದ ಸೆಪ್ಟೆಂಬರ್ 20ರಿಂದೀಚೆಗೆ ಬಿಟ್‌ಕಾಯಿನ್ ಬೆಲೆಯಲ್ಲಿ ಶೇ.50ರಷ್ಟು ಹೆಚ್ಚಳ ಕಂಡಿದೆ.
ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು
ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಟೋಬರ್ 16ರಂದು ಅವುಗಳ ಮೌಲ್ಯ ಹೀಗಿದೆ.