ಪುತ್ರನಿಗೆ ನಾಮಕರಣ ಮಾಡಿದ ನಯನ: ಮುದ್ದು ಮಗನ ಹೆಸರೇನು?

ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನಯನ ಪುಟ್ಟಸ್ವಾಮಿ ಇದೀಗ ತಮ್ಮ ಪುತ್ರನಿಗೆ ನಾಮಕರಣ ಮಾಡಿದ್ದಾರೆ. ಮುದ್ದು ಮಗನಿಗೆ 'ತಾರುಷ್ ಕೃಷ್ಣ' ಎಂದು ನಯನ ಪುಟ್ಟಸ್ವಾಮಿ ಹೆಸರಿಟ್ಟಿದ್ದಾರೆ.

ಪುತ್ರನಿಗೆ ನಾಮಕರಣ ಮಾಡಿದ ನಯನ: ಮುದ್ದು ಮಗನ ಹೆಸರೇನು?
Linkup
ಕನ್ನಡ ನಟಿ, 'ಬಿಗ್ ಬಾಸ್' ಸ್ಪರ್ಧಿ ತಾಯ್ತನದ ಖುಷಿಯಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನಯನ ಪುಟ್ಟಸ್ವಾಮಿ ಇದೀಗ ತಮ್ಮ ಪುತ್ರನಿಗೆ ನಾಮಕರಣ ಮಾಡಿದ್ದಾರೆ. ಮುದ್ದು ಮಗನಿಗೆ 'ತಾರುಷ್ ಕೃಷ್ಣ' ಎಂದು ನಯನ ಪುಟ್ಟಸ್ವಾಮಿ ಹೆಸರಿಟ್ಟಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ ನಯನ ಪುಟ್ಟಸ್ವಾಮಿ ''ನಮ್ಮ ಮಗನಿಗೆ ನಾವು ಹೆಸರಿಟ್ಟಿದ್ದೇವೆ. ಹೆಸರು - ತಾರುಷ್ ಕೃಷ್ಣ'' ಎಂದು ಇನ್ಸ್ಟಾಗ್ರಾಮ್‌ನಲ್ಲಿ ನಯನ ಪುಟ್ಟಸ್ವಾಮಿ ರಿವೀಲ್ ಮಾಡಿದ್ದಾರೆ. ಜೊತೆಗೆ ಕೆಲ ಫೋಟೋಗಳನ್ನೂ ನಯನ ಪುಟ್ಟಸ್ವಾಮಿ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ನಯನ ಪುಟ್ಟಸ್ವಾಮಿ 2018ರ ಜೂನ್ ತಿಂಗಳಿನಲ್ಲಿ ನಯನ ಪುಟ್ಟಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಚರಣ್ ತೇಜ್ ಜೊತೆಗೆ ನಯನ ಪುಟ್ಟಸ್ವಾಮಿ ವಿವಾಹ ಮಹೋತ್ಸವ ನಡೆದಿತ್ತು. ವಿವಾಹವಾದ ನಂತರ ಅಮೇರಿಕಾದಲ್ಲಿ ನಯನ ಪುಟ್ಟಸ್ವಾಮಿ-ಚರಣ್ ತೇಜ್ ದಂಪತಿ ನೆಲೆಸಿದರು. ಕಳೆದ ತಿಂಗಳಷ್ಟೇ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನಯನ ಪುಟ್ಟಸ್ವಾಮಿ, ಜೂನ್ ತಿಂಗಳಿನಲ್ಲೇ ಗಂಡು ಮಗುವಿಗೆ ತಾಯಿಯಾದರು. ಅಮೇರಿಕಾದ ಪೆನ್ಸಿಲ್ವೇನಿಯಾದ ಟೆಂಪಲ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂದ್ಹಾಗೆ, ನಯನ ಪುಟ್ಟಸ್ವಾಮಿ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿದ್ದರು. ಬಳಿಕ 'ಸಿದ್ದಾರ್ಥ', 'ಪವರ್', 'ಅಲೆಮಾರಿ' ಚಿತ್ರಗಳಲ್ಲಿ ನಯನ ಪುಟ್ಟಸ್ವಾಮಿ ಅಭಿನಯಿಸಿದರು. 'ಬಿಗ್ ಬಾಸ್ ಕನ್ನಡ 6' ಕಾರ್ಯಕ್ರಮದಲ್ಲೂ ನಯನ ಪುಟ್ಟಸ್ವಾಮಿ ಸ್ಪರ್ಧಿಸಿದ್ದರು. ಮದುವೆಯಾದ ಬಳಿಕ ಚಿತ್ರರಂಗದಿಂದ ನಯನ ಪುಟ್ಟಸ್ವಾಮಿ ದೂರ ಉಳಿದಿದ್ದಾರೆ.