ಜುಲೈ 22ರಿಂದ ಹೊಸ ಕಾರ್ಡ್‌ಗಳನ್ನು ವಿತರಿಸದಂತೆ Mastercard ಮೇಲೆ ಆರ್‌ಬಿಐ ನಿರ್ಬಂಧ

ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಮೂಲಕ ವಿತರಿಸುವ ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಸಂಸ್ಥೆಯು ಹೊಸ ಗ್ರಾಹಕರಿಗೆ ಕಾರ್ಡ್ ವಿತರಿಸದಂತೆ ಆರ್‌ಬಿಐ ನಿರ್ಬಂಧ ವಿಧಿಸಿದೆ.

ಜುಲೈ 22ರಿಂದ ಹೊಸ ಕಾರ್ಡ್‌ಗಳನ್ನು ವಿತರಿಸದಂತೆ Mastercard ಮೇಲೆ ಆರ್‌ಬಿಐ ನಿರ್ಬಂಧ
Linkup
ಮುಂಬಯಿ: ನೀತಿ ಬಲಪಡಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಹೆಜ್ಜೆ ಇರಿಸಿದೆ. ಜುಲೈ 22ರಿಂದ ಅನ್ವಯವಾಗುವಂತೆ ಯಾವುದೇ ಹೊಸ ದೇಶಿ ಗ್ರಾಹಕರನ್ನು ಹೊಂದದಂತೆ ಮೇಲೆ ಬುಧವಾರ ನಿರ್ಬಂಧ ವಿಧಿಸಿದೆ. ಅಮೆರಿಕ ಮೂಲದ ನೆಟ್‌ವರ್ಕ್ ಸಂಸ್ಥೆಯು ಯಾವುದೇ ಪ್ರೀಪೇಯ್ಡ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಭಾರತದ ಒಳಗಿನ ಜಾಲದಲ್ಲಿ ಹೊಸ ಗ್ರಾಹಕರಿಗೆ ವಿತರಿಸದಂತೆ ನಿರ್ಬಂಧಿಸಲಾಗಿದೆ. ಆದರೆ ಈ ಆದೇಶವು ಈಗಾಗಲೇ ಇರುವ ಮಾಸ್ಟರ್ ಕಾರ್ಡ್ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಮಾಸ್ಟರ್ ಕಾರ್ಡ್, ಬಳಿಕ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ವಿತರಿಸುವ ಎರಡನೆಯ ಅತಿ ದೊಡ್ಡ ಸಂಸ್ಥೆಯಾಗಿದೆ. ತೆಗೆದುಕೊಂಡಿರುವ ಕಠಿಣ ನಿರ್ಧಾರವು ವಿದೇಶಿ ಸಂಬಂಧದಲ್ಲಿ ಗೊಂದಲಗಳಿಗೆ ಎಡೆಮಾಡಿಕೊಡುವ ಸಾಧ್ಯತೆಯೂ ಇದೆ. ಭಾರತದ ಗ್ರಾಹಕರಿಗೆ ಸಂಬಂಧಿಸಿದ ಎಲ್ಲಾ ದತ್ತಾಂಶಗಳನ್ನು ಭಾರತದ ಮಣ್ಣಿನಲ್ಲಿಯೇ ಸಂಗ್ರಹಿಸಬೇಕು ಎಂದು 2018ರ ಏಪ್ರಿಲ್ ತಿಂಗಳಿನಿಂದಲೂ ಎಲ್ಲಾ ನಿಯಂತ್ರಿತ ಸಂಸ್ಥೆಗಳಿಗೆ ಆರ್‌ಬಿಐ ಸೂಚನೆ ನೀಡುತ್ತಲೇ ಬಂದಿದೆ. 'ಸಾಕಷ್ಟು ಸಮಯ ಹಾಗೂ ಅವಕಾಶಗಳನ್ನು ನೀಡಿದ್ದರೂ, ಪಾವತಿ ವ್ಯವಸ್ಥೆಯ ದತ್ತಾಂಶಗಳ ಕುರಿತಾದ ನಿರ್ದೇಶನಗಳನ್ನು ಪಾಲಿಸುವುದರಲ್ಲಿ ಆಸಕ್ತಿ ವಹಿಸುವಂತೆ ಸಂಸ್ಥೆಯು ನಡೆದುಕೊಂಡಿರಲಿಲ್ಲ' ಎಂದು ಆರ್‌ಬಿಐ ತನ್ನ ಕ್ರಮಕ್ಕೆ ವಿವರಣೆ ನೀಡಿದೆ. ನೆಟ್‌ವರ್ಕ್ ಬಳಕೆಗಾಗಿ ಮಾಸ್ಟರ್ ಕಾರ್ಡ್, ವೀಸಾ ಅಥವಾ ರುಪೇ ಕಂಪೆನಿಗಳೊಂದಿಗೆ ಪಾಲುದಾರಿಕೆ ಹೊಂದಿರುವ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಕಾರ್ಡ್‌ಗಳನ್ನು ವಿತರಿಸುತ್ತವೆ. ಒಂದು ಕಾರ್ಡ್ ಅನ್ನು ಸ್ವೈಪ್ ಮಾಡಿದಾಗ ಅದರ ಪ್ರಕ್ರಿಯೆಯು ನೆಟ್ವರ್ಕ್ ಕ್ಲೌಡ್‌ನಲ್ಲಿ ನಡೆಯುತ್ತದೆ. ಭಾರತ ಎರಡನೇ ದೊಡ್ಡ ಮಾರುಕಟ್ಟೆಉದ್ಯೋಗಿಗಳ ಸಂಖ್ಯೆಯ ವಿಚಾರದಲ್ಲಿ ಮಾಸ್ಟರ್ ಕಾರ್ಡ್‌ನ ಎಲ್ಲ ಮಾರುಕಟ್ಟೆಗಳಿಗೆ ಹೋಲಿಸಿದರೆ, ಭಾರತವು ಕಂಪೆನಿಯ ಎರಡನೆಯ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಈಗಾಗಲೇ ಭಾರತದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಮಾಸ್ಟರ್ ಕಾರ್ಡ್, ಇನ್ನೂ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದೆ. ಮೂರನೇ ಕಂಪೆನಿಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಡಿನ್ನರ್ಸ್ ಕ್ಲಬ್ ಬಳಿಕ ಮಾಸ್ಟರ್ ಕಾರ್ಡ್, ದತ್ತಾಂಶ ಸ್ಥಳೀಕರಣ ನಿಯಮಕ್ಕೆ ಬದ್ಧರಾಗದೆ ಇರುವುದಕ್ಕೆ ನಿಷೇಧ ಎದುರಿಸುತ್ತಿರುವ ಮೂರನೇ ಅಮೆರಿಕನ್ ಕಂಪೆನಿ ಎನಿಸಿದೆ. ಉಳಿದೆರಡು ಕಂಪೆನಿಗಳು ಏಪ್ರಿಲ್‌ನಿಂದಲೇ ನಿಷೇಧ ಎದುರಿಸುತ್ತಿವೆ. ನಿಯಮ ಪಾಲಿಸುತ್ತಿರುವ ವೀಸಾಭಾರತದಲ್ಲಿನ ಮುಂಚೂಣಿ ಕಾರ್ಡ್ ವಿತರಕ ವೀಸಾ, ಈಗಾಗಲೇ ದತ್ತಾಂಶ ಸ್ಥಳೀಕರಣ ನಿಯಮವನ್ನು ಅನುಸರಿಸುತ್ತಿದೆ. ಭಾರತದ ಒಳಗೆ ದತ್ತಾಂಶ ಸಂಗ್ರಹಣಾ ಸಾಮರ್ಥ್ಯವನ್ನು ಸೃಷ್ಟಿಸಲು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕಾಗಿ ಮಾಸ್ಟರ್ ಕಾರ್ಡ್ ನಿರಂತರವಾಗಿ ಹೆಚ್ಚಿನ ಸಮಯವನ್ನು ಕೋರುತ್ತಾ ಬಂದಿತ್ತು.