ಛತ್ತೀಸ್‌ಗಢದಲ್ಲಿ ಲಾಕ್‌ಡೌನ್ ನಡುವಲ್ಲೂ ಮದ್ಯ ಹೋಮ್‌ ಡೆಲಿವರಿಗೆ ಅನುಮತಿ..!

​'ಮದ್ಯ ಡೋಮ್‌ ಡೆಲಿವರಿಯಂಥಾ ಸಣ್ಣಪುಟ್ಟ ಅನುಕೂಲಗಳನ್ನು ಕಲ್ಪಿಸಿಕೊಡದಿದ್ದರೆ, ಅಕ್ರಮ ಮದ್ಯ ಮಾರಾಟ ಹಾವಳಿ ಹೆಚ್ಚುತ್ತದೆ' - ಛತ್ತೀಸ್‌ಗಡ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಸರ್ಕಾರಿ ಅಧಿಕಾರಿಗಳು.

ಛತ್ತೀಸ್‌ಗಢದಲ್ಲಿ ಲಾಕ್‌ಡೌನ್ ನಡುವಲ್ಲೂ ಮದ್ಯ ಹೋಮ್‌ ಡೆಲಿವರಿಗೆ ಅನುಮತಿ..!
Linkup
ರಾಯಪುರ (): ಛತ್ತೀಸ್‌ಗಢದಲ್ಲಿ ಬಿಗಿಯಾದ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಮಾರಾಟಕ್ಕೆ ತುಸು ಸಡಿಲ ನೀತಿ ಅನುಸರಿಸಲಾಗುತ್ತಿದೆ. ಆಹಾರ ಮತ್ತು ಅಗತ್ಯ ವಸ್ತುಗಳ ರೀತಿ ಮದ್ಯದ ಹೋಮ್‌ ಡೆಲಿವರಿಗೆ ರಾಜ್ಯ ಸರಕಾರ ಅವಕಾಶ ನೀಡಿದೆ. ವಾರ ಕಾಲದ ನಿರ್ಬಂಧದಿಂದ ಮನೆಯಲ್ಲೇ ಉಳಿಯುವ ವ್ಯಸನಿಗಳು ಸರಕಾರದ ಈ ನೀತಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಪ್ರತಿಪಕ್ಷ ಬಿಜೆಪಿ ಮಾತ್ರ ಸರಕಾರದ ಈ ನೀತಿಯನ್ನು ತರಾಟೆಗೆ ತೆಗೆದುಕೊಂಡಿದೆ. 'ಜನರು ಆಹಾರ, ಔಷಧಿಗಾಗಿ ಪರಿತಪಿಸುತ್ತಿರುವಾಗ ರಾಜ್ಯ ಸರಕಾರ ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿ ಉದ್ಧಟತನ ಮೆರೆದಿದೆ. ಜನರ ನೆಮ್ಮದಿ ಬದಲು ಸರಕಾರಕ್ಕೆ ತನ್ನ ಲಾಭ ದೃಷ್ಟಿಯೇ ಮುಖ್ಯವಾಗಿದೆ' ಎಂದು ಬಿಜೆಪಿ ಟೀಕಿಸಿದೆ. ಜನ ಸಂಚಾರ, ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಿರುವ ಸಂದರ್ಭದಲ್ಲಿ ಲಿಕ್ಕರ್‌ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆನ್‌ಲೈನ್‌ ಮೂಲಕ ಆರ್ಡರ್‌ ಪಡೆದು ಹೋಮ್‌ ಡೆಲಿವರಿ ಕೊಡಬಹುದು ಎಂದು ರಾಜ್ಯ ಅಬಕಾರಿ ಸಚಿವಾಲಯ ಶನಿವಾರ ಅನುಮತಿ ನೀಡಿತ್ತು. 'ಇಂತಹ ಸಣ್ಣಪುಟ್ಟ ಅನುಕೂಲಗಳನ್ನು ಕಲ್ಪಿಸಿಕೊಡದಿದ್ದರೆ, ಅಕ್ರಮ ಮದ್ಯ ಮಾರಾಟ ಹಾವಳಿ ಹೆಚ್ಚುತ್ತದೆ' ಎಂದು ಅಧಿಕಾರಿಗಳು ಸರಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.