'ಪ್ರಕಾಶ್‌ ರೈ ಸ್ಥಳೀಯರಲ್ಲ' ಎನ್ನುವ ಟಾಲಿವುಡ್ ಮಂದಿಯ ಮಾತಿಗೆ 'ಸ್ಟಾರ್' ನಿರ್ಮಾಪಕ ಗರಂ!

ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​ ಚುನಾವಣೆಗೆ ನಟ ಪ್ರಕಾಶ್ ರೈ ಸ್ಪರ್ಧಿಸಲಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ, ಅವರು 'ಸ್ಥಳೀಯರಲ್ಲ' ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಸ್ಟಾರ್ ನಿರ್ಮಾಪಕ ಬಂಡ್ಲ ಗಣೇಶ್ ಗರಂ ಆಗಿದ್ದಾರೆ.

'ಪ್ರಕಾಶ್‌ ರೈ ಸ್ಥಳೀಯರಲ್ಲ' ಎನ್ನುವ ಟಾಲಿವುಡ್ ಮಂದಿಯ ಮಾತಿಗೆ 'ಸ್ಟಾರ್' ನಿರ್ಮಾಪಕ ಗರಂ!
Linkup
ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆಗೆ ಸ್ಪರ್ಧಿಸಲು ನಟ ಅವರು ಮುಂದಾಗಿದ್ದು, ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮದೇ 26 ಜನರ ಒಂದು ತಂಡ ಮಾಡಿಕೊಂಡು ಚುನಾವಣೆಗೆ ನಟ ಪ್ರಕಾಶ್ ರೈ ಸ್ಪರ್ಧಿಸುತ್ತಿದ್ದಾರೆ. ಆದರೆ, ಕೆಲ ತೆಲುಗು ಕಲಾವಿದರು ಪ್ರಕಾಶ್ ವಿರುದ್ಧ ಮಾತನಾಡಿದ್ದಾರೆ. 'ಪ್ರಕಾಶ್ ಮೂಲತಃ ಸ್ಥಳೀಯರಲ್ಲ' ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಪ್ರಕಾಶ್ ರೈ ಅವರಿಗೂ ಕೂಡ ಅಲ್ಲಿ ಬೆಂಬಲ ಸಿಕ್ಕಿದ್ದು, ಒಂದಷ್ಟು ಮಂದಿ ಪ್ರಕಾಶ್ ಪರವಾಗಿ ಹೇಳಿಕೆ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಟ/ನಿರ್ಮಾಪಕ ಬಂಡ್ಲ ಗಣೇಶ್, ಪ್ರಕಾಶ್ ರೈ ವಿರುದ್ಧ ಮಾತನಾಡಿದವರ ಮೇಲೆ ಕಿಡಿಕಾರಿದ್ದಾರೆ. ಪ್ರಕಾಶ್‌ ಹೊರಗಿನವರು ಅಂತ ಹೇಳೋಕೆ ಸಾಧ್ಯ? 'ಪ್ರಕಾಶ್‌ ರಾಜ್ ಅವರು ಈ ತೆಲುಗು ಚಿತ್ರರಂಗದಲ್ಲಿ 23 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ನಾವು ಹೇಗೆ ಹೊರಗಿನವರು ಅಂತ ಹೇಳೋಕೆ ಸಾಧ್ಯ? ಶಾದ್‌ನಗರ್‌ ಅಲ್ಲಿ ಅವರ ಸ್ವಂತ ಜಮೀನಿದೆ. ಅವರು ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಜೊತೆಗೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂಥ ಸಮಯದಲ್ಲಿ ಅವರು ಸ್ಥಳೀಯರಾ? ಅಥವಾ ಸ್ಥಳೀಯೇತರರಾ ಎಂದು ಚರ್ಚಿಸುವ ಅವಶ್ಯಕತೆಯೇ ಇಲ್ಲ' ಎಂದು ಖಡಕ್ ಆಗಿ ಹೇಳಿದ್ದಾರೆ ಗಣೇಶ್‌. ಪ್ರಭಾಸ್‌ ಹೊರಗೆ ಮಿಂಚುತ್ತಿಲ್ಲವೇ? ಅವರ ಕುರಿತು ಮಾತನಾಡುವಾಗ ಪ್ರಭಾಸ್, ರಾಜಮೌಳಿ ಅವರನ್ನು ಉದಾಹರಣೆ ನೀಡಿದ್ದಾರೆ ಗಣೇಶ್. 'ಪ್ರಭಾಸ್ ಹುಟ್ಟಿದ್ದು ಇಲ್ಲಿ. ಆದರೆ, ಇಂಡಿಯನ್ ಸಿನಿಮಾ ಇಂಡಸ್ಟ್ರೀಯನ್ನೇ ಆಳುತ್ತಿಲ್ಲವೇ? ರಾಜಮೌಳಿಗೆ ಹಾಲಿವುಡ್‌ನಿಂದಲೇ ಆಫರ್ಸ್‌ ಬರುತ್ತಿಲ್ಲವೇ' ಎಂದು ಪ್ರಶ್ನೆ ಮಾಡಿದ್ದಾರೆ ಬಂಡ್ಲ ಗಣೇಶ್. ಇದೇ ವೇಳೆ ಮಾಧ್ಯಮಗಳಲ್ಲಿ ಒಂದು ವಿನಂತಿಯನ್ನು ಮಾಡಿಕೊಂಡಿರುವ ಬಂಡ್ಲ ಗಣೇಶ್, 'ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆಗೆ ಸಂಬಂಧಿಸಿದಂತೆ ನನಗೆ ಕರೆ ಮಾಡಬೇಡಿ, ಬೈಟ್ ಕೇಳಬೇಡಿ, ಸಂದರ್ಶನ ಮಾಡಬೇಡಿ.. ಯಾಕೆಂದರೆ, ನನಗೆ ಮೈಕ್ ಸಿಕ್ಕರೆ, ನನ್ನನ್ನು ನಾನು ನಿಯಂತ್ರಿಸಿಕೊಳ್ಳಲು ಆಗುವುದಿಲ್ಲ. ಏನಾದರೂ ಮಾತಾನಾಡಿಬಿಡುತ್ತೇನೆ. ಆನಂತರ ಅದು ವಿವಾದವಾಗುತ್ತದೆ' ಎಂದು ಹೇಳಿದ್ದಾರೆ. ಸದ್ಯ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ನ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ ಪ್ರಬಲ ಸ್ಪರ್ಧಿ ಆಗಿದ್ದಾರೆ. ಅವರ ಎದುರು ಹಿರಿಯ ನಟ ಮೋಹನ್ ಬಾಬು ಪುತ್ರ ಮಂಚು ವಿಷ್ಣು ಕೂಡ ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯು ಮಾರ್ಚ್‌ನಲ್ಲೇ ನಡೆಯಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಸೆಪ್ಟೆಂಬರ್‌ಗೆ ಮುಂದೂಡಿಕೆ ಆಗಿದೆ. ಆದರೆ, ಈಗಲೇ ಚುನಾವಣೆಗೆ ಭರ್ಜರಿ ತಯಾರಿ ಶುರುವಾಗಿದೆ.