ಶೀಘ್ರವೇ ಅಡುಗೆ ಎಣ್ಣೆ ಬೆಲೆ ಇಳಿಕೆ ಸಾಧ್ಯತೆ! ಶೇ.5ರಷ್ಟು ತೆರಿಗೆ ಕಡಿತ ಮಾಡಿದ ಕೇಂದ್ರ!

ಪ್ರತಿ ಲೀಟರ್‌ಗೆ 100 ರೂಪಾಯಿ ಇದ್ದ ಅಡುಗೆ ಎಣ್ಣೆ ಬೆಲೆ ₹200ರ ಗಡಿ ತಲುಪಿತ್ತು. ದಿನೇದಿನೆ ಬೆಲೆಏರಿಕೆ ಸುದ್ದಿ ಕೇಳಿಕೇಳಿ ಶಾಕ್​ ಆಗಿದ್ದ ಮಹಿಳೆಯರಿಗೆ ಈಗೊಂದು ಸಂತಸದ ಸುದ್ದಿ ಇದೆ. ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ.

ಶೀಘ್ರವೇ ಅಡುಗೆ ಎಣ್ಣೆ ಬೆಲೆ ಇಳಿಕೆ ಸಾಧ್ಯತೆ! ಶೇ.5ರಷ್ಟು ತೆರಿಗೆ ಕಡಿತ ಮಾಡಿದ ಕೇಂದ್ರ!
Linkup
ಹೊಸದಿಲ್ಲಿ: ಇತ್ತೀಚೆಗೆ ಬೆಲೆ ರಾಕೆಟ್‌ ವೇಗದಲ್ಲಿ ಏರಿತ್ತು. ಪ್ರತಿ ಲೀಟರ್‌ಗೆ 100 ರೂಪಾಯಿ ಇದ್ದ ಅಡುಗೆ ಎಣ್ಣೆ ಬೆಲೆ ₹200ರ ಗಡಿ ತಲುಪಿತ್ತು. ದಿನೇದಿನೆ ಬೆಲೆಏರಿಕೆ ಸುದ್ದಿ ಕೇಳಿಕೇಳಿ ಶಾಕ್ ಆಗಿದ್ದ ಮಹಿಳೆಯರಿಗೆ ಈಗೊಂದು ಸಂತಸದ ಸುದ್ದಿ ಇದೆ. ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ಕೇಂದ್ರ ಸರಕಾರವು ಕಚ್ಚಾ ತಾಳೆ ಎಣ್ಣೆಗೆ ವಿಧಿಸುವ ಸುಂಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆಏರಿಕೆ ಜತೆಗೆ ಎಲ್ ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗಿದ್ದವು. ಈ ಸಂದರ್ಭದಲ್ಲಿ ಸರ್ಕಾರವು ಅಡುಗೆ ಎಣ್ಣೆ ಮೇಲಿನ ತೆರಿಗೆ ಇಳಿಸುತ್ತಿರುವುದು ದೇಶದ ಜನರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ. ಕ್ರೂಡ್ ಪಾಮ್ ಆಯಿಲ್ (ಕಚ್ಚಾ ) ಮೇಲಿನ ಸುಂಕವನ್ನು ಶೇ. 5ರಷ್ಟು ಕಡಿತಗೊಳಿಸಲು ಕೇಂದ್ರ ಮುಂದಾಗಿದೆ. 'ಕಳೆದ ಒಂದು ತಿಂಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಖಾದ್ಯ ತೈಲ ಬೆಲೆ ಮತ್ತು ರೀಫೈನ್ಡ್ ಪಾಮ್ ಆಯಿಲ್ ಬೆಲೆಗಳು ಇಳಿಮುಖವಾಗುತ್ತಿವೆ. ಆದರೆ, ದೇಶೀಯ ಸಂಸ್ಕರಿಸಿದ ತಾಳೆ ಎಣ್ಣೆ ಮತ್ತು ಕಚ್ಚಾ ಖಾದ್ಯ ತೈಲದ ಬೆಲೆಗಳು ಹೆಚ್ಚಾಗಿದ್ದವು. ಖಾದ್ಯ ತೈಲದ ಬೆಲೆ ಏರಿಕೆಯ ಬಗ್ಗೆ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಚ್ಚಾ ಪಾಮ್ ಆಯಿಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. "ಹಣಕಾಸು ಸಚಿವಾಲಯವು ಜೂನ್‌ 29ರ ಆದೇಶದಲ್ಲಿ ಕಸ್ಟಮ್ಸ್ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಈ ಆದೇಶ 2021 ರ ಜೂನ್ 30ರಿಂದ ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ"ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುಂಕ ಕಡಿತದ ನಂತರ, ಕಚ್ಚಾ ತಾಳೆ ಎಣ್ಣೆ ಮೇಲಿನ ತೆರಿಗೆ ದರ ಶೇ.30.25 ರಷ್ಟಿದೆ. ಇದರಲ್ಲಿ ಹೆಚ್ಚುವರಿ ಕೃಷಿ ತೆರಿಗೆ ಶೇ. 17.5 ಮತ್ತು ಸಮಾಜ ಕಲ್ಯಾಣ ತೆರಿಗೆ ಶೇ.10ರಷ್ಟಿದೆ. ಈ ಕಡಿತವು ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳನ್ನು ತಗ್ಗಿಸುತ್ತದೆ. ಶುಲ್ಕಗಳಲ್ಲಿನ ಈ ಕಡಿತವು ಸೆಪ್ಟೆಂಬರ್ 30ರವರೆಗೆ ಅನ್ವಯಿಸುತ್ತದೆ. ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್‌ಪಿಡಿ) ಆರ್‌ಬಿಡಿ ಪಾಮೋಲಿನ್ ಆಮದಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕುವಂತೆ ಶಿಫಾರಸ್ಸು ಮಾಡಿದೆ. ದೇಶೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಎಣ್ಣೆ ಲಭ್ಯವಾಗುವಂತೆ ಡಿಎಫ್ಪಿಡಿ ಹೇಳಿದೆ. ಜೊತೆಗೆ ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಮುಕ್ತ ಸಾಮಾನ್ಯ ಆಮದುಗಳಲ್ಲಿ ಇರಿಸಿದೆ. ವಾಣಿಜ್ಯ ಇಲಾಖೆಯು ಜೂನ್‌ 30ರಂದು ರಿಫೈನ್ಡ್ ಬ್ಲೀಚ್ಡ್ ಡಿಯೋಡರೈಸ್ಡ್ (ಆರ್‌ಬಿಡಿ) ಪಾಮ್ ಆಯಿಲ್ ಮತ್ತು ಆರ್ಬಿಡಿ ಪಾಮೋಲಿನ್ಗಾಗಿ ಪರಿಷ್ಕೃತ ಆಮದು ನೀತಿಯನ್ನು ಬದಲಾಯಿಸಿದೆ. ಈ ನೀತಿಯು ಕೂಡಲೇ ಜಾರಿಯಾಗಲಿದ್ದು, ಡಿಸೆಂಬರ್ 31ರವರೆಗೆ ಅನ್ವಯವಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.