ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ಇ-ಪೋರ್ಟಲ್‌ ಆರಂಭಿಸಿದ ಕೇಂದ್ರ

ದೇಶದಲ್ಲಿ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರಿದ್ದು, ಇವರಲ್ಲಿ ಕಟ್ಟಡ ಕೆಲಸಗಾರರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸಗಾರರು ಸೇರಿದ್ದಾರೆ. ಇವರೆಲ್ಲರನ್ನು ಇ-ಪೋರ್ಟಲ್‌ನಡಿ ನೋಂದಾಯಿಸಿಕೊಂಡು, ಕುಂದುಕೊರತೆಗಳನ್ನು ಸರಿಪಡಿಸುವುದು ಸರಕಾರದ ಗುರಿಯಾಗಿದೆ.

ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ಇ-ಪೋರ್ಟಲ್‌ ಆರಂಭಿಸಿದ ಕೇಂದ್ರ
Linkup
ಹೊಸದಿಲ್ಲಿ: ಅಸಂಘಟಿತ ವಲಯದ ಕಾರ್ಮಿಕರ ಕುರಿತ ಸಮಗ್ರ ಮಾಹಿತಿ ಸಂಗ್ರಹಕ್ಕಾಗಿ ಕೇಂದ್ರ ಸರಕಾರ ಗುರುವಾರ '' ಪೋರ್ಟಲ್‌ಗೆ ಚಾಲನೆ ನೀಡಿದೆ. ದೇಶದಲ್ಲಿ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರಿದ್ದಾರೆ. ಕಟ್ಟಡ ಕೆಲಸಗಾರರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸಗಾರರು ಅಸಂಘಟಿತ ವಲಯದ ಪ್ರಮುಖ ಪಾಲುದಾರರಾಗಿದ್ದಾರೆ. ಇವರೆಲ್ಲರನ್ನು ಇ-ಪೋರ್ಟಲ್‌ನಡಿ ನೋಂದಾಯಿಸಿಕೊಂಡು, ಕುಂದುಕೊರತೆಗಳನ್ನು ಸರಿಪಡಿಸುವುದು ಸರಕಾರದ ಗುರಿಯಾಗಿದೆ. ನೋಂದಣಿ ಕಾರ್ಯ ಗುರುವಾರದಿಂದಲೇ ಆರಂಭಗೊಂಡಿದೆ. ''ಬೃಹತ್‌ ಅಸಂಘಟಿತ ದುಡಿಯುವ ವರ್ಗವನ್ನು ಒಂದು ವೇದಿಕೆಯಡಿ ತರುತ್ತಿರುವುದು ಮಹತ್ವದ ಕಾರ್ಯ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರಂಭಿಸಿರುವ ಅನೇಕ ಯೋಜನೆಗಳ ಲಾಭ ತಿಳಿವಳಿಕೆಯ ಕೊರತೆಯಿಂದ ಇವರಿಗೆ ಲಭಿಸುತ್ತಿಲ್ಲ. ಈ ಕೊರತೆಯನ್ನು ನೀಗಿಸಿ, ಅವರಿಗೆ ಯೋಜನೆಗಳ ಲಾಭ ದೊರಕಿಸಿಕೊಡುವುದು ಕೂಡ ಈ ಪೋರ್ಟಲ್‌ನ ಆಶಯವಾಗಿದೆ,'' ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್‌ ಹೇಳಿದರು. ಇ-ಶ್ರಮ್‌ ಪೋರ್ಟಲ್‌ ಅಡಿಯಲ್ಲಿ ನೋಂದಣಿ ಪಡೆಯುವ ಪ್ರತಿ ಕಾರ್ಮಿಕನಿಗೂ 2 ಲಕ್ಷ ರೂ. ಅಪಘಾತ ವಿಮೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಅನುಮತಿ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು. ನೋಂದಣಿ ಸಂಬಂಧಿಸಿದಂತೆ ನೆರವು ಬಯಸುವವರಿಗಾಗಿ 14434 ಟೋಲ್‌ ಫ್ರೀ ನಂಬರ್‌ ಆರಂಭಿಸಲಾಗಿದೆ ಎಂದು ತಿಳಿಸಿದರು.