ಉತ್ತರಪ್ರದೇಶ: ಘರ್ಷಣೆ ವೇಳೆ ಪೊಲೀಸ್ ಅಧಿಕಾರಿಗೇ ಕಪಾಳಮೋಕ್ಷ ಮಾಡಿದ ಬಿಜೆಪಿ ಕಾರ್ಯಕರ್ತರು!
ಉತ್ತರಪ್ರದೇಶ: ಘರ್ಷಣೆ ವೇಳೆ ಪೊಲೀಸ್ ಅಧಿಕಾರಿಗೇ ಕಪಾಳಮೋಕ್ಷ ಮಾಡಿದ ಬಿಜೆಪಿ ಕಾರ್ಯಕರ್ತರು!
‘ಬಿಜೆಪಿ ಕಾರ್ಯಕರ್ತರೂ ಬಾಂಬ್ಗಳನ್ನು ತಂದಿದ್ದಾರೆ. ಪ್ರಶ್ನಿಸಿದ ನನಗೇ ಕೆನ್ನೆಗೆ ಹೊಡೆದಿದ್ದಾರೆ’ ಎಂದು ಇಟಾವಾ ಎಸಿಪಿ ಅವರಿಗೆ ಚುನಾವಣಾ ಭದ್ರತೆಗೆ ನಿಯೋಜಿತರಾಗಿದ್ದ ಅಧಿಕಾರಿ ಕರೆ ಮಾಡಿ ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಖನೌ: ಉತ್ತರ ಪ್ರದೇಶದಲ್ಲಿ ಬ್ಲಾಕ್ ಪಂಚಾಯಿತಿ ಪ್ರಮುಖರ ಆಯ್ಕೆಯಾಗಿ ಶನಿವಾರ ನಡೆದ ಚುನಾವಣೆ ವೇಳೆ ಉಂಟಾದ ಘರ್ಷಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
‘ಬಿಜೆಪಿ ಕಾರ್ಯಕರ್ತರೂ ಬಾಂಬ್ಗಳನ್ನು ತಂದಿದ್ದಾರೆ. ಪ್ರಶ್ನಿಸಿದ ನನಗೇ ಕೆನ್ನೆಗೆ ಹೊಡೆದಿದ್ದಾರೆ’ ಎಂದು ಇಟಾವಾ ಎಸಿಪಿ ಅವರಿಗೆ ಚುನಾವಣಾ ಭದ್ರತೆಗೆ ನಿಯೋಜಿತರಾಗಿದ್ದ ಅಧಿಕಾರಿ ಕರೆ ಮಾಡಿ ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರತಿಪಕ್ಷಗಳು ವ್ಯಾಪಕ ಖಂಡನೆ ವ್ಯಕ್ತಪಡಿಸಿವೆ.
ಘಟನೆ ಸಂಬಂಧ ಇಟಾವಾ ಪೊಲೀಸ್ ವಕ್ತಾರರು ಘಟನೆ ನಡೆದಿರುವುದನ್ನು ಖಚಿತಪಡಿಸಿದ್ದು, ಹಲ್ಲೆ ನಡೆಸಿದ ವ್ಯಕ್ತಿಯನ್ನು ಗುರುತಿಸಲಾಗಿದೆ. ಆತನೂ ಸೇರಿದಂತೆ ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.