ಭೂಮಿಯತ್ತ ಅಪ್ಪಳಿಸಲಿದೆ ಸೌರ ಮಾರುತ: ಮೊಬೈಲ್ ಫೋನ್, ಜಿಪಿಎಸ್ ಸಿಗ್ನಲ್‌ಗೆ ಹಾನಿ ಸಾಧ್ಯತೆ

ಶಕ್ತಿಶಾಲಿ ಸೌರಮಾರುತವೊಂದು ಭೂಮಿಯತ್ತ ಹೊರಟಿದ್ದು, ಸೋಮವಾರ ಯಾವುದೇ ಕ್ಷಣದಲ್ಲಿಈ ಮಾರುತಗಳು ಭೂಮಿಯ ಆಯಸ್ಕಾಂತೀಯ ಕಕ್ಷೆಗೆ ಅಪ್ಪಳಿಸಲಿವೆ. ಹೀಗಾದರೆ ಮೊಬೈಲ್‌ ನೆಟ್‌ವರ್ಕ್ ಮತ್ತು ಜಿಪಿಎಸ್‌ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಳ್ಳಲಿದೆ

ಭೂಮಿಯತ್ತ ಅಪ್ಪಳಿಸಲಿದೆ ಸೌರ ಮಾರುತ: ಮೊಬೈಲ್ ಫೋನ್, ಜಿಪಿಎಸ್ ಸಿಗ್ನಲ್‌ಗೆ ಹಾನಿ ಸಾಧ್ಯತೆ
Linkup
ಹೊಸದಿಲ್ಲಿ: ಶಕ್ತಿಶಾಲಿ ಸೌರಮಾರುತವೊಂದು ಭೂಮಿಯತ್ತ ಹೊರಟಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಸೋಮವಾರ ಯಾವುದೇ ಕ್ಷಣದಲ್ಲಿಈ ಮಾರುತಗಳು ಭೂಮಿಯ ಆಯಸ್ಕಾಂತೀಯ ಕಕ್ಷೆಗೆ ಅಪ್ಪಳಿಸಲಿವೆ. ಹೀಗಾದರೆ ಮೊಬೈಲ್‌ ನೆಟ್‌ವರ್ಕ್ ಮತ್ತು ಜಿಪಿಎಸ್‌ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಳ್ಳಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸೌರ ಮಾರುತಗಳೆಂದರೆ ಸೂರ್ಯನಿಂದ ಹೊರಹೊಮ್ಮುವ ಶಕ್ತಿಶಾಲಿ ಕಣಗಳು ಹಾಗೂ ಪ್ಲಾಸ್ಮಾಕಣಗಳಾಗಿವೆ. ಸೂರ್ಯನ ವಾತಾವರಣದಲ್ಲಿ ರಂಧ್ರಗಳು ಆದಾಗ ಸೌರಮಾರುತಗಳು ಉದ್ಭವಿಸಿ, ಆಯಸ್ಕಾಂತೀಯ ಕಾರಣದಿಂದ ಭೂಮಿಯತ್ತಲೇ ಚಲಿಸುತ್ತವೆ. ಅತ್ಯಂತ ವೇಗವಾಗಿ ಚಲಿಸುವುದರಿಂದ ಇವನ್ನು 'ಸೌರ ಚಂಡಮಾರುತ' ಎಂದೂ ಕರೆಯುವುದುಂಟು. ನಾಸಾ ಅಂದಾಜಿಸಿರುವಂತೆ, ಇವುಗಳ ವೇಗ ಗಂಟೆಗೆ ಕನಿಷ್ಠ ಹತ್ತು ಲಕ್ಷ ಮೈಲು. ಕೆಲವು ಸಲ ವೇಗ ಹೆಚ್ಚಳವಾಗಲೂಬಹುದು. ''ಸದ್ಯ ಭೂಮಿಯತ್ತ ಹೊರಟಿರುವ ಸೌರಮಾರುತವು ಪ್ರತಿ ಸೆಕೆಂಡ್‌ಗೆ 500 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಇದು ಭೂಮಿಯ ಪ್ರವೇಶಿಸಿದಾಗ ಮೂಡುವ ಬೆಳಕಿನ ಚಿತ್ತಾರವನ್ನು ಉತ್ತರ ಮತ್ತು ದಕ್ಷಿಣ ಧ್ರುವಗಳ ಬಳಿ ವಾಸಿಸುತ್ತಿರುವವರು ಕಣ್ತುಂಬಿಕೊಳ್ಳಬಹುದು,'' ಎಂದು ಸ್ಪೇಸ್‌ವೆದರ್‌.ಕಾಮ್‌ ತಿಳಿಸಿದೆ. ಈ ಕಾರಣದಿಂದ ಭೂಮಿಯ ಹೊರವಲಯವು ಹೆಚ್ಚು ಬಿಸಿಯಾಗಬಹುದು. ಅಲ್ಲದೆ ಇವು ಉಪಗ್ರಹಗಳ ಮೇಲೆ ನೇರ ಪರಿಣಾಮ ಉಂಟುಮಾಡಬಹುದು. ಇದರಿಂದಾಗಿ ಜಿಪಿಎಸ್ ನೇವಿಗೇಷನ್, ಫೋನ್ ಸಿಗ್ನಲ್ ಮತ್ತು ಉಪಗ್ರಹ ಟಿವಿಗಳ ಕಾರ್ಯಾಚರಣೆಗೆ ಅಡ್ಡಿ ಉಂಟಾಗಬಹುದು. ಅಲ್ಲದೆ, ವಿದ್ಯುತ್ ತಂತಿಯಲ್ಲಿ ಪ್ರವಹಿಸುವ ಕರೆಂಟ್ ವೃದ್ಧಿಯಾಗಿ ಟ್ರಾನ್ಸ್‌ಫಾರ್ಮರ್‌ಗಳು ಸಿಡಿಯುವ ಅಪಾಯವೂ ಇದೆ ಎಂದು ಅದು ಹೇಳಿದೆ.