ಭಾರತದಿಂದ 2ನೇ ಅತ್ಯಧಿಕ ರಫ್ತು ತಾಣ ಚೀನಾ: ಅಗ್ರ ಸ್ಥಾನದಲ್ಲಿ ಅಮೆರಿಕ

ಭಾರತದಿಂದ ಅತಿ ಹೆಚ್ಚು ರಫ್ತು ವಹಿವಾಟು ನಡೆಯುವ ಎರಡನೇ ತಾಣವಾಗಿ ಯುಎಇ ಬದಲಿಗೆ ಚೀನಾ ದಾಖಲಾಗಿದೆ. ಭಾರತವು ಅತಿ ಹೆಚ್ಚಿನ ರಫ್ತನ್ನು ಅಮೆರಿಕಕ್ಕೆ ಮಾಡುತ್ತಿದ್ದು, ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಭಾರತದಿಂದ 2ನೇ ಅತ್ಯಧಿಕ ರಫ್ತು ತಾಣ ಚೀನಾ: ಅಗ್ರ ಸ್ಥಾನದಲ್ಲಿ ಅಮೆರಿಕ
Linkup
ಹೊಸದಿಲ್ಲಿ: ಭಾರತದಿಂದ ಅತಿ ಹೆಚ್ಚು ವಹಿವಾಟು ನಡೆಯುವ ಎರಡನೇ ತಾಣವಾಗಿ ಯುಎಇ ಬದಲಿಗೆ ದಾಖಲಾಗಿದೆ. ಭಾರತವು ಅತಿ ಹೆಚ್ಚಿನ ರಫ್ತನ್ನು ಅಮೆರಿಕಕ್ಕೆ ಮಾಡುತ್ತಿದ್ದು, ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ 2020-21ರಲ್ಲಿ ಎರಡನೇ ಅತಿ ಹೆಚ್ಚು ರಫ್ತು ಯುಎಇ ಬದಲಿಗೆ ಚೀನಾಕ್ಕೆ ಆಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಭಾರತವು 2020-21ರಲ್ಲಿ ಚೀನಾಕ್ಕೆ 21.18 ಶತಕೋಟಿ ಡಾಲರ್‌ ಮೌಲ್ಯದ (ಅಂದಾಜು 1.54 ಲಕ್ಷ ಕೋಟಿ ರೂ.) ರಫ್ತು ಮಾಡಿದೆ.ಶೇ.28ರಷ್ಟು ಏರಿಕೆಯಾಗಿದೆ. ಅಮೆರಿಕಕ್ಕೆ 51 ಶತಕೋಟಿ ಡಾಲರ್‌ ರಫ್ತು (ಅಂದಾಜು 3.72 ಲಕ್ಷ ಕೋಟಿ ರೂ.) ನಡೆದಿತ್ತು. ಭಾರತದೊಂದಿಗಿನ ವ್ಯಾಪಾರ ಪಾಲುದಾರ ರಾಷ್ಟ್ರಗಳ ಪೈಕಿ ಈಗಲೂ ಅಮೆರಿಕ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ. ಆದರೆ, ಸರಕಾರ ದಾಖಲೆಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ಅಮೆರಿಕ ಜತೆಗಿನ ಆಮದು ಮತ್ತು ರಫ್ತು ವಹಿವಾಟಿನಲ್ಲಿ ಶೇ.2.78ರಷ್ಟು ಇಳಿಕೆಯಾಗಿದೆ. ಭಾರತವು ಚೀನಾಕ್ಕೆ ಮುಖ್ಯವಾಗಿ ಕಬ್ಬಿಣದ ಅದಿರು, ರಾಸಾಯನಿಕ, ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿದೆ. ಹಾಂಕಾಂಗ್‌, ಬಾಂಗ್ಲಾದೇಶ, ಯುಎಇ, ವಿಯೆಟ್ನಾಂ, ಸೌದಿ ಅರೇಬಿಯಾ, ಇರಾನ್‌, ಇಂಡೊನೇಷ್ಯಾ ಇತರ ಪ್ರಮುಖ ರಫ್ತು ನೆಲೆಗಳಾಗಿವೆ. ಕೃಷಿ ಉತ್ಪನ್ನಗಳ ರಫ್ತು 2020-21ರಲ್ಲಿಶೇ.18ರಷ್ಟು ವೃದ್ಧಿಸಿದೆ.