ಬಿಜೆಪಿ ನಾಯಕರಿಗೆ ಜನರ ಜೀವಕ್ಕಿಂತ ಲಸಿಕೆ ಮಾರಾಟವೇ ಮುಖ್ಯವಾಗಿದೆ! ಆಮ್‌ ಆದ್ಮಿ ಪಕ್ಷ ಆರೋಪ

ಬಿಜೆಪಿ ನಾಯಕರಿಗೆ ಜನರ ಜೀವಕ್ಕಿಂತ ಲಸಿಕೆ ಮಾರಾಟವೇ ಮುಖ್ಯವಾಗಿದೆ! ಎಂದು ಆಮ್‌ ಆದ್ಮಿ ಪಕ್ಷ ಆರೋಪ ಮಾಡಿದೆ. ಲಸಿಕೆ ವಿಚಾರದಲ್ಲಿ ಜನರ ಹೊಟ್ಟೆಗೆ ಹೊಡೆದು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿ ನಾಯಕರಿಗೆ ಜನರ ಜೀವಕ್ಕಿಂತ ಲಸಿಕೆ ಮಾರಾಟವೇ ಮುಖ್ಯವಾಗಿದೆ! ಆಮ್‌ ಆದ್ಮಿ ಪಕ್ಷ ಆರೋಪ
Linkup
ಬೆಂಗಳೂರು: ಬಿಜೆಪಿ ನಾಯಕರಿಗೆ ಜನರ ಜೀವವನ್ನು ಉಳಿಸುವ ಕಿಂಚಿತ್ತೂ ಉದ್ದೇಶವಿಲ್ಲ. ಹೀಗಾಗಿ ಜನತೆಗೆ ನೀಡಬೇಕಾದ ಲಸಿಕೆಯಲ್ಲಿಯೂ ರಾಜಕಾರಣ ಮಾಡುತ್ತಿದೆ. ಲಸಿಕೆಯನ್ನು ಮತವಾಗಿ ಪರಿವರ್ತನೆ ಮಾಡುತ್ತಿದೆ. ಒಂದು ಲಸಿಕೆಗೆ ಒಂದು ವೋಟು ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು. ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿವಿ ರಾಮನ್ ನಗರ ಕ್ಷೇತ್ರದ ಶಾಸಕ ರಘು ಭುವನೇಶ್ವರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕಿದ್ದ ಲಸಿಕಾ ಕಾರ್ಯಕ್ರಮವನ್ನು ರದ್ದುಗೊಳಿಸಿ, ಸಮೀಪದ ಕಲ್ಯಾಣ ಮಂಟಪವೊಂದರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅವರ ಸಂಬಂಧಿಕರಿಗೆ ಲಸಿಕೆ ಹಾಕಿದ್ದಾರೆ. ಇದಕ್ಕಿಂತ ಲಜ್ಜೆಗೆಟ್ಟ ನಡೆ ಬೇರೇನಿದೆ? ಜನರ ಹೊಟ್ಟೆಗೆ ಹೊಡೆದು ಬಿಜೆಪಿ ರಾಜಕೀಯ ಮಾಡುತ್ತಿದ್ದೆ ಎಂದು ಆರೋಪಿಸಿದರು. ಭುವನೇಶ್ವರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹೆಸರು ನೊಂದಾಯಿಸಿಕೊಂಡು ಬಂದವರನ್ನು ಲಸಿಕೆ ಇಲ್ಲ ಎಂದು ವಾಪಸ್ ಕಳಿಸಲಾಗಿದೆ. ಡಿ.ಆರ್.ಡಿ.ಒ ಉದ್ಯೋಗಿಗಳಿಗೆ ಕೂಡ ಲಸಿಕೆ ಸಿಕ್ಕಿಲ್ಲ. ಸ್ವತಃ ಶಾಸಕರ ಒಡೆತನದ ತಿಪ್ಪಸಂದ್ರದ ಓಂ ಶಕ್ತಿ ಕಲ್ಯಾಣ ಮಂಟಪದಲ್ಲಿ ಉಚಿತ ಲಸಿಕೆ ನೀಡುತ್ತೇವೆ ಎಂದು ಜನತೆಯನ್ನು ನಂಬಿಸಿ ಅವರನ್ನು ವಾಪಸ್ ಕಳಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಬಂದವರನ್ನು ಬಿಜೆಪಿ ಕಾರ್ಯಕರ್ತರು ತಡೆದು ವಿಚಾರಿಸಿ ಪ್ರಶ್ನಿಸಿ ತಮ್ಮವರಿಗೆ ಮಾತ್ರ ಲಸಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರು ತಮ್ಮ ಆಪ್ತರಿಗೆ, ಸಂಬಂಧಿಗಳಿಗೆ ಕರೆದು ಕರೆದು ಲಸಿಕೆ ನೀಡುತ್ತಿದ್ದಾರೆ. ಉಚಿತ ಲಸಿಕೆ ನೀಡುತ್ತಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಜನತೆ ಲಸಿಕೆ ಸಿಗದೆ ವಾಪಸ್ ಹೋಗುತ್ತಿದ್ದಾರೆ. ಬಿಜೆಪಿಯವರಿಗೆ ಲಸಿಕೆ ಎಂದರೆ ವೋಟು. ಅವರಿಗೆ ಜನತೆಯ ಪ್ರಾಣ ಕಾಣಿಸುತ್ತಿಲ್ಲ. ಅವರಿಗೆ ಜನತೆಯ ಜೀವ ಉಳಿಸುವ ಉದ್ದೇಶವಿಲ್ಲ. ನಿರ್ದಯವಾಗಿ ಲಸಿಕೆಯನ್ನು ಮಾರಾಟ ಮಾಡುತ್ತಿದ್ದಾರೆ. ತಮ್ಮವರಿಗೆ ಮಾತ್ರ ಲಸಿಕೆ ನೀಡುತ್ತಿದ್ದಾರೆ. ವೋಟಿಗಾಗಿ ಲಸಿಕೆ ಮಾರಾಟ ಮಾಡುವುದನ್ನು ನಿಲ್ಲಿಸಿ. ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗುವ ಹಾಗೆ ಮಾಡಿ. ಈ ಮೂಲಕ ಜನತೆಯ ಜೀವವನ್ನು ಉಳಿಸಿ ಎಂದು ಮೋಹನ್ ದಾಸರಿ ಆಗ್ರಹಿಸಿದರು.