ಭಾರತದ ಅಸಂಘಟಿತ ವಲಯದ ಕಾರ್ಮಿಕರ ನೆರವಿಗೆ ವಿಶ್ವಬ್ಯಾಂಕ್‌ನಿಂದ ಸಾಲ

ಭಾರತದ ಅಸಂಘಟಿತ ಕಾರ್ಮಿಕರ ವಲಯಕ್ಕೆ ನೆರವಾಗಲು ವಿಶ್ವಬ್ಯಾಂಕ್‌ ಅಂದಾಜು 3,717 ಕೋಟಿ ರೂ. ಸಾಲ ಮಂಜೂರು ಮಾಡಿದ್ದು, ಕೋವಿಡ್‌ ಬಿಕ್ಕಟ್ಟಿನಿಂದ ಬಳಲುತ್ತಿರುವ ರಾಜ್ಯಗಳಿಗೆ ಈ ಸಾಲದಿಂದ ನೆರವಾಗಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಭಾರತದ ಅಸಂಘಟಿತ ವಲಯದ ಕಾರ್ಮಿಕರ ನೆರವಿಗೆ ವಿಶ್ವಬ್ಯಾಂಕ್‌ನಿಂದ ಸಾಲ
Linkup
ಹೊಸದಿಲ್ಲಿ: ಭಾರತದ ಅಸಂಘಟಿತ ಕಾರ್ಮಿಕರ ವಲಯಕ್ಕೆ ನೆರವಾಗಲು 500 ದಶಲಕ್ಷ ಡಾಲರ್‌ (ಅಂದಾಜು 3,717 ಕೋಟಿ ರೂ.) ಸಾಲ ಮಂಜೂರು ಮಾಡಿರುವುದಾಗಿ ಬುಧವಾರ ತಿಳಿಸಿದೆ. ಕೋವಿಡ್‌ ಬಿಕ್ಕಟ್ಟಿನಿಂದ ಬಳಲುತ್ತಿರುವ ರಾಜ್ಯಗಳಿಗೆ ಈ ಸಾಲದಿಂದ ನೆರವಾಗಲಿದೆ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ. ವಿಶ್ವಬ್ಯಾಂಕ್‌ ತನ್ನ ಅಧೀನದಲ್ಲಿರುವ ಇಂಟರ್‌ನ್ಯಾಶನಲ್‌ ಡೆವಲಪ್‌ಮೆಂಟ್‌ ಅಸೋಸಿಯೇಶನ್‌ ಮೂಲಕ ಸಾಲ ವಿತರಿಸಿದೆ. ಈ ಸಾಲದ ಮರು ಪಾವತಿ ಅವಧಿ 18.5 ವರ್ಷ ಇದೆ. ನಗರ ಪ್ರದೇಶದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರು, ಬಡವರ ಸಾಮಾಜಿಕ ಭದ್ರತೆ ಯೋಜನೆಗೆ ಈ ಸಾಲದ ಹಣವನ್ನು ಬಳಸಬಹುದು ಎಂದು ವಿಶ್ವಬ್ಯಾಂಕ್‌ನ ಭಾರತೀಯ ಘಟಕದ ನಿರ್ದೇಶಕ ಜುನೈದ್‌ ಅಹಮದ್‌ ತಿಳಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಸುಮಾರು 10,000 ರೂ.ಗಳ ಅಗ್ಗದ ಸಾಲ ನೀಡಬಹುದು ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.