ಬೋಯಿಂಗ್‌ 737 ವಿಮಾನ ಹಾರಾಟಕ್ಕೆ ಮತ್ತೆ ಅನುಮತಿ ನೀಡಿದ ಕೇಂದ್ರ

ಬೋಯಿಂಗ್‌ ವಿಮಾನ ಹಾರಾಟ ಸುರಕ್ಷತೆ ವಿಷಯದಲ್ಲಿ ಹಲವು ಅನುಮಾನಗಳು ಕಾಡಿದ್ದ ಹಿನ್ನಲೆಯಲ್ಲಿ ಎರಡೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳ ವಾಣಿಜ್ಯ ಸಂಚಾರಕ್ಕೆ ಕೇಂದ್ರ ಸರಕಾರ ಮತ್ತೆ ಅನುಮತಿ ನೀಡಿದೆ.

ಬೋಯಿಂಗ್‌ 737 ವಿಮಾನ ಹಾರಾಟಕ್ಕೆ ಮತ್ತೆ ಅನುಮತಿ ನೀಡಿದ ಕೇಂದ್ರ
Linkup
ಹೊಸದಿಲ್ಲಿ: ತಾಂತ್ರಿಕ ದೋಷದ ಕಾರಣ ಕಳೆದ ಎರಡೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಮ್ಯಾಕ್ಸ್‌ ವಿಮಾನಗಳ ವಾಣಿಜ್ಯ ಸಂಚಾರಕ್ಕೆ ಮರು ಚಾಲನೆ ನೀಡಲಾಗಿದೆ. ಈ ಮೊದಲು ಬೋಯಿಂಗ್‌ ಹಾರಾಟ ಸುರಕ್ಷತೆ ವಿಷಯದಲ್ಲಿ ಹಲವು ಅನುಮಾನಗಳು ಕಾಡಿದ್ದವು. 2019ರ ಮಾರ್ಚ್ 10ರಂದು ಇಥಿಯೋಪಿಯನ್‌ ಏರ್‌ಲೈನ್ಸ್‌ 737 ಮ್ಯಾಕ್ಸ್‌ ವಿಮಾನ ಆಡಿಸ್‌ ಅಬಬಾ ಸಮೀಪ ಪತನಗೊಂಡಿತ್ತು. ನಾಲ್ವರು ಭಾರತೀಯರು ಸೇರಿ 157 ಮಂದಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಬೋಯಿಂಗ್‌ ವಿಮಾನಗಳ ಸಂಚಾರವನ್ನು ಭಾರತೀಯ ವಾಯುಯಾನ ನಿರ್ದೇಶನಾಲಯ ಸ್ಥಗಿತಗೊಳಿಸಿತ್ತು. ಸದ್ಯ ಭಾರತದಲ್ಲಿ ಸ್ಪೈಸ್‌ಜೆಟ್‌ ಏರ್‌ಲೈನ್‌ ಬಳಿ ಮಾತ್ರ ಬೋಯಿಂಗ್‌ ಮ್ಯಾಕ್ಸ್‌ ವಿಮಾನಗಳಿವೆ. ಕಡಿಮೆ ದರದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವ ವಿಮಾನ ಎಂದೇ ಇದು ಗುರುತಿಸಿಕೊಂಡಿದೆ. "ಕೆಲವು ನಿರ್ಬಂಧಗಳೊಂದಿಗೆ ಸೆಪ್ಟೆಂಬರ್‌ನಿಂದ ಬೋಯಿಂಗ್‌ ಹಾರಾಟಕ್ಕೆ ಅನುಮತಿ ನೀಡಲಾಗಿದೆ," ಎಂದು ಡಿಜಿಸಿಎ ತಿಳಿಸಿದೆ. ವಿಮಾನದಲ್ಲಿ ಇದ್ದ ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಿದ ಬಳಿಕವೇ ಹಾರಾಟ ಅನುಮತಿ ನೀಡಲಾಗಿದೆ. 2019ರ ಮಾರ್ಚ್ನಿಂದ ಬೋಯಿಂಗ್‌ ನಿರ್ಮಾಣ ಕಂಪನಿ ದೋಷ ಸರಿಪಡಿಸುವ ಕೆಲಸ ಮಾಡಿದೆ. ಅದು ಅಂತಿಮವಾಗಿ ಪಕ್ಕಾ ಆದ ಬಳಿಕವೇ ಹಸಿರು ನಿಶಾನೆ ತೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿಇಥಿಯೋಪಿಯಾ, ನವೆಂಬರ್‌ನಲ್ಲಿಅಮೆರಿಕಾ ವಾಯುಯಾನ ಸಂಸ್ಥೆಗಳು ಬೋಯಿಂಗ್‌ ಹಾರಾಟಕ್ಕೆ ಅನುಮತಿಸಿದ್ದವು. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ34 ಬೋಯಿಂಗ್‌ ಸಂಸ್ಥೆಗಳಿದ್ದು, 1.22 ಲಕ್ಷ ವಿಮಾನಗಳನ್ನು ನಿರ್ಮಿಸಲಾಗಿದೆ.